• Home
  • »
  • News
  • »
  • vijayapura
  • »
  • Success Story: ಟೇಕ್ವಾಂಡೋ ಯುದ್ಧ ಕ್ರೀಡೆಯಲ್ಲಿ ಚಿನ್ನ ಗೆದ್ದ ವಿಜಯಪುರದ ಬಾಲಕ

Success Story: ಟೇಕ್ವಾಂಡೋ ಯುದ್ಧ ಕ್ರೀಡೆಯಲ್ಲಿ ಚಿನ್ನ ಗೆದ್ದ ವಿಜಯಪುರದ ಬಾಲಕ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜಿಲ್ಲೆಯ ಯುವ ಪ್ರತಿಭೆ ಅಪರೂಪದ ಕ್ರೀಡೆಯಲ್ಲಿ ಚಿನ್ನ ಗೆದ್ದಿರೋದು ವಿಜಯಪುರದ ನಾಗರಿಕರಲ್ಲಿ ಖುಷಿ ಮೂಡಿಸಿದೆ. ಈ ಸಾಧಕ ಬಾಲಕನಿಗೆ ನಾವೂ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ?

  • News18 Kannada
  • Last Updated :
  • Bijapur, India
  • Share this:

    ಜಿದ್ದಾಜಿದ್ದಿನ ಪಂದ್ಯಾಟ. ಕಿಕ್, ಪಂಚ್​ಗಳ ಸರಮಾಲೆ, ಕೊನೆಗೂ ಗೆದ್ಧೆ ಬಿಟ್ರು ನೋಡಿ ವಿಜಯಪುರದ ಕುವರ. ಇಲ್ಲಿ ಹೀಗೆ ಹುರುಪಿನಿಂದ ನಡೆಯುತ್ತಿರೋದು ಕರಾಟೆ, ಬಾಕ್ಸಿಂಗ್ ಅಲ್ಲ. ಅದನ್ನೂ ಮೀರಿಸುವ ಟೇಕ್ವಾಂಡೋ ಗೇಮ್. ಈ ಆಟದಲ್ಲಿ ನಮ್ ವಿಜಯಪುರದ (Vijayapura News) ಈ ಬಾಲಕನ ಸಾಧನೆ ಕೇಳಿದ್ರೆ ನೀವೂ ಶಹಬ್ಬಾಸ್ ಅಂತೀರಿ! ಕೊರಿಯಾದ ಸಮರ ಕಲೆ, ಚೈನಾದ ಮಾರ್ಷಲ್ ಆರ್ಟ್​ಗಳಂತೆ (Marshal Arts) ಟೇಕ್ವಾಂಡೋ (Taekwondo) ಕೂಡ ಯುದ್ಧ ಕ್ರೀಡೆ. ವಿಜಯಪುರದ ಬಾಲಕನೊಬ್ಬ ಈ ಅಪರೂಪದ ಆಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿಜಯಪುರದ ಸ್ಟೇಶನ್ ರಸ್ತೆಯ ಅಂಬೇಡ್ಕರ್ ನಗರ ನಿವಾಸಿ ಸುನೀಲ್ ಕಾಂಬಳೆ ಪುತ್ರ ಸುಕೀಲ್ ಈ ಸಾಧನೆ ಮಾಡಿದ ಬಾಲಕ.


    ಕರ್ನಾಟಕ ಟೇಕ್ವಾಂಡೋ ಅಕಾಡೆಮಿ ಕೆಟಿಎ ಕಪ್-2022 ಸ್ಪರ್ಧೆಯ ಸ್ಪರ್ಧಿಸಿದ್ದ ಸುಕೀಲ್, ಶೌರ್ಯ ಪಾಟೀಲ್, ಮಧು ಗಾಗರೇ, ಭಾಗ್ಯ ಮಂಟೂರ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.


    ಇದನ್ನೂ ಓದಿ: Tagaru Kalaga: ಬಾಗಲಕೋಟೆಯಲ್ಲಿ ಮೈನವಿರೇಳಿಸಿದ ಟಗರು ಕಾಳಗ! ವಿಡಿಯೋ ನೋಡಿ


    2 ವರ್ಷಗಳಿಂದ ಟೇಕ್ವಾಂಡೊ ಕಲಿಕೆ
    ಸುಕೀಲ್ 11 ವರ್ಷದ ವಯಸ್ಸಿನ ವಿಭಾಗದಲ್ಲಿ ಇಬ್ಬರು ಎದುರಾಳಿಗಳನ್ನ ಸೋಲಿಸಿ ಚಿನ್ನ ಗೆದ್ದುಕೊಂಡಿದ್ದಾರೆ. ಕಳೆದ 2 ವರ್ಷಗಳಿಂದಷ್ಟೇ ಟೇಕ್ವಾಂಡೊ ಕಲಿಯುತ್ತಿರೋ ಸುಕೀಲ್ ಬಹುಬೇಗ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಈ ಬಾರಿ ರಾಜ್ಯ ಮಟ್ಟದಲ್ಲಿ ಚಿನ್ನ ಪಡೆದು ಸಾಧನೆ ಮಾಡಿದ್ದಾರೆ. 


    ಇದನ್ನೂ ಓದಿ: Haridra Thirtha: ಮಕ್ಕಳಾಗದ ಮಹಿಳೆಯರು ಇಲ್ಲೇ ಹರಕೆ ಸಲ್ಲಿಸ್ತಾರೆ; ಹರಿದ್ರಾ ತೀರ್ಥದ ವಿಶೇಷವಿದು


    ಜಿಲ್ಲೆಯ ಯುವ ಪ್ರತಿಭೆ ಅಪರೂಪದ ಕ್ರೀಡೆಯಲ್ಲಿ ಚಿನ್ನ ಗೆದ್ದಿರೋದು ವಿಜಯಪುರದ ನಾಗರಿಕರಲ್ಲಿ ಖುಷಿ ಮೂಡಿಸಿದೆ. ಈ ಸಾಧಕ ಬಾಲಕನಿಗೆ ನಾವೂ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ?


    ವರದಿ: ಪ್ರಶಾಂತ ಹೂಗಾರ ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: