ವಿಜಯಪುರ: ಒಂದು ಕಡೆ ಚೆಂದ ಚೆಂದದ ಸೀರೆಯನ್ನುಟ್ಟು (Saree) ತಲೆಯ ಮೇಲೆ ಕುಂಭಹೊತ್ತು ಸಾಗುತ್ತಿರುವ ಮಹಿಳೆಯರು (Women). ಇನ್ನೊಂದು ಕಡೆ ಬೃಹತ್ ಗಾತ್ರದ ಗೊಂಬೆಗಳ (Doll) ಕುಣಿತ, ಇದೆಲ್ಲದಕ್ಕೂ ಮೆರಗು ತರುವ ಕರಡಿ ಮಜಲು. ಅಷ್ಟಕ್ಕೂ ಈ ಸಂಭ್ರಮ (Celebration) ಕಂಡು ಬಂದಿದ್ದು ಎಲ್ಲಿ ಅಂತೀರಾ? ಇದೆಲ್ಲವನ್ನೂ ಹೇಳ್ತೀವಿ ನೋಡಿ.
ಮಾರುತೇಶ್ವರ ಜಾತ್ರಾ ಸಂಭ್ರಮ
ಹೌದು, ಇಂತಹ ಸಂಭ್ರಮ ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಉಣ್ಣಿಭಾವಿ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವದಲ್ಲಿ. ಪೌರಾಣಿಕ ಹಿನ್ನೆಲೆ ಮತ್ತು ಇತಿಹಾಸವುಳ್ಳ ಈ ದೇವಸ್ಥಾನಕ್ಕೆ ತನ್ನದೆಯಾದ ವೈಶಿಷ್ಟ್ಯವಿದ್ದು, ಇತ್ತೀಚೆಗೆ ಅದರ ನೂತನವಾಗಿ ಪುನರುಜ್ಜೀವನಗೊಳಿಸಿ ಉದ್ಘಾಟನೆಯೂ ನಡೆಯಿತು. ಹೀಗಾಗಿ ಭಕ್ತರ ಸಂಭ್ರಮ ತುಸು ಇಮ್ಮಡಿಯಾಗಿತ್ತು.
ಮುತೈದೆಯರ ಕುಂಭ ಮೇಳ
ಜಾತ್ರಾ ಸಂಭ್ರಮದಲ್ಲಿ ಮುತೈದೆಯರು ಕುಂಭಮೇಳದ ಜೊತೆಗೆ ಆಗಮಿಸಿದ್ರೆ, ಬೊಂಬೆ ಕುಣಿತದ ಸಡಗರ, ಇದರೊಟ್ಟಿಗೆ ವಾದ್ಯ ಮೇಳಗಳ ಅಬ್ಬರವೂ ಜೋರಾಗಿತ್ತು. ಇವೆಲ್ಲ ಮೂರ್ತಿ ಮೆರವಣಿಗೆಯಲ್ಲಿ ಕಂಡ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ಕಲರವ ಭಕ್ತರ ಸಂತಸವನ್ನ ಇಮ್ಮಡಿಗೊಳಿಸಿತ್ತು. ಮಾರುತೇಶ್ವರ ಭವ್ಯ ಮೂರ್ತಿಯ ಮತ್ತು ನೂತನ ದೇವಸ್ಥಾನದ ಕಳಸದ ಅದ್ದೂರಿ ಮೆರವಣಿಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಇದನ್ನೂ ಓದಿ: ಈ ರೈತರಿಗೆ ಇಬ್ಬನಿಯೇ ಆಧಾರ! ಭರವಸೆಯ ಕನಸು ಬಿತ್ತಿದ ಹವಾಮಾನ
ಇನ್ನು ಈ ದೇವಸ್ಥಾನವನ್ನ ಕಲ್ಲುಗಳಿಂದ ಕಟ್ಟಲಾಗಿದ್ದು ಬಹಳಷ್ಟು ಆಕರ್ಷಕವಾಗಿದೆ. ದೇವಸ್ಥಾನದ ಒಳಗಡೆ ಕಲ್ಲು ಬಂಡೆಗಳಲ್ಲಿ ಕಲಾವಿದರು ತಮ್ಮ ಕೈಚಳಕದ ಮೂಲಕ ನಾನಾ ಚಿತ್ರಗಳನ್ನು ಕೆತ್ತನೆ ಮಾಡಿದ್ದು ವಿಶಿಷ್ಟ ಅನುಭವವನ್ನು ನೀಡುತ್ತಿದೆ.
ಅಲ್ಲದೇ ದೇವಸ್ಥಾನದ ಗರ್ಭ ಗುಡಿಯ ಬಲಭಾಗಕ್ಕೆ ಗಣೇಶ ಮೂರ್ತಿ ಇದೆ ಮತ್ತು ಎಡಭಾಗಕ್ಕೆ ಲಕ್ಷ್ಮಿ ಮೂರ್ತಿಗಳಿವೆ. ಇನ್ನು ಅಂದಾಜು 15 ಮೀಟರ್ ನಷ್ಟು ಎತ್ತರವನ್ನ ಹೊಂದಿದೆ. ಇನ್ನೊಂದು ವಿಶೇಷವೆಂದರೆ ಇದನ್ನ ಅಲಗಾಡಿಸಿದರೆ ಅಲಗಾಡುತ್ತದೆ ಆರದೆ ಕೆಳಗೆ ಬೀಳುವುದಿಲ್ಲ ಹೀಗಾಗಿ ಇಲ್ಲಿನ ಜನರು ಈ ದೇವಸ್ಥಾನದ ಪವಾಡವೆಂದು ನಂಬುತ್ತಾರೆ.
ಇದನ್ನೂ ಓದಿ: ಕೂಡಲ ಸಂಗಮ ಕ್ಷೇತ್ರದಲ್ಲಿ ಪೂಜೆ, ದರ್ಶನ ಸಂಪೂರ್ಣ ವಿವರ ಇಲ್ಲಿದೆ
ಒಟ್ಟಿನಲ್ಲಿ ಮಾರುತೇಶ್ವರ ಜಾತ್ರೆ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿದ್ದು, ಭಕ್ತರು ಭಕ್ತಿ ಕಡಲಲ್ಲಿ ಮಿಂದೆದ್ದರು.
ವರದಿ – ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ