• Home
  • »
  • News
  • »
  • vijayapura
  • »
  • Lumpy Skin Disease: ದನಕರು ರಕ್ಷಣೆಗೆ ವಿಜಯನಗರದಲ್ಲಿ ಅಜ್ಜಿ ಆಚರಣೆ!

Lumpy Skin Disease: ದನಕರು ರಕ್ಷಣೆಗೆ ವಿಜಯನಗರದಲ್ಲಿ ಅಜ್ಜಿ ಆಚರಣೆ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವೈದ್ಯಲೋಕವೇ ಚರ್ಮಗಂಟು ರೋಗವನ್ನ ಪೂರ್ಣ ಪ್ರಮಾಣದಲ್ಲಿ ಗುಣಪಡಿಸಲಾಗದೇ ಇರುವ ಸಮಯದಲ್ಲಿ ಹಳ್ಳಿಯ ರೈತರು ಈ ಆಚರಣೆಯ ಮೊರೆ ಹೋಗಿದ್ದಾರೆ.

  • News18 Kannada
  • Last Updated :
  • Bijapur, India
  • Share this:

    ಕೈ ಮುಗಿದು ಓ.. ಎಂದು ಕೂಗುತ್ತಿರೋ ನೂರಾರು ಜನರು. ವಿವಿಧ ಧಾರ್ಮಿಕ ಆಚರಣೆ, ಭಕ್ತಿ ಭಾವ ತುಂಬಿ ತುಳುಕುತ್ತಿರುವಂಥಾ ಸನ್ನಿವೇಷ. ಇವ್ರೆಲ್ಲ ದೇವರ ಮೊರೆಯಿಡುತ್ತಿರೋದು ತಮ್ಮ ಸಾಕುಪ್ರಾಣಿಗಳಿಗಾಗಿ. ಬೇವಿನ ಸೊಪ್ಪು, ತೆಂಗಿನಕಾಯಿ, ಅರಶಿನ ಇಟ್ಟು ಪೂಜಿಸುತ್ತಾ ತಮ್ಮ ದನ ಕರುಗಳನ್ನು ರಕ್ಷಿಸು ಅಂತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಹೌದು, ಗೋವುಗಳಲ್ಲಿ ಕಾಣಿಸಿಕೊಂಡ ಚರ್ಮಗಂಟು ರೋಗದಿಂದ (Lumpy skin Disease) ಮುಕ್ತಿ ಮಾಡಪ್ಪಾ ಅಂತಾ ಇವ್ರೆಲ್ಲ ಅಜ್ಜಿ ಆಚರಣೆ ನಡೆಸಿ ರಕ್ಷೆ ಬೇಡುತ್ತಿದ್ದಾರೆ.


    ಸಾಕು ಪ್ರಾಣಿಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ರೈತರ ನಿದ್ದೆಗೆಡಿಸಿದೆ. ಹೀಗಾಗಿ ವಿಜಯನಗರದ ರೈತರು ಅಜ್ಜಿ ಆಚರಣೆ ಮೂಲಕ ಊರಿಗೆ ಬಂದ ಮಾರಿಯನ್ನು ದೂರ ಮಾಡಲು ಮುಂದಾಗಿದ್ದಾರೆ.


    ಹರಪನಹಳ್ಳಿ ತಾಲೂಕಿನಾದ್ಯಂತ ಹೋಳಿಗೆ ಎಡೆ ಮಾಡಿ ಊರಿನ ಗಡಿಯಲ್ಲಿಟ್ಟು ಊರಿನ ಮಾರಿಯನ್ನ ಓಡಿಸುವ ನಿಟ್ಟಿನಲ್ಲಿ ಅಜ್ಜಿ ಆಚರಣೆ ನಡೆಸುತ್ತಿದ್ದಾರೆ.


    ಇದನ್ನೂ ಓದಿ: Bengaluru To Vijayapura: ಬೆಂಗಳೂರಿನಿಂದ ವಿಜಯಪುರ ಇನ್ನಷ್ಟು ಹತ್ತಿರ!


    ಮಕ್ಕಳು, ಹಿರಿಯರೆಲ್ಲ ಸೇರಿ ಸಾಲಾಗಿ ಹೋಳಿಗೆ ಎಡೆಯನ್ನಿಟ್ಟು ಪ್ರಾರ್ಥಿಸುತ್ತಾ ಸಾಕು ಪ್ರಾಣಿಗಳಿಗೆ ಎದುರಾದ ಸಂಕಟದಿಂದ ಪಾರು ಮಾಡುವಂತೆ ಬೇಡುತ್ತಿದ್ದಾರೆ.


    ಇದನ್ನೂ ಓದಿ: Vijayapura: ಚಿಕನ್​ಗುನ್ಯಾ, ಡೆಂಗ್ಯೂಗೆ ತತ್ತರಿಸಿದ ವಿಜಯಪುರದ ಗ್ರಾಮ!


    ಹೀಗೆ ವೈದ್ಯಲೋಕವೇ ಚರ್ಮಗಂಟು ರೋಗವನ್ನ ಪೂರ್ಣ ಪ್ರಮಾಣದಲ್ಲಿ ಗುಣಪಡಿಸಲಾಗದೇ ಇರುವ ಸಮಯದಲ್ಲಿ ಹಳ್ಳಿಯ ರೈತರು ಇಂತಹ ಆಚರಣೆಯ ಮೊರೆ ಹೋಗಿದ್ದು ದೇವರು ಕೈ ಹಿಡಿಯುತ್ತಾನೆ ಅನ್ನೋದೆ ಅವರೆಲ್ಲರ ನಂಬಿಕೆಯಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: