• Home
  • »
  • News
  • »
  • vijayapura
  • »
  • Vijayapura: ಇದು ಪೊಲೀಸ್ ಸ್ಟೇಷನ್ ಅಂದ್ರೆ ನೀವು ನಂಬೋದೇ ಇಲ್ಲ!

Vijayapura: ಇದು ಪೊಲೀಸ್ ಸ್ಟೇಷನ್ ಅಂದ್ರೆ ನೀವು ನಂಬೋದೇ ಇಲ್ಲ!

ಇಲ್ಲಿದೆ ನೋಡಿ ಚಂದದ ಪೊಲೀಸ್ ಠಾಣೆ

"ಇಲ್ಲಿದೆ ನೋಡಿ ಚಂದದ ಪೊಲೀಸ್ ಠಾಣೆ"

ಸಮಸ್ಯೆಗಳಿಂದ ನೊಂದು ಈ ಪೊಲೀಸ್ ಸ್ಟೇಷನ್​ಗೆ ಬಂದ್ರೆ ನಿಮಗೊಂದು ಸೀಟ್ ಕಾದಿರುತ್ತೆ. ಹಸಿರು ಹಸಿರಾದ ಗಾರ್ಡನ್, ಗೋಡೆ ಮೇಲೆ ಬರಹಗಳು ಮನಸಿಗೆ ಕೊಂಚ ನೆಮ್ಮದಿ ತರುತ್ತೆ.

  • Share this:

    ಕಟ್ಟಡದ ಮೇಲೆ ಆಕರ್ಷಕ ಚಿತ್ರಗಳು. ಎದುರು ವಿಶಾಲವಾದ ಹಸಿರು ಗಾರ್ಡನ್. ಪಕ್ಷಿಗಳ ಚಿಲಿಪಿಲಿ ನಾದ. ಅವುಗಳಿಗೆ ಕುಡಿಯುವ ನೀರು- ಕಾಳುಗಳನ್ನು ಹಾಕಲು ವ್ಯವಸ್ಥೆ. ಅರೇ! ವಿಜಯಪುರದ ಜನರು ಕಂಪ್ಲೇಂಟ್ ಕೊಡ್ಬೇಕು ಅಂತ ಪೊಲೀಸ್ ಸ್ಟೇಷನ್ಗೆ ಹುಡ್ಕೊಂಡ್ರು ಬಂದ್ರೆ ಕಾಣೋದೇ ಬೇರೆ! ಇದೇನಪ್ಪಾ ವಿಚಿತ್ರ ಅಂದ್ಕೊಂಡ್ರಾ? ಅಲ್ಲೇ ಇದೆ ವಿಜಯಪುರದಲ್ಲಿ (Vijayapura) ರೂಪು ತಳೆದಿರೋ ಜನಸ್ನೇಹಿ ಪೊಲೀಸ್ ಸ್ಟೇಷನ್ (Vijayapura Janasnehi Police Station) ವಿಶೇಷ!


    ಪೊಲೀಸ್ ಠಾಣೆ ಅಂದ ತಕ್ಷಣ ಚೂರು ಭಯದ ಭಾವನೆ ಈಗ್ಲೂ ಇದೆ. ಇದ್ರಿಂದ ತಮ್ಮ ಸಮಸ್ಯೆ ಹೇಳ್ಕೊಳ್ಳೋಕೂ ಜನರು ಹಿಂಜರೀತಾರೆ. ಹೇಗಾದ್ರೂ ಈ ಮನಸ್ಥಿತಿನ ಬದಲಿಸ್ಬೇಕು ಅಂತ ವಿಜಯಪುರಕ್ಕೆ ಪಿಎಸ್ಐ ಆಗಿ 3 ತಿಂಗಳ ಹಿಂದೆ ಬಂದ ಯತೀಶ್ ಕೆ.ಎನ್ ಹೊಸ ಪ್ರಯತ್ನಕ್ಕೆ ಕೈಹಾಕೇಬಿಟ್ರು. ವಿಜಯಪುರದ ಆದರ್ಶ ನಗರ ಠಾಣೆ ನಗರವೇ ಪ್ರಯೋಗಶಾಲೆ ಆಯ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸ್ಥಳೀಯರ ಸಹಕಾರದಲ್ಲಿ ಠಾಣೆಗೆ ಕಾಂಪೌಂಡ್ ನಿರ್ಮಿಸಿ, ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಬಳಿಯಲಾಯ್ತು.


    ಇದನ್ನೂ ಓದಿ: Vijayapura Dasara: ಇದು ವಿಜಯಪುರ ದಸರಾ! ಅದ್ದೂರಿತನ ನೋಡಿದ್ರೆ ಆಶ್ಚರ್ಯಪಡ್ತೀರಿ!


    ಬಳಿಕ ಅಪರಾಧ ಜಗತ್ತಿನ ಕುರಿತು ಜಾಗೃತಿ ಮೂಡಿಸುವ ಚಿತ್ರಗಳನ್ನು ಸ್ಥಳೀಯ ಕಲಾವಿದರ ಸಹಾಯದಿಂದ ಬಿಡಿಸಿದ್ರು. ಆಗ ಸೃಷ್ಟಿಯಾಗಿದ್ದು ಚಂದಚಂದ ಪೊಲೀಸ್ ಸ್ಟೇಷನ್!


    Adarsh Nagar Police Station
    ಆದರ್ಶ ನಗರ ಪೊಲೀಸ್ ಸ್ಟೇಷನ್​ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ನೊಂದು ಬಂದರೆ ನೆಮ್ಮದಿ ಸಿಗೋದು ಪಕ್ಕಾ
    ಸಮಸ್ಯೆಗಳಿಂದ ನೊಂದು ಈ ಪೊಲೀಸ್ ಸ್ಟೇಷನ್​ಗೆ ಬಂದ್ರೆ ನಿಮಗೊಂದು ಸೀಟ್ ಕಾದಿರುತ್ತೆ. ಹಸಿರು ಹಸಿರಾದ ಗಾರ್ಡನ್, ಗೋಡೆ ಮೇಲೆ ಬರಹಗಳು ಮನಸಿಗೆ ಕೊಂಚ ನೆಮ್ಮದಿ ತರುತ್ತೆ.


    ಇದನ್ನೂ ಓದಿ: Vijayapura Gandhi: ವಿಜಯಪುರದಲ್ಲಿ ಗಾಂಧಿ! ಬಾಪು ಇಲ್ಲೇ ಇದ್ದಾರೆ ನೋಡಿ


    ಒಟ್ಟಿನಲ್ಲಿ ಪೊಲೀಸ್ ಠಾಣೆ ಅಂದ್ರೆ ಭಯ ಪಡುವ ಮನಸ್ಥಿತಿಯನ್ನು ತೊಡೆದುಹಾಕೋಕೆ ವಿಜಯಪುರದಲ್ಲಿ ಒಳ್ಳೆ ಪ್ರಯತ್ನವಂತೂ ಶುರುವಾಗಿದೆ. ಇದೇ ಪ್ರಯೋಗ ಎಲ್ಲಾ ಊರಲ್ಲೂ ಸಾಧ್ಯವಾದ್ರೆ ಜನರ ಸಮಸ್ಯೆಗಳೂ ಮಾಯ ಆಗಬಹುದು ಅಲ್ವೇ?


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: