Vijayapura: ಗಣಪತಿ ವಿಸರ್ಜನೆಗಾಗಿ ಪಾಲಿಕೆಯಿಂದಲೇ ವಿಸರ್ಜನಾ ಕೇಂದ್ರ; ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗಣೇಶ ಮೂರ್ತಿ ವಿಸರ್ಜನೆಗಾಗಿ ಮಹಾನಗರ ಪಾಲಿಕೆಯೇ ಹೊಸ ಯೋಜನೆ ರೂಪಿಸಿದೆ. ಕೃತಕ ಹೊಂಡಗಳನ್ನು ನಿರ್ಮಿಸಿ ಅವುಗಳ ಮೂಲಕವೇ ವಿಸರ್ಜನಾ ಕೇಂದ್ರಗಳನ್ನು ಪಾಲಿಕೆಯೇ ನಿರ್ಮಿಸಿದೆ.

  • Share this:

ವಿಜಯಪುರ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ತಾತ್ಕಾಲಿಕ ಕೃತಕ ಹೊಂಡ ನಿರ್ಮಿಸಲಾಗಿದೆ. ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ ಅವರು ತಿಳಿಸಿದ್ದಾರೆ. ಹೀಗಾಗಿ ವಿಜಯಪುರ ಮಹಾನಗರ ಪಾಲಿಕೆ (Vijayapura) ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು (Ganesh Chaturthi) ವಿಸರ್ಜಿಸಲು ಪಾಲಿಕೆ ವತಿಯಿಂದಲೇ ಅವಕಾಶ ಕಲ್ಪಿಸಲಾಗಿದೆ. ಆಯಾಯ ವಾರ್ಡ್ ವ್ಯಾಪ್ತಿಯಲ್ಲಿನ ಜನರು ತಮ್ಮ ವಾರ್ಡ್ ವ್ಯಾಪ್ತಿಗೊಳಪಟ್ಟ ಕೃತಕ ಹೊಂಡಗಳಲ್ಲಿ ವಿಸರ್ಜಿಸುವುದಾಗಿದೆ. ಹಾಗಿದ್ದರೆ ತಮ್ಮ ವಾರ್ಡ್ ಯಾವುದು? ಎಲ್ಲಿದೆ ವಿಸರ್ಜನಾ ಕೇಂದ್ರ ಹಾಗೂ ಸಂಪರ್ಕಿಸಬೇಕಾದ ಎಲ್ಲ ಮಾಹಿತಿಗಳು ಇಲ್ಲಿವೆ.


ಆರೋಗ್ಯ ಮೇಲ್ವಿಚಾರಕರ ನೇಮಕ
ತಾತ್ಕಾಲಿಕ ಕೃತಕ ಹೊಂಡ ಹಾಗೂ ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನಗಳ ನಿರ್ವಹಣೆಗಾಗಿ ವಾರ್ಡ್​ವಾರು ಆರೋಗ್ಯ ನಿರೀಕ್ಷಕರನ್ನು ನೇಮಿಸಲಾಗಿದೆ. ಈ ಆರೋಗ್ಯ ನಿರೀಕ್ಷಕರು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ನೈರ್ಮಲ್ಯ ಮೇಲ್ವಿಚಾರಕರೊಂದಿಗೆ ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ.


ಕೃತಕ ಹೊಂಡಗಳು ಎಲ್ಲೆಲ್ಲಿ?
ವಾರ್ಡ್ ಸಂಖ್ಯೆ ಹಾಗೂ ಕೃತಕ ಹೊಂಡಗಳು ಹೀಗಿವೆ.


ವಾರ್ಡ್ ನಂಬರ್ 1 ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ, ವಾರ್ಡ್ 4 ಭೋವಿ ಕಲ್ಯಾಣ ಮಂಟಪ ಕೆ.ಎಚ್.ಬಿ.ಕಾಲೋನಿ ಹತ್ತಿರ, ವಾರ್ಡ್ 5 ಐಟಿಐ ಕಾಲೇಜ್ ಹಿಂದುಗಡೆ ಆದರ್ಶ ನಗರ ಪಾರ್ಕ್ ಶ್ರೀನಗರ ಪಾರ್ಕ್ ಹತ್ತಿರ, ವಾರ್ಡ್ ನಂಬರ್ 12 ಪಾರೇಕ ನಗರ (ಬಾವಿ ಹತ್ತಿರ) ಕಲ್ಯಾಣ ನಗರ, ವಾರ್ಡ್ 17 ಹೊಸ ಕಾರ್ಮಿಕ ಕಚೇರಿ, ವಾರ್ಡ್ 21 ಗಣೇಶ ನಗರ ಸರ್ಕಾರಿ ಆಸ್ಪತ್ರೆ ಎದುರಿಗೆ ಗಾರ್ಡನ್ , ವಾರ್ಡ್ 22 ಮಹಾನಗರ ಪಾಲಿಕೆ ಜಲನಗರ ಕಚೇರಿ ಸಾಯಿ ಪಾರ್ಕ್ ಲಕ್ಷ್ಮೀ ಗುಡಿ ಹತ್ತಿರ, ವಾರ್ಡ್ 29 ರಾಮ ನಗರ ಬಸ್ ನಿಲ್ದಾಣದ ಹಿಂದುಗಡೆ, ವಾರ್ಡ್ 31 ತಾಜ ಬಾವಡಿ ಆವರಣ.


ಇಲ್ಲೂ ಇವೆ ವಿಸರ್ಜನಾ ಕೇಂದ್ರಗಳು
ವಾರ್ಡ್ 32ರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣ, ಶಿವಾಜಿ ಸರ್ಕಲ್ ಹತ್ತಿರ, ವಾರ್ಡ್ 32 ಗುನ್ಹಾಳಕರ ಕಲ್ಯಾಣ ಮಂಟಪ ಹತ್ತಿರ ವಿದ್ಯಾ ನಗರ ರಸ್ತೆ, ಸರ್ಕಾರಿ ಆಸ್ಪತ್ರೆ ಆವರಣ ಹತ್ತಿರ, ವಾರ್ಡ್ 35 ಅಯ್ಯಪ್ಪಾ ಸ್ವಾಮಿ ಗುಡಿ ಹತ್ತಿರ ಹಾಗೂ ಶಿವ ನಗರ ಗಾರ್ಡನ್ ಹತ್ತಿರದಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ.


ಇದನ್ನೂ ಓದಿ: Real Bahubali Vijayapura: ಈ ಬಾಲಕ ರಿಯಲ್ ಬಾಹುಬಲಿ! ತಾಕತ್ತಿಗೆ ಬೆಚ್ಚಿಬೀಳುವಿರಿ!


ಹೆಚ್ಚಿನ ಮಾಹಿತಿಗಾಗಿ ಇವರನ್ನ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಮಹಾನಗರ ಪಾಲಿಕೆ ನೇಮಿಸಿರುವ ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸುವುದಾಗಿದೆ.


ವಾರ್ಡ್​ 1ರಿಂದ 3 ರವರೆಗೆ ಪರ್ವಿನ್ – 8904147893


ವಾರ್ಡ್ 4ರಿಂದ ವಾರ್ಡ್ 7ರವರೆಗೆ ಪುಂಡಲಿಕಪ್ಪ ಯಾತನೂರ – 8660534219


ವಾರ್ಡ್ ನಂಬರ್ 8ರಿಂದ ವಾರ್ಡ್ ನಂಬರ್ 11ರ ವರೆಗೆ ಅಝಾದ ಹಂಚನಾಳ – 7259660222


ವಾರ್ಡ್​ ನಂಬರ್ 12ರಿಂದ 15ರವೆರೆಗೆ ಪ್ರವೀಣ ಕಂಬಳಿ – 9164155691


ವಾರ್ಡ್ 16ರಿಂದ ವಾರ್ಡ್ ನಂಬರ್ 19ರ ವರೆಗೆ ಅಶೋಕ ಕುಮಾರ - 9449410400


ವಾರ್ಡ್ ನಂಬರ್ 20ರಿಂದ ವಾರ್ಡ್ ನಂಬರ್ 23ರ ವರೆಗೆ ವೆಂಕಟರಾಮಲು – 8971930625


ಇದನ್ನೂ ಓದಿ: Helava Community: ನಿಮ್ಮ ಅಜ್ಜ, ಮುತ್ತಜ್ಜ ಅವರಜ್ಜನ ಕಥೇನೂ ಹೇಳ್ತಾರೆ ಈ ಹೆಳವರು! ಯಾರಿವರು?


ವಾರ್ಡ್ 24ರಿಂದ ವಾರ್ಡ್ 27ರವರೆಗೆ ಶಿವಾನಂದ ಬನ್ನೂರ, ವಾರ್ಡ್ 28ರಿಂದ ವಾರ್ಡ 31ರವರೆಗೆ ರಫೀಕ ಅಹ್ಮದ ಬಳಗಾರ – 9901275276


ವಾರ್ಡ್ ನಂಬರ್ 32ರಿಂದ ವಾರ್ಡ್ 34ರವರೆಗೆ ರಾಚೋಟಿ ಬಿರಾಳ – 6360292469


ವಾರ್ಡ್ ನಂಬರ್ 35 ಪರ್ವೀನ - 8904147893ಗೆ ನೇಮಿಸಲಾಗಿದೆ.

top videos
    First published: