• Home
  • »
  • News
  • »
  • vijayapura
  • »
  • Government Hospital: ಕಣ್ಣರಳಿಸಿ ನೋಡೋಥರ ಇದೆ ಈ ಸರ್ಕಾರಿ ಆಸ್ಪತ್ರೆ! ಖಾಸಗಿ ಹಾಸ್ಪಿಟಲ್ ಇಲ್ಲಿ ಲೆಕ್ಕಕ್ಕೇ ಇಲ್ಲ!

Government Hospital: ಕಣ್ಣರಳಿಸಿ ನೋಡೋಥರ ಇದೆ ಈ ಸರ್ಕಾರಿ ಆಸ್ಪತ್ರೆ! ಖಾಸಗಿ ಹಾಸ್ಪಿಟಲ್ ಇಲ್ಲಿ ಲೆಕ್ಕಕ್ಕೇ ಇಲ್ಲ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

Vijayapura District Hospital : ಕರ್ನಾಟಕದ ಜಿಲ್ಲಾಸ್ಪತ್ರೆಗಳ ವಿಭಾಗದಲ್ಲಿ ವಿಜಯಪುರ ಜಿಲ್ಲಾಸ್ಪತ್ರೆ ಮಾತ್ರ ಈ ಗೌರವಕ್ಕೆ ಆಯ್ಕೆಯಾಗಿದೆ. ಸ್ವಚ್ಛತೆ, ಸೌಕರ್ಯ, ಶಿಸ್ತು ಮುಂತಾದ ನಾನಾ ಮಾನದಂಡಗಳನ್ನು ಲೆಕ್ಕ ಹಾಕಿ ಕೇಂದ್ರ ನಿಗದಿಪಡಿಸಿದ 100ರಲ್ಲಿ ಶೇ. 97 ರಷ್ಟು ಅಂಕಗಳನ್ನು ಈ ಆಸ್ಪತ್ರೆ ಪಡೆದಿದೆ.

ಮುಂದೆ ಓದಿ ...
  • Share this:

    ವಿಜಯಪುರ: ಖಾಯಿಲೆ ಗುಣಪಡಿಸೋದಕ್ಕಿಂತ ಮತ್ತಷ್ಟು ಹೆಚ್ಚು ಖಾಯಿಲೆಗಳನ್ನ ಅಂಟಿಸಿಕೊಂಡು ಬರುವ ಅಪಾಯವೇ ಹೆಚ್ಚು ಅನ್ನೋದು ಸಾಮಾನ್ಯವಾಗಿ ಎಲ್ಲರ ಅನಿಸಿಕೆ. ದುರದೃಷ್ಟವಶಾತ್ ಆರೋಗ್ಯ ಕೇಂದ್ರಗಳೆಲ್ಲಾ (Health Centre) ಅನಾರೋಗ್ಯದ ಕೂಪಗಳಾಗಿ ಬದಲಾಗಿರೋದ್ರಿಂದ ಜನ ಕೂಡಾ ಹಾಗೇ ಅಂದ್ಕೊಳೋದು ತಪ್ಪೇನಲ್ಲ ಬಿಡಿ. ಆದ್ರೆ ಅಪರೂಪಕ್ಕೆ ಒಂದು ಜಿಲ್ಲಾ ಆಸ್ಪತ್ರೆ ಈ ಆರೋಪದಿಂದ ಮುಕ್ತವಾಗಿದೆ. ಕೆಲ ದಿನಗಳ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ವಿಜಯಪುರ ಜಿಲ್ಲಾಸ್ಪತ್ರೆಗೆ  (Vijayapura District Hospital) ಭೇಟಿ ಕೊಟ್ಟಿದ್ರು. ಆಗ ಆಸ್ಪತ್ರೆಯ ಸ್ಥಿತಿ ನೋಡಿ ಅವ್ರಿಗೇ ಖುಷಿಯಾಗಿತ್ತು. ಯಾಕಂದ್ರೆ ಆಸ್ಪತ್ರೆಯ ಒಳಹೊರಗೆ ಅಷ್ಟು ಸ್ವಚ್ಛವಾಗಿತ್ತು. ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇರಬಹುದು ಅಂದ್ಕೊಂಡವ್ರು ಕಣ್ಣರಳಿಸಿ ನೋಡುವಂತಿದೆ ಈ ಆಸ್ಪತ್ರೆ.


    ಜಿಲ್ಲಾಸ್ಪತ್ರೆ ಅಂದ್ರೆ ಅಲ್ಲಿ ಸುತ್ತಮುತ್ತಲ ಊರುಗಳಿಂದ, ದೂರದ ಹಳ್ಳಿಗಳಿಂದ ಜನ ಬರೋದು ಸಹಜ. ಅವರೆಲ್ಲರ ನೋಂದಣಿ, ಆರೋಗ್ಯ ವಿಚಾರಣೆ, ಔಷಧೋಪಚಾರ, ಮಾಹಿತಿ ಕಲೆ ಹಾಕುವಿಕೆ ಇದೆಲ್ಲವೂ ಬಹಳ ಮುಖ್ಯ ವಿಚಾರವೇ. ಈ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ ಎಲ್ಲರೂ ಅದನ್ನು ಪಾಲಿಸುವಂಥಾ ವಾತಾವರಣ ಇರೋದು ಈ ಆಸ್ಪತ್ರೆಯ ಹೆಗ್ಗಳಿಕೆ.


    ಇದನ್ನೂ ಓದಿ: Bhoomi Hunnime: ಭೂಮಿ ಹುಣ್ಣಿಮೆ ಹಬ್ಬದ ಸ್ಪೆಷಲ್! ವಿಧವಿಧದ ಖಾದ್ಯ, ಮುಗಿಲು ಮುಟ್ಟಿದ ಕೃಷಿಕರ ಸಂಭ್ರಮ


    ವಿವಿಧ ಪ್ರಯೋಗಾಲಯಗಳೂ ಇವೆ
    ಇನ್ನು ಈ ದವಾಖಾನೆಯಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಮಾತ್ರವಲ್ಲದೆ ಪ್ರಯೋಗಾಲಯಗಳು ಕೂಡಾ ಇರೋದ್ರಿಂದ ಈ ಪ್ರದೇಶದ ಜನರಿಗೆ ಬಹಳ ಅನುಕೂಲವಾಗಿದೆ.


    ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


    ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ ಪ್ರಶಸ್ತಿ
    ಇದಕ್ಕೆಲ್ಲಾ ಮೆಚ್ಚುಗೆ ಎಂಬಂತೆ ವಿಜಯಪುರದ ಜಿಲ್ಲಾ ಆಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ ಪ್ರಶಸ್ತಿ ದೊರೆತಿದೆ. ಕರ್ನಾಟಕದ ಜಿಲ್ಲಾಸ್ಪತ್ರೆಗಳ ವಿಭಾಗದಲ್ಲಿ ವಿಜಯಪುರ ಜಿಲ್ಲಾಸ್ಪತ್ರೆ ಮಾತ್ರ ಈ ಗೌರವಕ್ಕೆ ಆಯ್ಕೆಯಾಗಿದೆ. ಸ್ವಚ್ಛತೆ, ಸೌಕರ್ಯ, ಶಿಸ್ತು ಮುಂತಾದ ನಾನಾ ಮಾನದಂಡಗಳನ್ನು ಲೆಕ್ಕ ಹಾಕಿ ಕೇಂದ್ರ ನಿಗದಿಪಡಿಸಿದ 100ರಲ್ಲಿ ಶೇ. 97 ರಷ್ಟು ಅಂಕಗಳನ್ನು ಈ ಆಸ್ಪತ್ರೆ ಪಡೆದಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಯ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಭಯಪಡದೆ ನಿರಾತಂಕವಾಗಿ ಇರುವಂತಾಗಿದೆ.


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: