Vijayapura: ಮಳೆಗಾಗಿ 5 ದಿನ ನಿರಂತರ ಭಜನೆ! ಕೊನೆಗೂ ಮಳೆ ಬಂತಾ? ವಿಡಿಯೋ ನೋಡಿ

X
ಭಜನೆಯ ದೃಶ್ಯ

"ಭಜನೆಯ ದೃಶ್ಯ"

ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ, ಅತ್ತ ಉತ್ತರ ಕರ್ನಾಟಕದ ಭಾಗದ ಹಲವೆಡೆ ಇನ್ನೂ ಮಳೆಯೇ ಆರಂಭವಾಗಿಲ್ಲ. ಹೀಗಾಗಿ, ಅಲ್ಲಿನ ಜನರು ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ ತಮ್ಮ ವಿಶಿಷ್ಟ ಸಂಪ್ರದಾಯದ ಮೊರೆ ಹೋಗಿದ್ದಾರೆ.

  • Share this:

    ವಿಜಯಪುರ: ಜೂನ್ ತಿಂಗಳು ಕಳೆದರೂ ಉತ್ತರ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯಲ್ಲಿ (Vijayapura News) ಮುಂಗಾರು ಮಳೆಯ ಆಗಮನವೇ ಆಗಿಲ್ಲ. ಹೀಗಾಗಿ ಉತ್ತರ ಕರ್ನಾಟಕ (North Karnataka)ಭಾಗದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಬಿತ್ತನೆ ಮಾಡಲು ಕಾಯುತ್ತಿರುವ ರೈತರು, ಮಳೆ ಕಾಣದ ಹಿನ್ನೆಲೆ ಊರ ಸಂಪ್ರದಾಯಗಳ ಮೊರೆ ಹೋಗಿದ್ದಾರೆ. ಶಿವ ಭಜನೆ ಮತ್ತು ಗುರ್ಜಿ ಪೂಜೆಯ ಮೂಲಕ ವರುಣ ದೇವನನ್ನು ಒಲಿಸಲು ಮುಂದಾಗಿದ್ದಾರೆ. ಹೇಗಾದರೂ ಮಾಡಿ ಮಳೆರಾಯನ ಒಲಿಸಿಕೊಳ್ಳಲು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ನರಸಲಗಿ ಗ್ರಾಮದ ಜನರು ವಿಶೇಷ ಭಜನೆಗೆ ಮುಂದಾಗಿದ್ದಾರೆ.


    ನರಸಲಗಿ ಗ್ರಾಮಸ್ಥರಿಂದ ಮಳೆಗಾಗಿ ಭಜನೆ
    5 ದಿನಗಳ ಕಾಲ ನಿರಂತರವಾಗಿ ಹಗಲು ರಾತ್ರಿ ಎನ್ನದೆ ಭಜನೆ ಮಾಡಿದ್ದಾರೆ. ವರುಣನ ಕೃಪೆಗಾಗಿ ಗ್ರಾಮದ ಪವಾಡ ಬಸವೇಶ್ವರ ದೇವರ ದೇಗುಲದಲ್ಲಿ ಐದು ದಿನಗಳವರೆಗೆ ನಿರಂತರ 24 ಘಂಟೆಗಳ ಕಾಲ ಸರದಿ ರೀತಿಯಲ್ಲಿ ಗ್ರಾಮಸ್ಥರು ಭಜನೆ ನಡೆಸಿದ್ದಾರೆ.


    ನಿರಂತರ ಭಜನೆಗೆ ಮಳೆಯಾಗೋ ನಂಬಿಕೆ
    ಮಳೆಗಾಗಿ ದೇವರ ಬಳಿಯಲ್ಲಿ ನಾನಾ ರೀತಿಯಲ್ಲಿ ಪಾರ್ಥನೆ ಮಾಡಲಾಗುತ್ತೆ. ಆದ್ರೆ ನರಸಲಗಿ ಗ್ರಾಮದಲ್ಲಿ ಮಳೆಯಾಗದೇ ಇದ್ರೆ ಈ ದೇಗುಲದಲ್ಲಿ ನಿರಂತರವಾಗಿ ಭಜನೆ ಮಾಡುತ್ತಾರೆ. 5 ದಿನಗಳ ಕಾಲ ಹೀಗೆ ಸತತವಾಗಿ ಭಜನೆ ಮಾಡಿದ್ರೆ ಮಳೆ ಪಕ್ಕಾ ಎನ್ನುವ ನಂಬಿಕೆ ಇವರದ್ದು. 5 ದಿನಗಳ ಕಾಲ ನಿರಂತರವಾಗಿ ಹಗಲು-ರಾತ್ರಿ ಬಿಡದೆ ಭಜನೆ ಮಾಡುವ ಪದ್ದತಿ ಹಿಂದಿನಿಂದಲೂ ಬಂದಿದೆ. ಭಜನೆಗೆ ದೇವರು ಮಳೆ ಸುರಿಸುವ ಅಗಾಧವಾದ ನಂಬಿಕೆ ಈ ಊರಿನಲ್ಲಿದೆ.


    ಮಕ್ಕಳು ಮಹಿಳೆಯರಿಂದ ಗುರ್ಜಿ ಸೇವೆ
    ಇನ್ನೊಂದೆಡೆ ಮಕ್ಕಳು ಮಹಿಳೆಯರು ಸೇರಿ ಗುರ್ಜಿಯನ್ನ ಹೊತ್ತುಕೊಂಡು ಮನೆ ಮನೆಗೆ ತೆರಳುತ್ತಾರೆ. ಮನೆಯ ಮುಂದೆ ಮಹಿಳೆಯರು ಗುರ್ಜಿಗೆ ನೀರು ಹಾಕಿ ವಿಶಿಷ್ಟ ಪೂಜೆಯನ್ನ ಸಲ್ಲಿಸುತ್ತಾರೆ. ಈ ವೇಳೆ ಮಹಿಳೆಯರು ಜನಪದ ಹಾಡು ಹಾಡುತ್ತ ಮಳೆಗಾಗಿ ಪ್ರಾರ್ಥನೆ ಮಾಡುತ್ತಾರೆ. ಹೀಗೆ ಊರ ತುಂಬೆಲ್ಲ ಪ್ರದಕ್ಷಿಣೆ ಹಾಕಿ ದವಸ ಧಾನ್ಯ ಪಡೆದು ಗ್ರಾಮದ ದೇವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಲಾಗುತ್ತದೆ.


    ಇದನ್ನೂ ಓದಿ: Vijayapura Jaggery Tea: ಕುಡಿದೋನೆ ಬಲ್ಲ ವಿಜಯಪುರ ಬೆಲ್ಲದ ಚಹಾದ ಸ್ವಾದ! ವಿಡಿಯೋ ನೋಡಿ


    Narasalgi, Karnataka ಭಜನೆ ನಡೆದ ಊರಿಗೆ ಬರಲು ದಾರಿ..(ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]


    ಇದನ್ನೂ ಓದಿ: Kittur Rani Chennamma Zoo: ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಹುಲಿ ಸಫಾರಿ! ವಿಡಿಯೋ ನೋಡಿ


    ಭಜನೆ ನಡೆದ ಊರಿಗೆ ಬರಲು ದಾರಿ..(ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
    ಭಜನೆಗೆ ಬರೋರು ಮಡಿ ಸ್ನಾನ ಮಾಡಿ ಮಡಿಯುಟ್ಟು ದೇವಸ್ಥಾನಕ್ಕೆ ಬರಬೇಕು. ಕೇಸರಿ ಲುಂಗಿ, ಅಂಗವಸ್ತ್ರ ಧರಿಸಿ ಧ್ಯಾನ ಭಜನೆಯನ್ನ ಮಾಡುತ್ತಾರೆ. 5 ದಿನಗಳ ಕಾಲ, ಐವರು ಯುವಕರಿಂದ ಶಿವನ ಭಜನೆ ಮಾಡುವ ಪದ್ದತಿ ಇದೆ. ಹೀಗೆ ಭಜನೆಯಲ್ಲಿ ಸಂಪೂರ್ಣವಾಗಿ ಶಿವಧ್ಯಾನ ನಡೆಸಲಾಗುತ್ತೆ. ಶಿವನ ಭಜನೆಗಳಿಗೆ ಇಲ್ಲಿ ಆದ್ಯತೆ ಇರುತ್ತೆ. ‘‘ಶಿವ ಶಿವನೆಂದರೇ ಭಯವಿಲ್ಲ‘‘ ಎನ್ನುವಂತೆ, ಶಿವನಾಮ ಸ್ಮರಣೆಯಿಂದ ಮಳೆಯಾಗುತ್ತೆ ಅನ್ನೋ ನಂಬಿಕೆ ಇದೆ. ಅವರ ನಂಬಿಕೆ ನೆರವೇರಲಿ ಎಂದು ಆಶಿಸೋಣ ಅಲ್ಲವೇ..


    ವರದಿ: ಪ್ರಶಾಂತ ಹೂಗಾರ ನ್ಯೂಸ್18 ಕನ್ನಡ ವಿಜಯಪುರ

    Published by:guruganesh bhat
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು