• Home
  • »
  • News
  • »
  • vijayapura
  • »
  • Vijayapura: ಬಿಂಗಿಗಳಿಗೆ ಊಟ ಬಡಿಸಲು ಫುಲ್ ರಶ್! ಯಾರು ಈ ವಿಶೇಷ ವ್ರತಧಾರಿಗಳು?

Vijayapura: ಬಿಂಗಿಗಳಿಗೆ ಊಟ ಬಡಿಸಲು ಫುಲ್ ರಶ್! ಯಾರು ಈ ವಿಶೇಷ ವ್ರತಧಾರಿಗಳು?

X
ಊಟ ಬಡಿಸುವ ಜಾತ್ರೆ!

"ಊಟ ಬಡಿಸುವ ಜಾತ್ರೆ!"

ಈ ಬಿಂಗಿಗಳಿಗಾಗಿ ಈ ಜಾತ್ರೆಯಲ್ಲಿ ಪ್ರಸಾದ ಸೇವೆಯೂ ಇರುತ್ತೆ. ಗ್ರಾಮದ ಭಕ್ತರೆಲ್ಲಾ ಮಡಿಯಿಂದ ಮಾಡಿದ ನೈವೇದ್ಯವನ್ನ ಬಿಂಗಿಗಳಿಗೆ ಅರ್ಪಿಸ್ತಾರೆ.

  • Share this:

    ಕೊರಳಲ್ಲಿ ಹೂಹಾರ, ಕೈಯಲ್ಲಿ ರೊಟ್ಟಿ. ಹೀಗೆ ಹಿಡಿದ ನೆಲದ ಮೇಲೆ ಕುಳಿತವರಿಗೆ ಊಟ ಬಡಿಸೋಕೆ ನಾ ಮುಂದು ತಾ ಮುಂದು ಅಂತ ಮುಂದಾಗ್ತಿರೋ ಹಲವರು. ಅಷ್ಟಕ್ಕೂ ನೆಲದ ಮೇಲೆ ಕುಳಿತು ಉಣ್ಣುತ್ತಿರುವುವರಾದ್ರೂ ಯಾರು? ಭಕ್ತರು ಊಟ ಬಡಿಸೋಕೆ ಅಷ್ಟು ಉತ್ಸಾಹ ಪಡ್ತಿರೋದಾದ್ರೂ ಏಕೆ ಅಂತೀರಾ? ನಾವ್ ಹೇಳ್ತೀವಿ ಕೇಳಿ.  ಭಕ್ತರು ತಂದಿರೋ ರೊಟ್ಟಿ, ಅನ್ನ, ಪಲ್ಯ, ಹೋಳಿಗೆಗಳೆಲ್ಲ ಜಾತ್ರೆಗೆ (Special Fair) ಬಂದವರಿಗಲ್ಲ. ಹೀಗೆ ತಂದ ತಿಂಡಿ, ಖಾದ್ಯಗಳನ್ನೆಲ್ಲ ದೇವರಿಗೆ (God) ಸಮರ್ಪಿಸಿ ನಂತರ ನೆಲದ ಮೇಲೆ ಕುಳಿತ ಭಕ್ತರಿಗೆ ಹಂಚಲಾಗುತ್ತೆ. ಅಂದಹಾಗೆ ಇಂತಹ ವಿಶಿಷ್ಟ ಸಂಪ್ರದಾಯದ (Special Rituals) ಜಾತ್ರೆ ನಡೆಯೋದು ವಿಜಯಪುರದ (Vijayapoura Festival) ನಿಡಗುಂದಿ ತಾಲೂಕಿನ ಕೃಷ್ಣಾ ನದಿ ತಟದಲ್ಲಿರುವ ಗಣಿ ಗ್ರಾಮದ ಗಣಿ ಸೋಮೇಶ್ವರ ದೇಗುಲದಲ್ಲಿ.


    ಈ ಜಾತ್ರೆಯ ಆಕರ್ಷಣೆಯೇ ಬಿಂಗಿಯರು. ನೆಲದ ಮೇಲೆ ಕೂತು ಪ್ರಸಾದ ಸ್ವೀಕರಿಸುತ್ತಿರುವವನ್ನೇ ಬಿಂಗಿಯರು ಅಂತಾರೆ. ಒಂದು ರೀತಿಲಿ ಇವರು ದೇವರ ಮಕ್ಕಳಂತೆ. ಕಾರ್ತಿಕ ಮಾಸದ ಆರಂಭದಿಂದ ಅಂತ್ಯದವರೆಗೂ ಬಿಂಗಿಗಳು ಬರಿಗಾಲಲ್ಲಿ ನಡೆದಾಡುತ್ತಾರೆ. ಎಲ್ಲಾ ದುಶ್ಟಟಗಳನ್ನ ಬಿಟ್ಟು ಕಠಿಣ ವ್ರತ ಪಾಲಿಸ್ತಾರೆ.


    ನೈವೇದ್ಯ ಅರ್ಪಿಸಿದರೆ ಪುಣ್ಯ
    ಈ ಬಿಂಗಿಗಳಿಗಾಗಿ ಈ ಜಾತ್ರೆಯಲ್ಲಿ ಪ್ರಸಾದ ಸೇವೆಯೂ ಇರುತ್ತೆ. ಗ್ರಾಮದ ಭಕ್ತರೆಲ್ಲಾ ಮಡಿಯಿಂದ ಮಾಡಿದ ನೈವೇದ್ಯವನ್ನ ಬಿಂಗಿಗಳಿಗೆ ಅರ್ಪಿಸ್ತಾರೆ.


    ಇದನ್ನೂ ಓದಿ: Viral Fair: ವಿಜಯಪುರದಲ್ಲಿ ಭಕ್ತರು ಕಲ್ಲಿಗೆ ತಲೆಗೆ ಜಜ್ಜಿಕೊಳ್ಳುವ ಜಾತ್ರೆ!


    ಮನೆಯಲ್ಲಿ ವಿಧವಿಧದ ಖಾದ್ಯ ತಯಾರಿ
    ಗ್ರಾಮಸ್ಥರು ಮನೆಯಲ್ಲಿ ತಯಾರಿಸಿದ ಖಾದ್ಯವನ್ನ ದೊಡ್ಡ ಬುಟ್ಟಿಯಲ್ಲಿಟ್ಟುಕೊಂಡು, ಮಹಿಳೆಯರು ತಲೆಯ ಮೇಲೆ ಹೊತ್ತು ತಂಡೋಪತಂಡವಾಗಿ ದೇವಸ್ಥಾನದ ಆವರಣಕ್ಕೆ ಆಗಮಿಸ್ತಾರೆ. ಆ ವೇಳೆಗೆ ಸೋಮೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಮಹಾ ಮಂಗಳಾರತಿ ಸೇರಿ ಪೂಜಾ ಕೈಂಕರ್ಯಗಳು ಜರುಗುತ್ತವೆ.


    ಇದನ್ನೂ ಓದಿ: Bagalakote: ಕಾಯಿನ್ ಬಾಕ್ಸ್ ಆದ ಹೊಟ್ಟೆ! ವೈದ್ಯರಿಂದ 187 ನಾಣ್ಯಗಳು ಹೊರಕ್ಕೆ


    ಇನ್ನೊಂದೆಡೆ ಗ್ರಾಮದಲ್ಲಿ ಬಿಂಗಿಗಳ ಮೆರವಣಿಗೆಯೂ ನಡೆಯುತ್ತೆ. ಮೆರವಣಿಗೆ ಮೂಲಕ ಇವರನ್ನ ದೇವಸ್ಥಾನದ ಆವರಣಕ್ಕೆ ಕರೆತರಲಾಗುತ್ತೆ. ಬಳಿಕ ಮಹಿಳೆಯರು ತಂದ ನೈವೇದ್ಯವನ್ನ ಸೋಮೇಶ್ವರನಿಗೆ ಸಮರ್ಪಿಸಿ ಬಿಂಗಿಗಳಿಗೆ ಪ್ರಸಾದ ನೀಡಲಾಗುತ್ತೆ. ಹೀಗೆ ಇಷ್ಟೆಲ್ಲ ವೃತಗಳನ್ನ ಪಾಲಿಸಿದವರೇ ಈ ದೇವರನ್ನು ಆರಾಧಿಸುತ್ತಾರೆ. ಒಟ್ಟಿನಲ್ಲಿ ವಿಶಿಷ್ಟ ಸಂಪ್ರದಾಯದೊಂದಿಗೆ ನಡೆಯುವ ಈ ಜಾತ್ರೆ ಛಟ್ಟಿ ಅಮಾವಾಸ್ಯೆ ಬಳಿಕ ನಡೆದು ವೈಭವದೊಂದಿಗೆ ಸಂಪನ್ನಗೊಳ್ಳುತ್ತೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: