Ration Card Update: ಪಡಿತರ ಚೀಟಿದಾರರು ತಕ್ಷಣ eKYC ಮಾಡಿಸಿ; ವಿಜಯಪುರ ಜನರಿಗೆ ತುರ್ತು ಸೂಚನೆ

ಮರಾಠಿಯಲ್ಲಿರುವ ಆಧಾರ್ ಕಾರ್ಡುಗಳನ್ನು ಕನ್ನಡ ಭಾಷೆಯಲ್ಲಿ ಕೂಡಲೇ ತಿದ್ದುಪಡಿ ಮಾಡಿಸಿಕೊಂಡು ಆಯಾ ನ್ಯಾಯಬೆಲೆ ಅಂಗಡಿಯಲ್ಲಿ ಇಕೆವೈಸಿಯನ್ನು ಮಾಡಿಸಿಕೊಳ್ಳುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿಜಯಪುರ: ಸಾರ್ವಜನಿಕರು- ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಇಕೆವೈಸಿಯನ್ನು ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಪಡಿತರ ಚೀಟಿದಾರರಲ್ಲಿ ಮನವಿ (Ration Card Update) ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ (Vijayapura) ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಸೇರಿದಂತೆ ಒಟ್ಟು 4,95,943 ಪಡಿತರ ಚೀಟಿಗಳಿದ್ದು, ಇವುಗಳ ಪೈಕಿ 3,93,397 ಪಡಿತರ ಚೀಟಿದಾರರು ಮಾತ್ರ ಇಕೆವೈಸಿಯನ್ನು ಮಾಡಿಸಿಕೊಂಡಿದ್ದಾರೆ. ಇನ್ನು ಉಳಿದ  1,02,546 ಪಡಿತರ ಚೀಟಿದಾರರು ಇಕೆವೈಸಿಯನ್ನು (eKYC) ಮಾಡಿಸಿರುವುದಿಲ್ಲ. ಈ ಎಲ್ಲರೂ ತಕ್ಷಣ ಇಕೆವೈಸಿ ಮಾಡಿಸಿಕೊಳ್ಳಬೇಕೆಂದು ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮನವಿ ಮಾಡಿದ್ದಾರೆ.  

  ಕೆಲವೊಂದು ಪಡಿತರ ಚೀಟಿದಾರರು ಇಕೆವೈಸಿಯನ್ನು ಮಾಡಿಸದೇ ಇದ್ದರೂ ಸಹ ಅವರು ಪಡಿತರ ಚೀಟಿ ನಿಯೋಜಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯದೇ ಅವರ ವಾಸಿಸುವ ಗ್ರಾಮದಲ್ಲಿ ಅಥವಾ ಮನೆಯ ಸಮೀಪದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯುತ್ತಿದ್ದಾರೆ ಎಂದು ವಿಜಯಪುರ ಡಾ.ವಿಜಯಮಹಾಂತೇಶ ಅವರು ಮಾಹಿತಿ ನೀಡಿದ್ದಾರೆ.

  ಪೋರ್ಟೇಬಿಲಿಟಿ ನ್ಯಾಯಬೆಲೆ ಅಂಗಡಿಯಲ್ಲೇ ಇಕೆವೈಸಿ
  ಇಂತಹ ಪಡಿತರ ಚೀಟಿದಾರರಿಗೆ ಅವರು ಹೊಂದಿರುವ ಪಡಿತರ ಚೀಟಿಯನ್ನು ನಿಯೋಜಿಸಿದ ಮೂಲ ನ್ಯಾಯ ಬೆಲೆ ಅಂಗಡಿಗೆ ಹೋಗಿ ಇಕೆವೈಸಿ ಮಾಡಿಸಲು ತಿಳಿಸಿದರೂ ಸಹಿತ ಇದುವರೆಗೂ ಇಕೆವೈಸಿಯನ್ನು ಮಾಡಿಸಿರುವುದಿಲ್ಲ. ಆದ್ದರಿಂದ ಇಕೆವೈಸಿ ಮಾಡುವುದನ್ನೂ ಸಹ ಈ ತಿಂಗಳಿನಿಂದ ಪೋರ್ಟೇಬಿಲಿಟಿ ನ್ಯಾಯಬೆಲೆ ಅಂಗಡಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. 

  ಪೋರ್ಟೇಬಿಲಿಟಿ ಮೂಲಕ ಬೇರೆ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯುತ್ತಿರುವ ಪಡಿತರ ಚೀಟಿದಾರರೂ ಸಹಿತ ಅವರ ಸಮೀಪವಿರುವ ನ್ಯಾಯ ಬೆಲೆ ಅಂಗಡಿಯಲ್ಲಿ ಇಕೆವೈಸಿಯನ್ನು ಮಾಡಿಸಿಕೊಳ್ಳಲು ಸೂಚಿಸಿದೆ.

  ಕೆಲವು ಗ್ರಾಮಗಳಲ್ಲಿ ಮರಾಠಿಯಲ್ಲಿ ಆಧಾರ್ ಕಾರ್ಡ್!
  ಇಂಡಿ, ಚಡಚಣ ಹಾಗೂ ತಿಕೋಟ ತಾಲೂಕುಗಳ ಗಡಿ ಪ್ರದೇಶಗಳಲ್ಲಿ ಬರುವ ಕೆಲವೊಂದು ಗ್ರಾಮಗಳಲ್ಲಿನ ಆಧಾರ್ ಕಾರ್ಡುಗಳು ಮರಾಠಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿದ್ದ ಪ್ರಯುಕ್ತ ಅಂತಹವರೂ ಸಹಿತ ಇಕೆವೈಸಿ ಮಾಡಿಸಲು ಸಾಧ್ಯವಾಗಿರುವುದಿಲ್ಲ  ಎಂದು ಅವರು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: Vijayapura: ವಿಜಯಪುರ ಜಿಲ್ಲೆಯ ಯುವಕ ಯುವತಿಯರೇ, ನಿಮ್ಮನ್ನೇ ಹುಡುಕಿ ಬಂದಿದೆ ಈ ಅವಕಾಶ!

  ಆಧಾರ್ ಕಾರ್ಡ್​ಗಳನ್ನು ಮರಾಠಿಯಿಂದ ಕನ್ನಡಕ್ಕೆ ತಿದ್ದುಪಡಿ ಮಾಡಿ
  ಹೀಗಾಗಿ ಈ ಸಮಸ್ಯೆಯನ್ನು ಪರಿಹಾರ ಮಾಡಲು ಸಾರ್ವಜನಿಕರು ಈ ಕೂಡಲೇ ಮರಾಠಿಯಲ್ಲಿರುವ ಆಧಾರ್ ಕಾರ್ಡುಗಳನ್ನು ಕನ್ನಡ ಭಾಷೆಯಲ್ಲಿ ಕೂಡಲೇ ತಿದ್ದುಪಡಿ ಮಾಡಿಸಿಕೊಂಡು ಆಯಾ ನ್ಯಾಯಬೆಲೆ ಅಂಗಡಿಯಲ್ಲಿ ಇಕೆವೈಸಿಯನ್ನು ಮಾಡಿಸಿಕೊಳ್ಳುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದ್ದಾರೆ.

  ಇದನ್ನೂ ಓದಿ: Apple In Vijayapura: ವಿಜಯಪುರ ಸೇಬು ಸವಿಯಿರಿ! ವರ್ಷಕ್ಕೆ 30 ಲಕ್ಷ ಗಳಿಸುವ ಕೃಷಿಕರ ಸಾಧನೆ ತಿಳಿಯಿರಿ

  ಇಕೆವೈಸಿಯನ್ನು ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿಗಳಿಗೆ ಪಡಿತರ ವಸ್ತುಗಳ ಹಂಚಿಕೆ ಸ್ಥಗಿತಗೊಂಡರೆ ಅದಕ್ಕೆ ಆಯಾ ಪಡಿತರ ಚೀಟಿದಾರರೇ ಹೊಣೆಗಾರರಾಗುತ್ತಾರೆಂದು ಎಚ್ಚರಿಕೆ ನೀಡಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

  ವರದಿ: ಪ್ರಶಾಂತ ಹೂಗಾರ, ವಿಜಯಪುರ
  Published by:guruganesh bhat
  First published: