ವಿಜಯಪುರ: ಹೊಲದಲ್ಲಿ ನಳನಳಿಸುತ್ತಿರೋ ಬೆಳೆ, ಕೃಷಿಕರ ಮುಖದಲ್ಲಿ ಮಿಂಚುತ್ತಿರೋ ನಗು, ಒಣ ಬೇಸಾಯ ಭೂಮಿಯಾದ್ರೂ ಉತ್ತಮ ಫಲಸಿನ ನಿರೀಕ್ಷೆಯಲ್ಲಿರೋ ರೈತಾಪಿ ವರ್ಗ. ವಿಜಯಪುರ (Vijayapura News) ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ (Bagalkot News) ಬೆಳೆಯುವ ಪ್ರಮುಖ ಬೆಳೆಗಳಾದ ಕಡಲೆ ಮತ್ತು ಬಿಳಿಜೋಳ ಬೆಳೆದ ರೈತರ ಕಂಗಳಲ್ಲಿ (Farmers) ಈಗ ನಿರೀಕ್ಷೆಯ ಆಕಾಶವೇ ತುಂಬಿ ತುಳುಕುತ್ತಿದೆ.
ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಜೋಳ, ಕಡಲೆ, ಮೆಣಸು, ಗೋಧಿ ಸೇರಿದಂತೆ ತರಹೇವಾರಿ ಬೆಳೆಗಳನ್ನ ಬಿತ್ತನೆ ಮಾಡಿದ್ದರು. ಆದರೆ ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಬಾಡುವ ಹಂತಕ್ಕೆ ತಲುಪಿದ್ದವು. ಬೆಳೆಗಳನ್ನ ಕಂಡು ರೈತರು ಮಮ್ಮಲ ಮರುಗುವಂತಾಗಿತ್ತು.
ಒಣ ಬೇಸಾಯ ಭೂಮಿಗಳಲ್ಲಿ ನಳನಳಿಸುತ್ತಿರುವ ಬೆಳೆ!
ಆದರೆ ಇದೆಲ್ಲದರ ಮಧ್ಯೆ ರೈತರ ಕೈಹಿಡಿದದ್ದು ಮಾತ್ರ ಹವಾಮಾನ! ಹೌದು, ಸದ್ಯದ ತಂಪು ವಾತಾವರಣದಲ್ಲಿ ಒಣ ಬೇಸಾಯ ಭೂಮಿಗಳಲ್ಲಿ ಸದ್ಯ ಬೆಳೆಗಳು ನಳನಳಿಸುತ್ತಿವೆ.
ಇಬ್ಬನಿಯೇ ಆಧಾರ
ಕೇವಲ ಇಬ್ಬನಿ ಆಧಾರದಲ್ಲಿ ಬೆಳೆಯುವ ಕಡಲೆ ಬೆಳೆಯನ್ನು ವಿಜಯಪುರದ ರೈತರು ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದಾರೆ. ಕಪ್ಪುಭೂಮಿಯಲ್ಲಿ ಹಚ್ಚಹಸಿರಿನ ಹೊದಿಕೆ ಹಾಸಿದಂತೆ ಕಡಲೆ ಬೆಳೆ ಚಿಗುರುತ್ತಿದೆ. ಹೀಗಾಗಿ ಸದಾ ಒಂದಿಲ್ಲೊಂದು ಕಷ್ಟ ಅನುಭವಿಸುವ ವಿಜಯಪುರ ಜಿಲ್ಲೆಯ ರೈತರಿಗೆ ಈ ಸಲ ಹೆಚ್ಚಿನ ಲಾಭ ದೊರೆಯುವ ನಿರೀಕ್ಷೆ ಮೂಡಿದೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ