• Home
  • »
  • News
  • »
  • vijayapura
  • »
  • Vijayapura: ನಾಯಿಗಳಿಗೂ ಬೇಕು ಆಸರೆ, ಚಳಿಯಿಂದ ರಕ್ಷಿಸೋಕೆ ಬೆಡ್​ಶೀಟ್ ರಕ್ಷಣೆ

Vijayapura: ನಾಯಿಗಳಿಗೂ ಬೇಕು ಆಸರೆ, ಚಳಿಯಿಂದ ರಕ್ಷಿಸೋಕೆ ಬೆಡ್​ಶೀಟ್ ರಕ್ಷಣೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮೈ ಕೊರೆಯುವ ಚಳಿಯಲ್ಲಿ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳೋದೆ ಕಷ್ಟಕರ. ಅಂತದ್ದರಲ್ಲಿ ತಮ್ಮ ಸಾಕು ಪ್ರಾಣಿಗಳ ಬಗ್ಗೆ ಚಂದ್ರಶೇಖರ ರೆಡ್ಡಿ ತೋರುತ್ತಿರುವ ಈ ಕಾಳಜಿ ನಿಜಕ್ಕೂ ಗ್ರೇಟ್ ಎನ್ನಬೇಕು.

  • Share this:

    ನಾಯಿಗೂ ಬಂತು ನೋಡಿ ಬೆಡ್ಡು, ಬೆಡ್ ಶೀಟು. ಚಳಿಗೆ ಹೊದ್ದು ಮಲಗಿದ್ರೆ ನಾಯಿಯ ಸುಖನಿದ್ರೆಗೂ ಭಂಗವಿಲ್ಲ. ಮೈ ನಡುಗೋ ಚಳಿ ನಡುವೆ ಸಾಕು ಪ್ರಾಣಿಗಳನ್ನ ಮರೆಯಬಾರ್ದು ಅನ್ನೋದನ್ನ ಈ ದಂಪತಿ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ನಮ್ಮ ಕಾವಲಿಗಿರೋ ಶ್ವಾನವನ್ನೂ ಬೆಚ್ಚಗಿರಿಸುತ್ತಿದ್ದಾರೆ.

    ಸದ್ಯ ರಾಜ್ಯದ ಬಿಸಿಲ ನಗರಿಯನ್ನೂ ಈ ಕೊರೆಯುವ ಚಳಿ ಬಿಟ್ಟಿಲ್ಲ. ಮನುಷ್ಯನಾದ್ರೆ ಚಳಿಯಿಂದ ರಕ್ಷಣೆ ಮಾಡ್ಕೊಳ್ಳೋಕೆ ಹೊದಿಕೆ ಮೊರೆ ಹೋಗ್ತಾನೆ. ಆದ್ರೆ ಈ ಸಾಕು ಪ್ರಾಣಿಗಳು ಹೇಗಿರ್ಬೇಡ? ಅದ್ಕೇ ನೋಡಿ ವಿಜಯಪುರದ ಮನಗೂಳಿ ಪಟ್ಟಣದ ಚಂದ್ರಶೇಖರ ರೆಡ್ಡಿ ಮತ್ತು ಅಶ್ವಿನಿ ರೆಡ್ಡಿ ದಂಪತಿ ತಮ್ಮ ಮನೆಯಲ್ಲಿರುವ ಸಾಕು ಪ್ರಾಣಿಗಳನ್ನು ನಡುಗೋ ಚಳಿಯಿಂದ ರಕ್ಷಿಸಲು ಮುಂದಾಗಿದ್ದಾರೆ.


    ವಿವಿಧ ಪ್ರಾಣಿ ಪಕ್ಷಿಗಳಿಗೆ ಬೆಚ್ಚನೆಯ ಹೊದಿಕೆ
    ತಮ್ಮ ಮನೆಯಲ್ಲಿರುವ ನಾಯಿಗಳಿಗೆ ಬೆಡ್ ಹಾಗೂ ಬೆಡ್ ಶೀಟ್ ಹೊದಿಸಿ ಅದನ್ನ ಚಳಿಯಿಂದ ರಕ್ಷಿಸುತ್ತಿದ್ದಾರೆ. ನಾಯಿಗಳೂ ಅಷ್ಟೇ ತನ್ನ ಮಾಲಿಕ ಹೊದಿಕೆ ಹೊದಿಸಬೇಕಾದರೆ ವಿನಮ್ರವಾಗಿ ಕೂತು ಆ ಬೆಡ್ ಶೀಟ್ ಒಳಗೆ ನುಸುಳಿಕೊಳ್ಳುತ್ತವೆ. ಚಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತವೆ. ಇನ್ನು ಚಂದ್ರಶೇಖರ ರೆಡ್ಡಿ ಅವರ ಮನೆಯಲ್ಲಿರೋ ಹಸುಗಳನ್ನು ಅದರ ಹಟ್ಟಿಯಲ್ಲಿ, ಬಾತುಕೋಳಿ, ಪಾರಿವಾಳ ಇನ್ನಿತರ ಪಕ್ಷಿಗಳನ್ನು ಗೂಡುಗಳಲ್ಲಿರಿಸಿ ಚಳಿಯಿಂದ  ರಕ್ಷಣೆ ನೀಡುವ ಕೆಲಸ ಮಾಡುತ್ತಿದ್ದಾರೆ.




    ವಿಜಯಪುರ ಜಿಲ್ಲೆಯಲ್ಲಿ ಸಂಜೆಯಾಗುತ್ತಲೇ ಶುರುವಾಗೋ ಮೈ ನಡುಗುವ ಚಳಿ ಪ್ರತಿ ದಿನ ಬೆಳಗ್ಗೆ 11ರವರೆಗೂ ಖಡಕ್ ಆಗೇ ಇರುತ್ತೆ. ಸದಾ ಸೂರ್ಯನ ಪ್ರಖರತೆಯಿಂದ ನಲುಗುವ ವಿಜಯಪುರ ಈಗ ಚಳಿ ಪ್ರತಾಪಕ್ಕೆ ತಣ್ಣಗಾಗಿದೆ.


    ಇದನ್ನೂ ಓದಿ: Bagalkot: ತೆರಬಂಡಿ ಸ್ಪರ್ಧೆಯಲ್ಲಿ ಗೆದ್ದರೆ ಕಾರ್​, ಬೈಕ್ ಬಹುಮಾನ!


    ಈ ನಡುವೆ ಮನಗೂಳಿ ಪಟ್ಟಣದ ಚಂದ್ರಶೇಖರ ರೆಡ್ಡಿ ಮತ್ತು ಅಶ್ವಿನಿ ರೆಡ್ಡಿ ದಂಪತಿಗಳು ತಾವು ಸಾಕುತ್ತಿರುವ ಗೋವು, ಬಾತುಕೋಳಿ, ಟರ್ಕಿ, ಜವಾರಿ, ಗಿಣಿಯಾ ಪೌಲ್, ಗಿರಿರಾಜ ಕೋಳಿಗಳು, ಪಾರಿವಾಳ ಸೇರಿದಂತೆ ಹತ್ತಾರು ಮುಧೋಳ ಶ್ವಾನಗಳ ರಕ್ಷಣೆಗೆ ಮುಂದಾಗಿದ್ದಾರೆ. ಚಳಿಯಿಂದ ತಾವು ಹೇಗೆ ರಕ್ಷಿಸಿಕೊಳ್ಳುವರೋ ಅದೇ ರೀತಿಯಾಗಿ ಸಾಕುಪ್ರಾಣಿಗಳನ್ನು ರಕ್ಷಿಸ್ತಿದ್ದಾರೆ.


    ಇದನ್ನೂ ಓದಿ: Siddheshwar Temple: ವಿಜಯಪುರದ ಸಿದ್ದೇಶ್ವರ ಜಾತ್ರೆಯ ವೈಭವ ಹೀಗಿತ್ತು ನೋಡಿ


    ಒಟ್ಟಿನಲ್ಲಿ ಮೈ ಕೊರೆಯುವ ಚಳಿಯಲ್ಲಿ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳೋದೆ ಕಷ್ಟಕರ. ಅಂತದ್ದರಲ್ಲಿ ತಮ್ಮ ಸಾಕು ಪ್ರಾಣಿಗಳ ಬಗ್ಗೆ ಚಂದ್ರಶೇಖರ ರೆಡ್ಡಿ ತೋರುತ್ತಿರುವ ಈ ಕಾಳಜಿ ನಿಜಕ್ಕೂ ಗ್ರೇಟ್ ಎನ್ನಬೇಕು.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: