• Home
  • »
  • News
  • »
  • vijayapura
  • »
  • Vijayapura: ಸಹಜ ಹೆರಿಗೆಗೆ ಫೇಮಸ್ ಈ ಸರ್ಕಾರಿ ಆಸ್ಪತ್ರೆ! ಗರ್ಭಿಣಿಯರು ಎಲ್ಲೆಲ್ಲಿಂದ್ಲೋ ಹುಡುಕಿ ಬರ್ತಾರೆ

Vijayapura: ಸಹಜ ಹೆರಿಗೆಗೆ ಫೇಮಸ್ ಈ ಸರ್ಕಾರಿ ಆಸ್ಪತ್ರೆ! ಗರ್ಭಿಣಿಯರು ಎಲ್ಲೆಲ್ಲಿಂದ್ಲೋ ಹುಡುಕಿ ಬರ್ತಾರೆ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಈ ಆಸ್ಪತ್ರೆಯನ್ನ ಹುಡುಕಿಕೊಂಡು ಪ್ರತಿದಿನ ನೂರಾರು ಗರ್ಭಿಣಿಯರು ಬೇರೆಬೇರೆ ಜಿಲ್ಲೆಗಳಿಂದ ಬರ್ತಾರೆ. ಅವರೆಲ್ಲರಿಗೂ ಈ ಸರ್ಕಾರಿ ಆಸ್ಪತ್ರೆಲಿ ಒಂದು ಪೈಸೆ ಖರ್ಚಿಲ್ಲದೇ ಸಹಜ ಹೆರಿಗೆ ಆಗ್ತದೆ ಎಂಬ ಒಂದೇ ಭರವಸೆ!

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂದ್ರೆ ಅಸಡ್ಡೆ ಇದ್ಯಾ? ಹಾಗಾದ್ರೆ ಈ ಆಸ್ಪತ್ರೆಯನ್ನೊಮ್ಮೆ ನೋಡಿ, ಯಾವ ಪ್ರೈವೇಟ್ ಹಾಸ್ಪಿಟಲ್​ಗೂ (Private Hospital) ಕಡಿಮೆ ಇಲ್ಲ! ಅದ್ರಲ್ಲೂ ಗರ್ಭಿಣಿಯರ ಪಾಲಿನ ಸಂಜೀವಿನಿ ಅಂತಾನೇ ಫೇಮಸ್ ಆಗಿದೆ. ಸಿಸೇರಿಯನ್ ಭಯ ಇದ್ದವರಿಗಂತೂ ಭಯ ನಿವಾರಿಸೋ ಆಪ್ತ ತಾಣವಾಗಿದೆ. ಅರೇ! ಎಲ್ಲಿದೆ ಈ ಸರ್ಕಾರಿ ಆಸ್ಪತ್ರೆ ಅಂದ್ರಾ? ಇತ್ತೀಚಿನ ದಿನಗಳಲ್ಲಿ ನಾರ್ಮಲ್ ಡೆಲಿವರಿ ಅನ್ನೋದು ಅಪರೂಪವಾಗಿದೆ. ಆದ್ರೆ ವಿಜಯಪುರ ಜಿಲ್ಲೆಯ (Vijayapura News) ಮುದ್ದೇಬಿಹಾಳದ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ (Kalagi Primary Health Centre) ಸಿಸೇರಿಯನ್ ಅನ್ನೋ ಮಾತೇ ಕಡಿಮೆ.


    ಇಲ್ಲೇನಿದ್ರೂ ಸಹಜ ಹೆರಿಗೆ ಶತಸಿದ್ಧ ಅಂತಾರೆ ವಿಜಯಪುರದ ಜನರು. ಹೀಗಾಗಿ ಈ ಆಸ್ಪತ್ರೆಯನ್ನ ಹುಡುಕಿಕೊಂಡು ಪ್ರತಿದಿನ ನೂರಾರು ಗರ್ಭಿಣಿಯರು ಬೇರೆಬೇರೆ ಜಿಲ್ಲೆಗಳಿಂದ ಬರ್ತಾರೆ. ಅವರೆಲ್ಲರಿಗೂ ಈ ಸರ್ಕಾರಿ ಆಸ್ಪತ್ರೆಲಿ ಒಂದು ಪೈಸೆ ಖರ್ಚಿಲ್ಲದೇ ಸಹಜ ಹೆರಿಗೆ ಆಗ್ತದೆ ಎಂಬ ಒಂದೇ ಭರವಸೆ!


    ಈ ಡಾಕ್ಟರ್ ಬಂದ್ಮೇಲೆ ಒಳ್ಳೆ ಸೇವೆ ಸಿಗುತ್ತಿದೆಯಂತೆ
    ವಿಜಯಪುರ, ಬಾಗಲಕೋಟೆ ಸೇರಿದಂತೆ ಯಾದಗಿರಿ ಜಿಲ್ಲೆಯ ನಾರಾಯಣಪುರದಿಂದಲೂ ಗರ್ಭಿಣಿ ಮಹಿಳೆಯರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಪ್ರಸೂತಿ ತಜ್ಞ ಡಾ.ರಂಗನಾಥ ಎಸ್. ವೈದ್ಯ ಈ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸ್ತಿದ್ದಾರೆ. ಇವರು ಪ್ರತಿ ರೋಗಿಗಳಿಗೆ ನೀಡುವ ಕಾಳಜಿ, ಸಲಹೆ ಜೊತೆಗೆ ಗುಣಮಟ್ಟದ ಸೇವೆಯನ್ನ ಗರ್ಭಿಣಿಯರ ಕುಟುಂಬಕ್ಕೂ ನೆಮ್ಮದಿ ನೀಡುವಂತಿದೆ.


    ಇದನ್ನೂ ಓದಿ:God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!


    ಸ್ಥಳೀಯರಾದ ಸೋಮಪ್ಪ ಸಜ್ಜನ್ ಎಂಬುವವರು ಈ ಆಸ್ಪತ್ರೆಯ ಕಟ್ಟಡ ಕಟ್ಟೋಕೆ ಮೂರು ಎಕರೆ ಜಾಗವನ್ನ ಉಚಿತವಾಗಿ ನೀಡಿದ್ರಂತೆ. ಗ್ರಾಮದ ಜನರು ಆಸ್ಪತ್ರೆಗೆಂದು ಬೇರೆಡೆ ತೆರಳಬಾರದು, ಊರಲ್ಲೇ ಚಿಕಿತ್ಸೆ ದೊರೆಯುವಂತಾಗಬೇಕು ಎಂಬ ಅವರ ಉದ್ದೇಶ ಈಡೇರಿದೆ.


    ಇದನ್ನೂ ಓದಿ: North Karnataka: ಉತ್ತರ ಕರ್ನಾಟಕ ಮೊದಲು ಹೇಗಿತ್ತು? ತಿಳಿಯೋಕೆ ಇಲ್ಲಿಗೆ ಬರ್ಲೇಬೇಕು!


    ಸದ್ಯ ಈ ಆಸ್ಪತ್ರೆ ಸುತ್ತ ಹಸಿರು ಉತ್ತಮವಾದ ವಾತಾವರಣವಿದೆ. ಮರಗಳ ಕೆಳಗಡೆ ನೂರಾರು ರೋಗಿಗಳಿಗೆ ಆಶ್ರಯ ಪಡೆಯಲು ಆಸನಗಳಿವೆ. 2018-2019 ರಲ್ಲಿ ಕಾಯಕಲ್ಪ ಪ್ರಶಸ್ತಿಯೂ ಈ ಆಸ್ಪತ್ರೆಯನ್ನ ಅರಸಿ ಬಂದಿದೆ.


    ಆಸ್ಪತ್ರೆ ಚೆನ್ನಾಗಿದೆ, ಆದ್ರೆ..
    ಆಸ್ಪತ್ರೆಯೇನೋ ಚೆನ್ನಾಗಿದೆ. ಆದ್ರೆ ಸರ್ಕಾರಿ ಆಸ್ಪತ್ರೆ ತೆರಳುವ ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟಿದೆ. ಸಾಕಷ್ಟು ಗರ್ಭಿಣಿ ಮಹಿಳೆಯರನ್ನ ಈ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆಯೇ ಹೆರಿಗೆಗಳಾಗಿವೆ. ಒಳ್ಳೆಯ ರಸ್ತೆಯೊಂದಾದ್ರೆ ಕಾಳಗಿ ಸಮುದಾಯ ಆರೋಗ್ಯ ಕೇಂದ್ರವನ್ನೇ ನಂಬಿರುವ ಎಲ್ರಿಗೂ ಸಹಾಯವಾಗುತ್ತಾರೆ ಅಂತರೆ ಸ್ಥಳೀಯರು.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: