Apple In Vijayapura: ವಿಜಯಪುರ ಸೇಬು ಸವಿಯಿರಿ! ವರ್ಷಕ್ಕೆ 30 ಲಕ್ಷ ಗಳಿಸುವ ಕೃಷಿಕರ ಸಾಧನೆ ತಿಳಿಯಿರಿ

ಸೇಬು ಬೆಳೆದು ಅಚ್ಚರಿ ಮೂಡಿಸಿರುವ ಯುವ ರೈತ ಸಚಿನ್ ಸಾಧನೆಗೆ ಜಿಲ್ಲೆಯ ಜನ ಹೆಮ್ಮೆ ಪಡ್ತಿದ್ದಾರೆ. ಕಾಶ್ಮೀರದಲ್ಲಿ ಬೆಳೆಯೋ ಸೇಬಿನ ಗಿಡವನ್ನು ತಮ್ಮೂರಲ್ಲಿ ಕಂಡು ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಎಂದು ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ವಿಜಯಪುರ ಸೇಬು!

ವಿಜಯಪುರ ಸೇಬು!

 • Share this:
  ವಿಜಯಪುರ: ರುಚಿರುಚಿ ಸೇಬು ಹಣ್ಣನ್ನು ಜಮ್ಮು, ಶಿಮ್ಲಾ, ಹಿಮಾಚಲ ಪ್ರದೇಶದಲ್ಲಿ ಬೆಳೆಯೋದು ಹೊಸದಲ್ಲ. ಆದರೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ರೈತರೋರ್ವರು ಬರಡು ಭೂಮಿಯಲ್ಲಿ ಕಾಶ್ಮೀರಿ ಸೇಬು ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಅದು ಹೇಗೆ ಸಾಧ್ಯ ಅಂತಿರಾ ಈ ಸ್ಟೋರಿ ನೋಡಿ. ಕಾಶ್ಮೀರ ಸೇಬು ವಿಜಯಪುರ ಜಿಲ್ಲೆಗೂ (Kashmir Apple In Vijayapura) ಸದ್ಯ ಕಾಲಿಟ್ಟಿದೆ. ಈ ಜಿಲ್ಲೆಯಲ್ಲಿ ದ್ರಾಕ್ಷಿ, ಲಿಂಬು ಬೆಳೆಯುವುದೇನೋ ಸಾಮಾನ್ಯವಾಗಿತ್ತು. ಆದರೆ ಇದೀಗ ವಿಜಯಪುರದಲ್ಲೂ ಸೇಬು ಬೆಳೆದು ರೈತನೋರ್ವ (Vijayapura Farmers) ಸೈ ಎನಿಸಿಕೊಂಡಿದ್ದಾರೆ. ಇವರು ಸೇಬು ಬೆಳೆದು (Apple Farming) ಅಚ್ಚರಿ ಮೂಡಿಸಿದ್ದು ಹೇಗೆ? ಏನೆಲ್ಲ ಸಮಸ್ಯೆಗಳನ್ನು ಎದುರಿಸಿ ಅವುಗಳನ್ನು ಹೇಹೆ

  ಕೋಲ್ಹಾರದ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಅವರ ಪುತ್ರ ಸಚಿನ್ ಓದಿರೋದು ಡಿಪ್ಲೊಮಾ ಇನ್ ಅಗ್ರಿಕಲ್ಚರ್   ಎಲ್ಲರಂತೆ ಇವರೂ ಡಿಪ್ಲೊಮಾ ಅಗ್ರಿ ಕೋರ್ಸ್ ಮಾಡಿ ಉದ್ಯೋಗದತ್ತ ಒಲವು ತೋರಿದ್ದರು. ಆದ್ರೆ ತಂದೆ ಸಿದ್ದಪ್ಪ ಬಾಲಗೊಂಡ ಪ್ರೇರಣೆಯಿಂದ ಸಂಶೋಧನಾತ್ಮಕ ಕೃಷಿ ಮಾಡ್ತಿದ್ದಾರೆ. ಕಪ್ಪು ನೆಲದಲ್ಲಿ ಸೇಬು ಬೆಳೆದಿದ್ದಾರೆ.

  ಬರ ಪೀಡಿತ ಭೂಮಿಯಲ್ಲಿ ಸೇಬು ಬೆಳೆದದ್ದು ಹೇಗೆ?
  ಸಾಮಾನ್ಯವಾಗಿ ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತೆ. ಸೇಬು ಬೆಳವಣಿಗೆಗೆ 4 ರಿಂದ 21 ಡಿಗ್ರಿ ಸೆಲ್ಸಿಯಸ್​ನಷ್ಟು ಉಷ್ಟಾಂಶ ಸೂಕ್ತವಾಗಿದೆ. ಅಲ್ಲದೇ ವಾರ್ಷಿಕವಾಗಿ 100 ರಿಂದ 124 ಸೆಂಟಿ ಮೀಟರ್​ನಷ್ಟು ಮಳೆ ಬೇಕಾಗುತ್ತೆ. ಆದರೆ ಬರ ಪೀಡಿತ ಜಿಲ್ಲೆಯಲ್ಲಿ ಕಪ್ಪು ಮಣ್ಣಿನಲ್ಲಿ ರೈತ ಸಿದ್ದಪ್ಪ ಬಾಲಗೊಂಡ ಪುತ್ರ ಸಚಿನ್ ಸೇಬು ಬೆಳೆಯುವ ಮೂಲಕ‌ ಇತರರಿಗೆ ಮಾದರಿಯಾಗಿದ್ದಾರೆ.

  ಸೇಬು ಬೆಳೆಗಾರರಿಂದ ಮಾರ್ಗದರ್ಶನ!
  ಹಿಮಾಚಲ ಪ್ರದೇಶದಿಂದ ಸೇಬು ಬೆಳೆಯಲು ಮಾರ್ಗದರ್ಶನ ಪಡೆದು ಉತ್ಕೃಷ್ಟ ಸೇಬು ಬೆಳೆದು ಇದೀಗ ವಿಜಯಪುರ ಸೇರಿದಂತೆ ಸ್ಥಳೀಯ ಮಾರುಕಟ್ಟೆಗೆ ಕಳುಹಿಸ್ತಿದ್ದಾರೆ. ಕೃಷಿ ಲಾಭದಾಯಕ ಅಲ್ಲ ಅಂದ್ರು. ಆದರೆ ರೈತರು ವಿಭಿನ್ನ ಬಗೆಯ ಕೃಷಿ ಮಾಡಿ ಆದಾಯ ಪಡೆಯಬಹುದು. 9 ಎಕರೆ ಜಮೀನಿನಲ್ಲಿ 30 ತರಹೇವಾರಿ ಹಣ್ಣು ಬೆಳೆದು ಪ್ರತಿ ತಿಂಗಳು ಆದಾಯ ಬರುವಂತೆ ಪ್ಲ್ಯಾನ್ ಮಾಡಿದ್ದೇವೆ. ಸೇಬು, ಮಾವು ಹೀಗೆ ಸೀಸನ್​ವಾರು ಮಾರುಕಟ್ಟೆಗೆ ಹಣ್ಣು ಕಳುಹಿಸುತ್ತಿದ್ದೇವೆ. ಇದರಿಂದ ವಾರ್ಷಿಕ 30ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದೇವೆ ಅನ್ನೋದು ಸಚಿನ್ ಅವರ ಮಾತು.

  ಅಚ್ಚರಿಯ ಹಣ್ಣು ಬೆಳೆದ ಯುವ ರೈತ!
  ಸಿದ್ದಪ್ಪ ಬಾಲಗೊಂಡ ಅವರ ಮಗ ಸಚಿನ್ ಅವರ ತೋಟದಲ್ಲಿ ಯಾವ ಹಣ್ಣು ಇಲ್ಲ ಅನ್ನೋ ಹಾಗೆಯೇ ಇಲ್ಲ. 9 ಎಕರೆಯಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಸೇಬು, ಜಾಮ್, ಡ್ರ್ಯಾಗನ್ ಫ್ಲೋಟ್, ಖರ್ಜೂರ, ಪೇರಲ, ನೇರಳೆ, ಹುಣಸೆ, ಹಲಸು, ವಾಟರ್ ಸೇಬು, ಸ್ಟಾರ್ ಫ್ರೂಟ್ಸ್, ದಾಳಿಂಬೆ, ಸ್ವೀಟ್ ಹುಣಸೆ, ಸೀತಾಫಲ, ಮೂಸಂಬಿ ಸೇರಿದಂತೆ 30 ತರಹದ ಹಣ್ಣು ಬೆಳೆಯುತ್ತಿದ್ದಾರೆ. ಸೇಬು ಭಾರತದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ ಸೇರಿದಂತೆ ದಕ್ಷಿಣ ಭಾರತದ ತಮಿಳುನಾಡಿನ‌ ನೀಲಗಿರಿ ಬೆಟ್ಟದಲ್ಲಿ‌ ಮಾತ್ರ ಈ ಸೇಬು ಬೆಳೆಯುತ್ತಾರೆ.

  ಇದನ್ನೂ ಓದಿ: Organic Jaggery: ಬರದ ನಾಡಿನಲ್ಲಿ 18 ಬಗೆಯ ಬೆಲ್ಲ, ಇಂಥಾ ವೆರೈಟಿ ನೀವೆಲ್ಲೂ ನೋಡಿರಲ್ಲ ಬಿಡಿ!

  ಜಿಲ್ಲೆಯಲ್ಲಿ ಮೊದಲ ಬಾರಿ ಸೇಬು ಬೆಳೆದ ಮೊದಲಿಗ!
  ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೋಲ್ಹಾರದ ಯುವ ರೈತ ಸಚಿನ್ ಸಿದ್ದಪ್ಪ ಬಾಲಗೊಂಡ ಒಂದು ಎಕರೆ ಹೊಲದಲ್ಲಿ ಪ್ರಾಯೋಗಿಕವಾಗಿ ಸೇಬು ಬೆಳೆದು ಸ್ಥಳೀಯ ರೈತರಲ್ಲಿ ಹೊಸ ಆಶಾಭಾವ ಮೂಡಿಸಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 300 ಸೇಬು ಗಿಡಗಳನ್ನು ಎರಡು ವರ್ಷದ ಹಿಂದೆಯೇ ನಾಟಿ ಮಾಡಿದ್ದು ಇದೀಗ ಫಸಲು ಬಂದಿದೆ. ಪ್ರತಿ ಗಿಡದಲ್ಲಿ 10 ರಿಂದ 30 ಕಾಯಿ ಹಿಡಿದಿದೆ. 

  ಸಚಿನ್ ಬಾಲಗೊಂಡ, ಕೊಲ್ಹಾರ ಅವರ ಸಂಪರ್ಕ ಸಂಖ್ಯೆ:  86186 33833 

  ನೆರೆ ರಾಜ್ಯದಿಂದಲೂ ಬರ್ತಾರೆ ಜನ!
  ಸೇಬು ಬೆಳೆಗೆ ಅಲ್ಪ ನೀರು ಬೇಕಾಗುತ್ತೆ, ರೋಗಬಾಧೆಯೂ ಕಡಿಮೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದಾಗಿದೆ. ಇವರು ಬೆಳೆದ ಸೇಬು ಬೆಳೆ ನೋಡಲು ರೈತರು ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದಲೂ ಬರ್ತಿದ್ದಾರೆ. ಎಲ್ಲರಿಗೂ ಸೇಬು ಬೆಳೆಯ ಬಗ್ಗೆ ಮಾಹಿತಿ ನೀಡಿ ಬೆಳೆಯಲು ಪ್ರೋತ್ಸಾಹ ನೀಡ್ತಿದ್ದಾರೆ ಸಚಿನ್.

  ಬೇರೆ ರೈತರಿಗೂ ಸೇಬು ಬೆಳೆ ಮಾದರಿ!
  ಸೇಬು ಬೆಳೆದು ಅಚ್ಚರಿ ಮೂಡಿಸಿರುವ ಯುವ ರೈತ ಸಚಿನ್ ಸಾಧನೆ ವಿಜಯಪುರ ಜಿಲ್ಲೆಯ ಜನ ಹೆಮ್ಮೆ ಪಡ್ತಿದ್ದಾರೆ. ಕಾಶ್ಮೀರದಲ್ಲಿ ಬೆಳೆಯೋ ಸೇಬಿನ ಗಿಡವನ್ನು ತಮ್ಮೂರಲ್ಲಿ ಕಂಡು ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಎಂದು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಬಿಸಿಲು ಪ್ರದೇಶದಲ್ಲೂ ಸೇಬು ಬೆಳೆಯಬಹುದು ಅಂತ ವಿಜಯಪುರದ ರೈತ ತೋರಿಸಿಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಇತರ ರೈತರು ಸೇಬು ಬೆಳೆಯಲು ಪ್ರೇರಣೆಯಾಗಿದೆ. 

  ಇದನ್ನೂ ಓದಿ:Vijayapura Farmers: ವಿಜಯಪುರ ರೈತರೇ, ಈಗ ಬಿತ್ತನೆ ಮಾಡಬಹುದೇ? ಕೃಷಿ ಇಲಾಖೆ ಸಲಹೆ ತಿಳಿಯಿರಿ

  ಇವರ ಸಾಧನೆಗೆ ಹಲವು ಪ್ರಶಸ್ತಿ
  ಹೌದು, ಇವರು ಮೂಲತ ಕೃಷಿ ಕುಟುಂಬದ ರೈತರು. ಸಾಕಷ್ಟು ಬೆಳೆಯಲ್ಲಿ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡಿದ್ದರೂ ಸಹ ಸ್ವಲ್ಪವೂ ಕುಗ್ಗದೆ ವಿಭಿನ್ನ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ಜೊತೆಗೆ ಕೃಷಿ ಪಂಡಿತ್ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಸಚಿನ್ ಅವರನ್ನು ಅರಸಿ ಬಂದಿವೆ. ವಿವಿಧ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಸಚಿನ್ ಅವರಿಂದ ಸ್ಪೂರ್ತಿ ಪಡೆಯಬೇಕೇ? ಈ ಸಂಖ್ಯೆಗೆ ಕರೆ ಮಾಡಿ! 

  ವರದಿ: ಪ್ರಶಾಂತ ಹೂಗಾರ, ವಿಜಯಪುರ
  Published by:guruganesh bhat
  First published: