• Home
 • »
 • News
 • »
 • vijayapura
 • »
 • Vijayapura: ನಷ್ಟವಾಯ್ತೆಂದು ಎದೆಗುಂದಲಿಲ್ಲ ಈ ರೈತ, ಚೆಂಡು ಹೂವಿನಿಂದ ಗೊಬ್ಬರ!

Vijayapura: ನಷ್ಟವಾಯ್ತೆಂದು ಎದೆಗುಂದಲಿಲ್ಲ ಈ ರೈತ, ಚೆಂಡು ಹೂವಿನಿಂದ ಗೊಬ್ಬರ!

ಚೆಂಡು ಹೂವಿನಿಂದ ಗೊಬ್ಬರ!

"ಚೆಂಡು ಹೂವಿನಿಂದ ಗೊಬ್ಬರ!"

Vijayapura: ಬೆಳೆಗೆ ಬೆಲೆ ಸಿಗದ ಕಾರಣ ವಿಜಯಪುರದ ರೈತರು ಚೆಂಡು ಹೂವನ್ನು ತಿಪ್ಪೆಗೆ ತಂದು ಸುರಿದಿದ್ದಾರೆ. ಇಷ್ಟೊಂದು ರಾಶಿ ಚೆಂಡು ಹೂ ಭರ್ಜರಿ ಮಾರಾಟವಾಗಿ ಲಕ್ಷಾಂತರ ರೂಪಾಯಿ ಗಳಿಸೋ ಕನಸು ಕಂಡಿದ್ದ ವಿಜಯಪುರದ ನಿಡಗುಂದಿಯ ಯುವಭರತ ಎಂಬವರೇ ಈ ರೀತಿಯಾಗಿ ಹೂವಿನ ರಾಶಿಯನ್ನು ತಿಪ್ಪೆಗೆಸೆದಿದ್ದಾರೆ.

ಮುಂದೆ ಓದಿ ...
 • News18 Kannada
 • Last Updated :
 • Bijapur, India
 • Share this:

  ವಿಜಯಪುರ: ಮಣ್ಣಿನ ಮೇಲೆ ರಾಶಿರಾಶಿ ಚೆಂಡು ಹೂ (Marigold), ಅಲ್ಲೊಂದು ಇಲ್ಲೊಂದು ಬದನೆಕಾಯಿ ರಾಶಿ. ಹೂವನ್ನ ಮಣ್ಣಲ್ಲಿ ಬೆಳೆಯೋದನ್ನ ನೋಡಿದ್ದೀವಿ. ಆದ್ರೆ ಇದೆಂತಹ ಮಣ್ಣಿಗೆ ಅಲಂಕಾರ? ಒಂದಕ್ಕೊಂದು ಸಂಬಂಧವೇ ಇಲ್ಲ ಅಂದ್ಕೊಂಡ್ರಾ? ನಿಜ, ಒಂದಕ್ಕೊಂದು ಸಂಬಂಧ ಇಲ್ದೇ ಇರಬಹುದು. ಆದ್ರೆ ಹೀಗೆ ತಾನು ಬೆಳೆದ ಹೂವು, ಬದನೆಗಳನ್ನ ತಿಪ್ಪೆಗೆ ಚೆಲ್ಲೋ ಮೂಲಕ ವಿಜಯಪುರದ (Vijayapura) ರೈತರೊಬ್ಬರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. 


  ಹೀಗೆ ರಾಶಿ ರಾಶಿಯಾಗಿ ತಂದ ಚೆಂಡು ಹೂಗಳನ್ನು ಸುರಿದಿರೋದು ಮಾರಾಟಕ್ಕೂ ಅಲ್ಲ, ಅಲಂಕಾರಕ್ಕೂ ಅಲ್ಲ. ಅಷ್ಟಕ್ಕೂ ಹೀಗೆ ತಂದು ಹಾಕಿರೋ ಈ ಜಾಗ ಉದ್ಯಾನವನವೂ ಅಲ್ಲ. ಬದಲಿಗೆ ಬೆಳೆಗೆ ಬೆಲೆ ಸಿಗದ ಕಾರಣ ವಿಜಯಪುರದ ರೈತರು ಚೆಂಡು ಹೂವನ್ನು ತಿಪ್ಪೆಗೆ ತಂದು ಸುರಿದಿದ್ದಾರೆ. ಇಷ್ಟೊಂದು ರಾಶಿ ಚೆಂಡು ಹೂ ಭರ್ಜರಿ ಮಾರಾಟವಾಗಿ ಲಕ್ಷಾಂತರ ರೂಪಾಯಿ ಗಳಿಸೋ ಕನಸು ಕಂಡಿದ್ದ ವಿಜಯಪುರದ ನಿಡಗುಂದಿಯ ಯುವಭರತ ಎಂಬವರೇ ಈ ರೀತಿಯಾಗಿ ಹೂವಿನ ರಾಶಿಯನ್ನು ತಿಪ್ಪೆಗೆಸೆದಿದ್ದಾರೆ.


  ಇದನ್ನೂ ಓದಿ: Travel Plan: ರಾಮಾಯಣದ ಸೀತೆ, ಶ್ರೀರಾಮ, ಲಕ್ಷ್ಮಣ, ಹನುಮರನ್ನು ಮೀಟ್ ಮಾಡಿ!


  ನಷ್ಟ ಸರಿದೂಗಿಸೋಕೆ ಪ್ರಯತ್ನ


  ಹೀಗೆ ರಾಶಿ ಹಾಕಿರೋ ಹೂ, ಬದನೆಕಾಯಿಗಳು ಮುಂದೆ ಸಾವಯವ ಗೊಬ್ಬರವಾಗಿ ಬದಲಾಗುತ್ತೆ. ಅದನ್ನ ಯುವಭರತ ಅವ್ರು ಯವಭರತನವ್ರು ತಮ್ಮ ಮುಂದಿನ ಬೆಳೆಗಳಾದ ಮೆಕ್ಕೆಜೋಳ, ಕಲ್ಲಂಗಡಿ, ಖರ್ಬೂಜಾ ಹಣ್ಣುಗಳನ್ನು ಬೆಳೆಯೋಕೆ ಬಳಸ್ತಾರೆ. ಚೆಂಡು ಹೂ, ಬದನೆಯಿಂದ ಆದ ನಷ್ಟವನ್ನು ಸಾವಯವ ಗೊಬ್ಬರ ತಯಾರಿಸಿ ತಕ್ಕ ಮಟ್ಟಿಗೆ ಸರಿದೂಗಿಸುವ ಇರಾದೆ ಈ ಕೃಷಿಕರದ್ದು.


  ಕೆಜಿಗೆ ಹತ್ತೇ ರೂಪಾಯಿಗೆ ಮಾರಾಟ


  ಯುವಭರತ ಅವ್ರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಹಾರಾಷ್ಟ್ರದಿಂದ ಚೆಂಡು ಹೂವವಿನ ಸಸಿ ತಂದು ಮೂರು ಎಕರೆಯಲ್ಲಿ ನಾಟಿಮಾಡಿದ್ರು. ಸದ್ಯ ಜಮೀನಿನಲ್ಲಿ ಭರಪೂರ ಬೆಳೆಯೂ ಬಂದಿತ್ತು. ಹಿಂದೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಮಾರುಕಟ್ಟೆಗೆ ಕಳುಹಿಸುತ್ತಿದ್ರು. ಆದ್ರೆ ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿಜಯಪುರ ಮಾರುಕಟ್ಟೆಯಲ್ಲೂ ಸಹ ಸದ್ಯ ಪ್ರತಿ ಕೆಜಿ ಚೆಂಡು ಹೂವಿನ ಬೆಲೆ ಹತ್ತು ರೂಪಾಯಿಗೆ ಕುಸಿದಿದೆ.


  Startup Success Story: ವಿಜಯಪುರದಲ್ಲಿ ರೇಷ್ಮೆ ಕ್ರಾಂತಿ! ರಾಮನಗರಕ್ಕೆ ಸಖತ್ ಪೈಪೋಟಿ


  ಇವರ ಪ್ರಯತ್ನಕ್ಕೆ ಫಲ ಕೊಡಲಿ ಎಂಬ ಹಾರೈಕೆ
  ಅತ್ತ ಸರ್ಕಾರದಿಂದಲೂ ಪರಿಹಾರ ಸಿಗದೇ ಇರೋದ್ರಿಂದ ಹೂಗಳನ್ನು ಗೊಬ್ಬರವಾಗಿ ಬಳಸೋ ಯತ್ನಕ್ಕೆ ಈ ರೈತ ಮುಂದಾಗಿದ್ದಾರೆ. ಒಟ್ಟಾರೆ ಒಂದು ಬೆಳೆ ಕೈಕೊಟ್ರೂ ಅದರಿಂದಲೇ ಇನ್ನೊಂದು ಬೆಳೆಯಲ್ಲಿ ಲಾಭ ಮಾಡೋ ಇವರ ಪ್ರಯತ್ನ ಒಳ್ಳೆಯ ಫಲ ಸಿಗ್ಲಿ ಅನ್ನೋಣ ಅಲ್ವೇ?


  ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

  Published by:Precilla Olivia Dias
  First published: