Vijayapura: ಬಟ್ಟೆ ಅಂಗಡಿಲಿ ಸಂಸ್ಕೃತ! ಮುಸ್ಲಿಂ ನೌಕರರ ಸಂಸ್ಕೃತ ಕೇಳೋಕೆ ಹಿತ

ಕನ್ನಡ ವ್ಯಾವಹಾರಿಕ‌ ಭಾಷೆಯಾಗಿರಲಿ ಅನ್ನೋದನ್ನ ಕೇಳಿದ್ದೀವಿ. ಆದ್ರೆ, ಇಲ್ಲೊಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದರೆ ಸಂಸ್ಕೃತ ಕಲಿಯುವುದು ಕಡ್ಡಾಯ.‌ ಅಂತಹ ಮಳಿಗೆ ಎಲ್ಲಿದೆ ಅಂತೀರಾ..? ಇಲ್ಲಿದೆ ಡಿಟೇಲ್ಸ್

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

 • Share this:
  ವಿಜಯಪುರ: ಸರ್ವೇ ಭವಂತು ಸುಖಿನಃ..ಸರ್ವೇ ಸಂತು ನಿರಾಮಯಾಃ..ಸರ್ವೇಭ್ಯಃ ಸುಪ್ರಭಾತಮ್.. ಭವತಃ ನಾಮ ಕಿಮ್ ಎಂದು ಚಕಚಕನೆ ಚೊಕ್ಕ ಸಂಸ್ಕೃತದಲ್ಲಿ ಇಲ್ಲಿರೋ ಪ್ರತಿಯೊಬ್ಬರು ಸಂಸ್ಕೃತ (Sanskrit) ಶ್ಲೋಕ ಹೇಳಬಲ್ಲರು. ಅಷ್ಟು ಮಾತ್ರವಲ್ಲ ಸಂಸ್ಕೃತದಲ್ಲೇ ವ್ಯವಹಾರ ಮಾಡಬಲ್ಲರು. ಹಾಗಂತ ಇವರು ಯಾರೂ ವೇದಪಾಠಶಾಲೆಯ ವಿದ್ಯಾರ್ಥಿಗಳಲ್ಲ, ಬಟ್ಟೆ ಅಂಗಡಿ ಸಿಬ್ಬಂದಿ! ಹೌದು, ಬಟ್ಟೆ ಅಂಗಡಿ ಸಿಬ್ಬಂದಿ ಸಂಸ್ಕೃತ (Sanskrit In Cloth Shop) ಮಾತನಾಡುತ್ತಾರೆ ಅಂದ್ರೆ ನೀವೆಲ್ಲ ಆಶ್ಚರ್ಯ ಆಗಬಹುದು. ನೀವೂ ಸಂಸ್ಕೃತದಲ್ಲೇ ವ್ಯವಹಾರ ಮಾಡೋ ಬಟ್ಟೆ ಅಂಗಡಿಲಿ ಏನನ್ನಾದ್ರೂ ಖರೀದಿ ಮಾಡ್ಬೆಕಂದ್ರೆ ವಿಜಯಪುರಕ್ಕೆ (Vijayapura) ಬರಬೇಕು.

  ಮುಸ್ಲಿಮರೇ ಜಾಸ್ತಿ!
  ಹೀಗೆ ಬಟ್ಟೆ ಅಂಗಡಿಲಿ ಸಂಸ್ಕೃತ ಮಾತು ಆಡಬೇಕೆನ್ನುವುದಕ್ಕೂ ಕಾರಣ ಅದರ ಮಾಲೀಕ ರಾಮ ಸಿಂಗ್ ರಜಪೂತ್. ಮೂಲತಃ ರಾಜಸ್ಥಾನದವರಾದ ಇವರು ವಿಜಯಪುರದಲ್ಲಿ ಎರಡ್ಮೂರು ತಲೆಮಾರುಗಳಿಂದ ಬಟ್ಟೆ ವ್ಯಾಪಾರ ನಡೆಸುತ್ತಿದ್ದಾರೆ. ಅವರ ಬಟ್ಟೆ ಅಂಗಡಿಲಿ 70 ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಅದ್ರಲ್ಲಿ ಬಹುತೇಕರು ಮುಸ್ಲಿಂ ಸಮುದಾಯದವರು ಅನ್ನೋದು ಇನ್ನೊಂದು ವಿಶೇಷ!

  ಇದನ್ನೂ ಓದಿ: Yellamma Temple: ಬೇಡಿದ ವರ ನೀಡುವ ತಾಯಿ ಯಲ್ಲಮ್ಮ; ಎಲ್ಲಿದೆ ದೇವಸ್ಥಾನ?

  ಸಂಸ್ಕೃತ ಕಂಪಲ್ಸರಿ!
  ಸಿದ್ಧೇಶ್ವರ ಮಠದ ಜ್ಞಾನಯೋಗಾಶ್ರಮಕ್ಕೆ ಸಂಸಾರ ಸಮೇತರಾಗಿ ಹೋಗಿದ್ದ ರಾಮ ಸಿಂಗ್ ರಜಪೂತ್ ಅವ್ರಿಗೆ ಅಲ್ಲಿನ ಸಂಸ್ಕೃತ ಪ್ರವಚನದ ಮೇಲೆ ಒಲವು ಮೂಡಿತ್ತು. ಆ ಕ್ಷಣವೇ ಸಂಸ್ಕೃತವನ್ನು ಜಗದಗಲ ಹಬ್ಬಿಸೋ ಪಣ ತೊಟ್ಟುಬಿಟ್ರು. ತಾವೇ ಸಂಸ್ಕೃತ ಕಲಿತು ತಮ್ಮ ಬಟ್ಟೆ ಅಂಗಡಿಯ ಉದ್ಯೋಗಿಗಳಿಗೆ ಸಂಸ್ಕೃತ ಕಲಿಸೋಕೆ ಶುರು ಮಾಡ್ತಾರೆ. ಸಂಸ್ಕೃತ ಕಲಿತರೆ ಮಾತ್ರ ತಮ್ಮ ಅಂಗಡಿಲಿ ಕೆಲಸ ಅಂತ ರೂಲ್ಸ್ ಮಾಡಿಬಿಡ್ತಾರೆ. ಮುಂದೆ ಇದು 10 ಸಾವಿರಕ್ಕೂ ಹೆಚ್ಚು ಜನರು ಸಂಸ್ಕೃತ ಕಲಿಯೋಕೆ ಕಾರಣವಾಯಿತು!

  ಇದನ್ನೂ ಓದಿ: Real Bahubali Vijayapura: ಈ ಬಾಲಕ ರಿಯಲ್ ಬಾಹುಬಲಿ! ತಾಕತ್ತಿಗೆ ಬೆಚ್ಚಿಬೀಳುವಿರಿ!

  ಸಂಸ್ಕೃತ ಲೋಕವೇ ಸೃಷ್ಟಿ!
  ಏನನ್ನೋ ಮಾಡ್ಬೇಕಂದ್ರೆ ದೊಡ್ಡದಾಗೇ ಮಾಡ್ಬೇಕಂತಿಲ್ಲ, ಚಿಕ್ಕದಾಗಿಯಾದರೂ ಸರಿ, ನಮ್ಮ ಕೈಲಾದಷ್ಟು ಮಾಡ್ತಾನೇ ಇದ್ರೆ ಏನು ಬೇಕಾದ್ರೂ ಸಾಧನೆ ಮಾಡಬಹುದು ಅನ್ನೋದಕ್ಕೆ ಇವ್ರೇ ಒಳ್ಳೆ ಉದಾಹರಣೆ. ಒಟ್ಟಿನಲ್ಲಿ ರಾಮ ಸಿಂಗ್ ಅವರು ತಮ್ಮ ಬಟ್ಟೆ ಅಂಗಡಿಯಿಂದ ಸಂಸ್ಕೃತ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದಾರೆ ಅಂತಿದ್ದಾರೆ ವಿಜಯಪುರದ ಮಂದಿ.

  ವರದಿ: ಪ್ರಶಾಂತ್ ಹೂಗಾರ್, ವಿಜಯಪುರ
  Published by:ಗುರುಗಣೇಶ ಡಬ್ಗುಳಿ
  First published: