• Home
 • »
 • News
 • »
 • vijayapura
 • »
 • Vijayapura: ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಪರೀಕ್ಷೆ ನಡೆಸಲು ಸೂಚನೆ

Vijayapura: ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಪರೀಕ್ಷೆ ನಡೆಸಲು ಸೂಚನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜಯಪುರ ಜಿಲ್ಲೆಯಲ್ಲಿಯೂ ಸಹ ಶ್ರೀ ಸಹ್ಯಾದ್ರಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್ ವಿಜಯಪುರದಲ್ಲಿಯೂ ಪರೀಕ್ಷೆಗಳು ನಡೆಯಲಿದೆ.

 • Share this:

  ವಿಜಯಪುರ : ವಿಜಯಪುರ ನಗರದ (Vijayapura News) ಬಸವೇಶ್ವರ ವಿದ್ಯಾವರ್ಧಕ ಸಂಘದ ಶ್ಯಾಮೀಲಿ ಡಿ.ಎಡ್ ಕಾಲೇಜ್​ನಲ್ಲಿ ಮತಗಟ್ಟೆ ನಂ.77,78,79, 80,81, 82 ಮತ್ತು 83 ರಲ್ಲಿ ದಿನಾಂಕ : 28-10-2022 ರಂದು ಜರುಗಲಿರುವ ಮತದಾನ ಪ್ರಕ್ರಿಯೆಗೆ (Voting Process) ಹಾಗೂ ಶ್ರೀ ಸಹ್ಯಾದ್ರಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್​ನ 3ನೇ ಮಹಡಿಯಲ್ಲಿ ಜರುಗುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷಾ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷಾ ಪ್ರಕ್ರಿಯೆ ನಡೆಸಲು ಷರತ್ತುಗಳನ್ನು ವಿಧಿಸಿ, ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶಿಸಿದ್ದಾರೆ.


  ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಮೈಸೂರು ಇದರಡಿಯಲ್ಲಿ ಪ್ರಸಕ್ತ 2021-22ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ರಾಜ್ಯದಲ್ಲಿ ಏಕಕಾಲಕ್ಕೆ ಆರಂಭಗೊಂಡಿದ್ದು, ನವೆಂಬರ್ 11 ರವರೆಗೆ ಜರುಗಲಿವೆ. ಅದರಂತೆ ವಿಜಯಪುರ ಜಿಲ್ಲೆಯಲ್ಲಿಯೂ ಸಹ ಶ್ರೀ ಸಹ್ಯಾದ್ರಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್ ವಿಜಯಪುರದಲ್ಲಿಯೂ ಪರೀಕ್ಷೆಗಳು ನಡೆಯಲಿದೆ.


  7 ಚುನಾವಣಾ ಮತಗಟ್ಟೆ
  ವಿಜಯಪುರ ಮಹಾನಗರ ಪಾಲಿಕೆಗೆ ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಈ ಕಾಲೇಜಿನಲ್ಲಿ 7 ಚುನಾವಣಾ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಕ್ಟೋಬರ್ 28ರಂದು ಕಾಲೇಜಿನ 3ನೇ ಮಹಡಿಯಲ್ಲಿ ಪರೀಕ್ಷೆ ನಡೆಸಲು ಷರತ್ತುಗಳನ್ನು ವಿಧಿಸಿ, ಆದೇಶಿಸಲಾಗಿದೆ.


  ಇದನ್ನೂ ಓದಿ: Lumpy Skin Disease: ದನಕರು ರಕ್ಷಣೆಗೆ ವಿಜಯನಗರದಲ್ಲಿ ಅಜ್ಜಿ ಆಚರಣೆ!


  ಕಡ್ಡಾಯವಾಗಿ ಗುರುತಿನ ಚೀಟಿಯೊಂದಿಗೆ ಆಗಮಿಸಬೇಕು
  ಮಹಾನಗರ ಪಾಲಿಕೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ,ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯೊಂದಿಗೆ ಆಗಮಿಸಬೇಕು. ಚುನಾವಣಾ ಅಭ್ಯರ್ಥಿಗಳು, ಏಜೆಂಟರು, ಮತಗಟ್ಟೆ ಏಜೆಂಟರು ಹಾಗೂ ಮತದಾನಕ್ಕೆ ಆಗಮಿಸುವ ಮತದಾರರು ಕಡ್ಡಾಯವಾಗಿ ಗುರುತಿನ ಚೀಟಿಯೊಂದಿಗೆ ಆಗಮಿಸಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು.


  ಇದನ್ನೂ ಓದಿ: Ilkal Saree Special: ಇಳಕಲ್ ಸೀರೆ ಹೀಗೆ ತಯಾರಾಗುತ್ತೆ! ನೀವೂ ಮಿರಮಿರ ಮಿಂಚಿ!


  ತಾತ್ಕಾಲಿಕವಾಗಿ ಗುರುತಿಸಲಾದ ಪ್ರತ್ಯೇಕ ಮಾರ್ಗದಿಂದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಬೇಕು. ಈ ಮೇಲಿನ 7 ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


  ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: