• Home
  • »
  • News
  • »
  • vijayapura
  • »
  • Veerabhadreshwara Fair: ವೀರಭದ್ರೇಶ್ವರ ದೇವರಿಗೆ ಸಂಭ್ರಮದ ಜಾತ್ರೆ, ತೇರು ಎಳೆಯೋಕೆ ಸಹಸ್ರಾರು ಜನ!

Veerabhadreshwara Fair: ವೀರಭದ್ರೇಶ್ವರ ದೇವರಿಗೆ ಸಂಭ್ರಮದ ಜಾತ್ರೆ, ತೇರು ಎಳೆಯೋಕೆ ಸಹಸ್ರಾರು ಜನ!

X
ತೇರು ಎಳೆಯುವ ವೈಭವ ನೋಡಿ

"ತೇರು ಎಳೆಯುವ ವೈಭವ ನೋಡಿ"

ಮಹಿಳೆಯರ ಆರತಿಯೊಂದಿಗೆ ದೇವಸ್ಥಾನದಿಂದ ಆರಂಭಗೊಂಡ ಮಹಾರಥೋತ್ಸವವು ಅಗಸಿ ಬಾಗಿಲಿನವರೆಗೆ ಸಾಗಿಬಂತು. ಈ ಸಮಯದಲ್ಲಿ ನೆರೆದಿದ್ದ ಭಕ್ತರೆಲ್ಲರೂ ಜೈಕಾರ ಮೊಳಗಿಸುತ್ತಾ ತೇರಿಗೆ ಉತ್ತತ್ತಿ, ಚುರುಮರಿ, ಹಣ್ಣು, ಹೂವು ಎಸೆದು ಭಕ್ತಿ ಮೆರೆದರು.

  • Share this:

    ಬಾಗಲಕೋಟೆ: ಅಪ್ಪಾ, ವೀರಭದ್ರೇಶ್ವರ, ಅದೇನ್ ಜನಾ, ಅದೇನ್ ಜನಾ. ಎಳ್ಳಷ್ಟೂ ಜಾಗವಿಲ್ಲ, ನಿನ್ ನೋಡೋಕೆ ಬಂದ ಭಕ್ತರ ಮಹಾ ಸಮೂಹವೇ. ರಥ ಎಳೆಯೋದಕ್ಕೆ ಸಾವಿರಾರು ನೋಡೋಕೆ ಸಹಸ್ರಾರು ಜನರು. ನಿನ್ನ ಮಹಾರಥೋತ್ಸವ ಕಣ್ತುಂಬಿಕೊಳ್ಳೋದೆ ನಮ್ಮ ಪುಣ್ಯ. ಜನಸಾಗರದ ನಡುವೆಯೂ ಚಲಿಸುತ್ತಿರೋ ರಥ. ಅದರ ಹಿಂದೆ ಬೆಳ್ಳಕ್ಕಿ ಹಿಂಡಿನಂತೆ ಹೂ ಮುಡಿದು ಸಾಗಿರೋ ಹೆಣ್ಮಕ್ಕಳು. ಇದೊಂಥರಾ ರಥಕ್ಕೆ ಬೆಳಕು ತುಂಬಿದ ಬೆರಗಿನಂತೆ. ಈ ಮಟ್ಟಿಗಿನ ಸಂಭ್ರಮ ಮಹಾರಥೋತ್ಸವ ಕಂಡು ಬಂದಿದ್ದು ಬಾಗಲಕೋಟೆಯ (Bagalakot News) ಪ್ರಸಿದ್ಧ ಮಚಖಂಡಿ ವೀರಭದ್ರೇಶ್ವರ ಜಾತ್ರೆಯಲ್ಲಿ. ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ಮಹಾರಥೋತ್ಸವವು (Veerabhadreshwara Fair) ಸಡಗರ ಸಂಭ್ರಮದಿಂದ ಜರುಗಿತು.


    ರಥವನ್ನ ಎಳೆಯೋದಕ್ಕಂತೂ ಸಾವಿರಾರು ಭಕ್ತರಿದ್ದರೆ, ಅದನ್ನ ನೋಡೋದಕ್ಕೆ ಅಪಾರ ಸಂಖ್ಯೆಯಲ್ಲಿ ಊರ, ಪರವೂರ ಜನರು ನೆರೆದಿದ್ದರು. ರಥ ಸಾಗುತ್ತಲೇ ಭಕ್ತರ ಜಯ ಘೋಷಗಳು ಮೊಳಗಿದವು. ಪೊಲೀಸರಂತೂ ಜನಸಾಗರ ನಿಯಂತ್ರಿಸೋದಕ್ಕೆ ಹರಸಾಹಸಪಟ್ಟರು.


    ಮೆರವಣಿಗೆ ನಂತರ ಮಹಾರಥೋತ್ಸವ
    ಪ್ರತಿವರ್ಷ ಕಾರ್ತಿಕೋತ್ಸವದ ವೇಳೆ ನಡೆಯುವ ಮಹಾರಥೋತ್ಸವ ಕಣ್ತುಂಬಿಕೊಳ್ಳಲು ನೆರೆಯ ಜಿಲ್ಲೆಗಳಿಂದಲೂ ಜನರು ಆಗಮಿಸುತ್ತಾರೆ. ರಥೋತ್ಸವ ಹಿನ್ನೆಲೆ ಬೆಣ್ಣೂರ ಗ್ರಾಮದಿಂದ ಕಳಸ, ವೀರಾಪುರ ಗ್ರಾಮದಿಂದ ಹಗ್ಗ ಹಾಗೂ ಸೀಮಿಕೇರಿ ಗ್ರಾಮದಿಂದ ನಂದಿಕೋಲು ಮೆರವಣಿಗೆ ಬಂದ ಬಳಿಕ ಮಹಾರಥೋತ್ಸವ ಜರುಗಿತು.


    ಇದನ್ನೂ ಓದಿ: Good News: ಕೆಲಸ ಹುಡುಕುವವರಿಗೆ ಸುವರ್ಣಾವಕಾಶ; ನಡೆಯಲಿದೆ ಬೃಹತ್ ಉದ್ಯೋಗ ಮೇಳ


    ಮಹಿಳೆಯರ ಆರತಿಯೊಂದಿಗೆ ದೇವಸ್ಥಾನದಿಂದ ಆರಂಭಗೊಂಡ ಮಹಾರಥೋತ್ಸವವು ಅಗಸಿ ಬಾಗಿಲಿನವರೆಗೆ ಸಾಗಿಬಂತು. ಈ ಸಮಯದಲ್ಲಿ ನೆರೆದಿದ್ದ ಭಕ್ತರೆಲ್ಲರೂ ಜೈಕಾರ ಮೊಳಗಿಸುತ್ತಾ ತೇರಿಗೆ ಉತ್ತತ್ತಿ, ಚುರುಮರಿ, ಹಣ್ಣು, ಹೂವು ಎಸೆದು ಭಕ್ತಿ ಮೆರೆದರು.


    ಇದನ್ನೂ ಓದಿ: Haridra Thirtha: ಮಕ್ಕಳಾಗದ ಮಹಿಳೆಯರು ಇಲ್ಲೇ ಹರಕೆ ಸಲ್ಲಿಸ್ತಾರೆ; ಹರಿದ್ರಾ ತೀರ್ಥದ ವಿಶೇಷವಿದು

    ಹೀಗೆ ಮಚಖಂಡಿ ವೀರಭದ್ರೇಶ್ವರನ ಜಾತ್ರಾ ಮಹೋತ್ಸವ ಸಂಭ್ರಮದಲ್ಲಿ ನಡೆದ ಮಹಾರಥೋತ್ಸವ ಇಡೀ ಊರನ್ನು ಒಂದುಗೂಡಿಸಿ ಹಬ್ಬದ ವಾತಾವರಣ ಮೂಡಿಸಿತ್ತು. ಭಕ್ತರೆಲ್ಲರೂ ವೀರಭದ್ರೇಶ್ವರನ ಆಶೀರ್ವಾದ ಪಡೆದು ಮುಂದೆ ಸಾಗಿದರು.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: