Vijayapura Success Story: ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ! ವಿಜಯಪುರದ ಈ ರೈತನ ಸಕ್ಸಸ್ ಗುಟ್ಟೇನು?

ಕೇವಲ ಕೃಷಿ ಮಾತ್ರವಲ್ಲದೇ ಈ ರೈತ ಏನೆಲ್ಲ ಮಾಡ್ತಿದ್ದಾರೆ ಗೊತ್ತಾ? ತಮ್ಮ ಬಸರಕೋಡ ಗ್ರಾಮದಲ್ಲಿ 15 ರಿಂದ 20 ಜನ ಉತ್ಸಾಹಿ ರೈತರು ಸೇರಿಕೊಂಡು ಆತ್ಮ ಕೃಷಿಕರ ಗುಂಪು ಸ್ಥಾಪಿಸಿದ್ದಾರೆ. ಅವರ ವಿಡಿಯೋ ನೋಡಿ.

ರೈತ ಪವಾಡೆಪ್ಪ

"ರೈತ ಪವಾಡೆಪ್ಪ "

  • Share this:
    ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಸರಕೋಡ ಗ್ರಾಮದ ಪವಾಡೆಪ್ಪ ವಡ್ಡರ ಅವರ ಕುಟುಂಬ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಪದ್ದತಿಯಲ್ಲಿ ವಿವಿಧ ಬಗೆಯ ಬೆಳೆಗಳನ್ನ ಬೆಳೆದು ಈ ಭಾಗದಲ್ಲಿ ಮಾದರಿ ರೈತರಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕೃಷಿ ಉತ್ಪಾದಕರ ಸಂಖ್ಯೆ (AGRI Producers) ಹೆಚ್ಚಾಗಿದೆ. ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಕೃಷಿ ಸಂಘಗಳಲ್ಲಿ ಭಾಗಿಯಾಗುವುದರೊಂದಿಗೆ ವಿಜಯಪುರ (Vijayapura) ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ರೈತರು ತಮ್ಮ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿಯನ್ನ (Organic Agriculture) ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

    ಯುವ ರೈತ ಪವಾಡೆಪ್ಪ ಶೂನ್ಯ ಬಂಡವಾಳದೊಂದಿಗೆ ಕೃಷಿ ಜಮೀನಿನಲ್ಲಿ ಇವರು ದೇಶಿ ಕೋಳಿ ಸಾಕಾಣಿಕೆ, ದೇಶಿ ಕುರಿ ಮತ್ತು ಆಡು ಸಾಕಾಣಿಕೆಯನ್ನ ಮಾಡಿ ಹೆಚ್ಚಿನ ಆದಾಯವನ್ನ ಗಳಿಸುತ್ತಿದ್ದಾರೆ.

    ಶೇಂಗಾ ಬೆಳೆಯಲ್ಲಿ ತುಂತುರು ನೀರಾವರಿ
    ಶೇಂಗಾ ಬೆಳೆಯಲ್ಲಿ ಇವರು ತುಂತುರು ಹನಿ ನೀರಾವರಿ ಪದ್ಧತಿಯನ್ನ ಅಳವಡಿಕೆ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ದೇಶಿ ಆಕಳುಗಳಿದ್ದು ಅವುಗಳಿಗಾಗಿ ಖನಿಜ ಮಿಶ್ರಿತ ಸೊಪ್ಪು ನೀಡುತ್ತಾರೆ. ಆಕಳುಗಳು ಹೆಚ್ಚಾಗಿ ಹಾಲು ನೀಡಲು ಈ ಪದ್ಧತಿಯನ್ನ ಅನುಸರಿಸುತ್ತಾರೆ.

    ಪವಾಡೆಪ್ಪ ವಡ್ಡರ ಅವರ ಸಂಪರ್ಕ ಸಂಖ್ಯೆ: 9900670397 

    ಇದನ್ನೂ ಓದಿ: Nag Panchami Vijayapura: ಎಳ್ಳು, ಹೋಳಿಗೆ, ಉಂಡೆ, ಅರಿಶಿನ ದಾರ! ವಿಜಯಪುರದಲ್ಲಿ ಹೀಗಿತ್ತು ನಾಗರ ಪಂಚಮಿ

    ಇದೇ ಜಮೀನಿನಲ್ಲಿಯೇ ಕೊಟ್ಟಿಗೆ ಗೊಬ್ಬರ ಘಟಕವನ್ನ ಮಾಡಿಕೊಂಡಿದ್ದಾರೆ. ಇದರಲ್ಲಿ ಡಿ ಕಂಪೋಜರ್ ಸಿದ್ದವಾಗುತ್ತದೆ. ಅಲ್ಲದೇ ಇಲ್ಲಿ ಅಜೋಲ್ಲಾ ಘಟಕವು ಇದೆ. ಮತ್ತು ಬಿತ್ತಿದ ಬೆಳೆಗಳಿಗೆ ಅವಶ್ಯಕವಿರುವ ಜೀವಾಮೃತವನ್ನ ಸ್ವತಃ ಇವರೆ ತಯಾರಿಸುತ್ತಾರೆ.

    ಇವರು ಬೆಳೆಯುವ ಬೆಳೆಗಳು
    ಪವಾಡೆಪ್ಪ ತಮ್ಮ 3 ಎಕರೆ ಜಮೀನಿನಲ್ಲಿ ಹತ್ತಕ್ಕೂ ಹೆಚ್ಚು ಬೆಳಗಳನ್ನ ಬೆಳೆದಿದ್ದಾರೆ. ತೋಟಗಾರಿಕಾ ಬೆಳೆಗಳಾದ ತೆಂಗು, ಬಾಳೆ, ಬದನೆ, ಟೊಮ್ಯಾಟೋ, ಹಾಗಲ ಸೇರಿದಂತೆ ಶೇಂಗಾ ಬೆಳೆಯನ್ನು ಇವರು ಬೆಳೆಯುತ್ತಿದ್ದಾರೆ. ಜೊತೆಗೆ ಸರ್ಕಾರದ ಜಾರಿಗೆ ತಂದಿರುವ ಕೃಷಿ ಸಿಂಚಾಯಿ ಯೋಜನೆಯ ಲಾಭ ಪಡೆದು ನೀರಾವರಿ ಪೈಪ್ ಮತ್ತು ಕಾರಂಜಿಯನ್ನ ಪಡೆದುಕೊಂಡಿದ್ದಾರೆ. ಜೊತೆಗೆ ಗಂಗಾ ಕಲ್ಯಾಣ ಯೋಜನೆಯಡಿ ಜಮೀನಿನಲ್ಲಿ ಕೊಳವೆ ಬಾವಿಯನ್ನ ಕೊರೆಸಿದ್ದಾರೆ.

    ಕೃಷಿ ಜೊತೆಗೆ ಹೈನುಗಾರಿಕೆ
    ಕೇವಲ ಕೃಷಿ ಮಾತ್ರವಲ್ಲದೇ, ಆಡು ಸಾಕಾಣಿಕೆ, ದನ ಸಾಕಾಣಿಕೆ, ಕೋಳಿ ಸಾಕಾಣಿಕೆ, ಎರೆಹುಳು ಕೃಷಿ, ಅಜೋಲಾ ಘಟಕ, ಡಿ ಕಾಂಪೋಸ್ಟ್, ಜೀವಾಮೃತ, ಬ್ರಹ್ಮಾಸ್ತ್ರ, ನೀಮಾಸ್ತ್ರ ಈ ಎಲ್ಲವನ್ನ ಮನೆಯವರ ಸಹಾಯವನ್ನ ಪಡೆದು ತಯಾರಿಸಿ ತಾವು ಬೆಳೆಯುವ ಬೆಳೆಗಳಿಗೆ ಬಳಸುತ್ತಾರೆ.

    ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

    ತಮ್ಮ ಬಸರಕೋಡ ಗ್ರಾಮದಲ್ಲಿ 15 ರಿಂದ 20 ಜನ ಉತ್ಸಾಹಿ ರೈತರು ಸೇರಿಕೊಂಡು ಆತ್ಮ ಕೃಷಿಕರ ಗುಂಪೊಂದನ್ನ ಸ್ಥಾಪಿಸಿಕೊಂಡು ಕೃಷಿ ಬಗೆಗಿನ ಚರ್ಚೆಗಳನ್ನ ಮಾಡಿ ಒಬ್ಬರಿಂದ ಒಬ್ಬರು ಸಲಹೆಯನ್ನ ಪಡೆಯುತ್ತಾರೆ.ಈ ರೈತ ಹಿಂದೆ ಜವಾರಿ ಬಾಳೆ ಮತ್ತು ಕಬ್ಬು ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದರು ಇದರಿಂದಾಗಿ ಮತ್ತಷ್ಟು ಕೃಷಿಯತ್ತ ವಾಲಿ ಯಶಸ್ಸು ಕಂಡಿದ್ದಾರೆ.

    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
    Published by:guruganesh bhat
    First published: