ವಿಜಯಪುರ: ‘‘ಈ ಗುಲಾಬಿಯು ನಿನಗಾಗಿ, ಇದು ಚೆಲ್ಲುವ ಪರಿಮಳ ನಿನಗಾಗಿ‘‘ ಅನ್ನೋ ಕನ್ನಡದ ಸೂಪರ್ ಹಿಟ್ ಹಾಡಿನ ಸಾಲು ಈ ಗಾರ್ಡನ್ ನೋಡ್ತಿದ್ರೆ ನೆನಪಿಗೆ ಬರಲೇಬೇಕು. ಅದ್ರಲ್ಲೂ ಬೇರೆ ‘ವ್ಯಾಲೆಂಟೈನ್ಸ್ ಡೇ' (Valentines Day 2023) ಆಗಿರೋದ್ರಿಂದ ಇನ್ನೊಂದಿಷ್ಟು ನೆನಪುಗಳನ್ನ ಈ ಗುಲಾಬಿ ಹೂಗಳು ಮೆಲುಕು ಹಾಕಿಸೋದು ಗ್ಯಾರಂಟಿ. ಪ್ರೇಮಿಗಳ ಪ್ರೇಮದ ಸಂಕೇತವಾದ ಕೆಂಪು ಗುಲಾಬಿ (Red Rose Garden) ಸಾಲು ಸಾಲಾಗಿ ತಲೆ ಎತ್ತಿ ನಿಂತಿವೆ. ತನ್ನತ್ತ ವ್ಯಾಲೆಂಟೈನ್ಸ್ ಡೇ (Valentines Day) ಪ್ರೇಮಿಗಳನ್ನ ಬರ ಮಾಡಿಕೊಳ್ಳಲು ಇಲ್ಲಿ ಸಿದ್ಧವಾಗಿದೆ.
ರೋಸ್ ಗಾರ್ಡನ್ನಲ್ಲಿ ಹಬ್ಬ!
ಹೌದು, ಪ್ರೇಮಿಗಳ ಪಾಲಿಗೆ ವ್ಯಾಲೆಂಟೈನ್ಸ್ ಡೇ ಅನ್ನೋದು ಹಬ್ಬವಿದ್ದಂತೆ. ಕದ್ದುಮುಚ್ಚಿ ಭೇಟಿಯಾಗೋ ಪ್ರೇಮಿಗಳೆಲ್ಲ ಪಾರ್ಕ್ ಗಳಲ್ಲಿ ಮರ ಸುತ್ತೋದು ವಾಡಿಕೆ. ಹಾಗಾಗಿಯೇ ವಿಜಯಪುರದ ಆಲಮಟ್ಟಿ ಉದ್ಯಾನವನದ ಈ ರೋಸ್ ಗಾರ್ಡನ್ನಲ್ಲಿರೋ ರೋಸ್ ಗಳೆಲ್ಲವೂ ನಳನಳಿಸುತ್ತಾ ಪ್ರೇಮಿಗಳ ನೋಡುವ ಕಾತರದಲ್ಲಿದೆ.
ಇದನ್ನೂ ಓದಿ: Vijayapura: ದೇವರ ಸನ್ನಿಧಿಯಲ್ಲಿ ಚಪ್ಪಲಿ ಸೇವೆ! ಒಂದು ಪೈಸೆಯನ್ನೂ ಪಡೆಯದ ಗೆಳೆಯರ ಬಳಗ
ಹತ್ತಾರು ವೆರೈಟಿ, ನೂರಾರು ಗುಲಾಬಿ
ಒಂದು ವರ್ಷದ ಹಿಂದೆ KBJNL ವ್ಯಾಪ್ತಿಯ ಸುಮಾರು ಎರಡು ಎಕರೆ ಬಯಲು ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತರಹೇವಾರಿ ಗುಲಾಬಿ ಸಸಿಗಳನ್ನ ನರ್ಸರಿಯಲ್ಲಿ ತಯಾರಿಸಿ, ಬಯಲು ಪ್ರದೇಶದಲ್ಲಿ ನಾಟಿ ಮಾಡಿದ್ದರು.
ಸದ್ಯ ಗುಲಾಬಿ ಹೂವಿನ ಗಿಡಗಳು ಸಮೃದ್ದವಾಗಿ ಬೆಳೆದು ನಿಂತಿದ್ದು ಇಲ್ಲಿಗೆ ಆಗಮಿಸುವ ಪ್ರೇಮಿಗಳಿಗೆ, ಪ್ರವಾಸಿಗರಿಗೆ ಮುದ ನೀಡುತ್ತಿವೆ. ಬಿಳಿ, ಕೆಂಪು, ಆರೆಂಜ್ ಸೇರಿದಂತೆ ಹತ್ತು ಹಲವಾರು ಬಗೆ ಬಗೆಯ ಗುಲಾಬಿ ಹೂವುಗಳು ಸುಂದರವಾಗಿ ಅರಳಿ ನಿಂತಿವೆ.
ಇದನ್ನೂ ಓದಿ: Bagalkot Viral Video: ಮದುವೆ ಅರಿಶಿನ ಶಾಸ್ತ್ರದಲ್ಲಿ ವಿದೇಶಿ ಪ್ರಜೆಗಳು!
ದಿನವಿಡೀ ಮಾಡಿ ಎಂಜಾಯ್!
ಇಲ್ಲಿಗೆ ಕೇವಲ 50 ರೂ. ನೀಡಿ ಟಿಕೆಟ್ ಪಡೆದುಕೊಂಡು ಒಳಪ್ರವೇಶಿಸಬಹುದು. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ರವರೆಗೂ ಎಂಜಾಯ್ ಮಾಡಬಹುದು.
ಹೀಗೆ ಬನ್ನ9ಛಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]
ಒಟ್ಟಿನಲ್ಲಿ ಹೋಟೆಲ್, ರೆಸಾರ್ಟ್ ಬದಲು ರೋಸ್ ಗಾರ್ಡನ್ಗೆ ತೆರಳಿದರೆ, ಅಲ್ಲೇ ಚೆಂದವಾಗಿ ನಗು ಬೀರುತ್ತಾ ಅರಳಿರುವ ಕೆಂಗುಲಾಬಿ ಮಧ್ಯೆಯೇ ಪ್ರೇಮಿಗಳ ದಿನಾಚರಣೆಯನ್ನ ಪ್ರೇಮಿಗಳು ಆಚರಿಸಬಹುದಾಗಿದೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ