ಬಾಗಲಕೋಟೆ: ಚಂಡಮಾರುತ ಆರ್ಭಟಿಸುತ್ತೆ, ರೋಗ ವ್ಯಾಪಿಸುತ್ತೆ. ಅಲ್ಲಲ್ಲಿ ಭೂಕಂಪ, ವಿಮಾನ ಅಪಘಾತ ನಡೆಯುತ್ತೆ. ಅಬ್ಬ! ರಣಭಯಂಕರ ಎನ್ನುವಂತಿದೆ ಮುಂದಿನ ಒಂದು ವರ್ಷದ ಈ (Ugadi Phala Bhavishya) ಫಲ ಭವಿಷ್ಯ.
ಅಂದಹಾಗೆ ಇದು ಬಾಗಲಕೋಟೆಯ ಇಲಾಳ ಮೇಳದಿಂದ ಹೊರಬಿದ್ದ ಫಲ ಭವಿಷ್ಯ. ಆದ್ರೆ ಈ ಭವಿಷ್ಯವಾಣಿ ಕೇಳ್ತಿದ್ರೆ, ಕೈಕಾಲು ನಡುಗೋದು ಗ್ಯಾರಂಟಿ. ಆ ಮಟ್ಟಿಗೆ ರಣ ಭಯಂಕರ ಎನಿಸುವಂತಿದೆ. ಗುಳೇದಗುಡ್ಡದ ಇಲಾಳ ಮೇಳ ಮಾರವಾಡಿ ಬಗಿಚ್ನಲ್ಲಿ ಯುಗಾದಿ ಪಾಡ್ಯದಂದು ನಡೆಯುವ ಫಲ ಭವಿಷ್ಯದಲ್ಲಿ ಇಂತಹ ಮಾತುಗಳು ಉದ್ಘರಿಸಿದವು. ಪ್ರತಿ ವರ್ಷದಂತೆ ಈ ವರ್ಷದ ಭವಿಷ್ಯವು ನುಡಿಯಲಾಗಿದ್ದು, ಕೊಂಚ ಮಟ್ಟಿಗೆ ಭಯ ಮೂಡಿಸುವಂತೆ ಮಾಡಿದೆ.
16 ಮಳೆಗಳಲ್ಲಿ 11 ಮಳೆಗಳು ಪೂರ್ಣವಾಗಲಿವೆ
ತಲೆ ತಲಾಂತರದಿಂದ ನಂಬಿಕೊಂಡು ಬಂದಿರುವ ಈ ಫಲ ಭವಿಷ್ಯವನ್ನು ಈ ಬಾರಿ ಮಲ್ಲೇಶ ಗುಬ್ಬಿ ನೆರವೇರಿಸಿದ್ದಾರೆ. ಇನ್ನು ಈ ವರ್ಷ 16 ಮಳೆಗಳಲ್ಲಿ 11 ಮಳೆಗಳು ಪೂರ್ಣ ಪ್ರಮಾಣದಲ್ಲಿ ಸುರಿಯಲಿವೆ.
ವಾಹನ ಅಪಘಾತವಾಗಲಿದೆ ಎಚ್ಚರ
ಪಂಚಭೂತಗಳು ವಿಕೋಪಕ್ಕೆ ಹೋಗೋದ್ರಿಂದ, ಭೂಮಿ ಕುಸಿಯುವ ಸಂಭವವಿದೆಯಂತೆ. ಇದ್ರಿಂದ ಸಹಜವಾಗಿಯೇ ವಾಹನಗಳ ಸಂಚಾರಕ್ಕೆ ದೊಡ್ಡ ಧಕ್ಕೆ ಎದುರಾಗಲಿದೆಯಂತೆ. ಅಷ್ಟೇ ಅಲ್ಲ, ವಿಮಾನ ಅಪಘಾತ ಸಂಭವಿಸಲಿದೆ ಅನ್ನೋ ಭಯಾನಕ ವಾಣಿಯೂ ಹೊರಬಿದ್ದಿದೆ.
ಇದನ್ನೂ ಓದಿ: Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ
ಇವರೆಲ್ಲ ಎಚ್ಚರಿಕೆಯಿಂದಿರಿ
ಇನ್ನು ಗುಂಡು, ಮಿಂಚು, ಸಿಡಿಲು ಆರ್ಭಟಕ್ಕೆ ಪ್ರಾಣ ಹಾನಿ ಸಂಭವಿಸಲಿದೆಯಂತೆ. ಮೂರ್ನಾಲ್ಕು ರಾಜ್ಯಗಳಲ್ಲಿ ಚಂಡಮಾರುತ ಗಾಳಿ ಬೀಸಿ ತೊಂದರೆ ಉಂಟಾಗಲಿದೆಯಂತೆ. ಇನ್ನು ಅರಣ್ಯ, ಗುಡ್ಡ, ವಿವಿಧ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸೋದ್ರಿಂದ, ಬೆಂಕಿಯಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕಾಗುತ್ತಂತೆ.
ಹಸಿರು ಬಣ್ಣದ ಬಟ್ಟೆ ರಾರಾಜಿಸುತ್ತೆ!
ಜೊತೆಗೆ ಈ ವರ್ಷ ಹಸಿರು ಬಣ್ಣದ ವಸ್ತುಗಳು ರಾರಾಜಿಸುತ್ತವಂತೆ. ಇಷ್ಟಾದ್ರೂ ವ್ಯಾಪಾರ ವಹಿವಾಟುಗಳಿಗೆ ಯಾವುದೇ ತೊಂದರೆಯಾಗದೆ, ಚೆನ್ನಾಗಿ ನಡೆಯುತ್ತಂತೆ.
ಇದನ್ನೂ ಓದಿ: Vijayapura: ಇಡೀ ವರ್ಷ ಹೆಸರಿಲ್ಲದೇ ಬೆಳೆಯುವ ಮಕ್ಕಳು!
ಈ ವರ್ಷದ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ರೋಗ ಬಾಧಿಸೋದ್ರಿಂದ ಜ್ವರ, ಶೀತಕ್ಕೆ ತುತ್ತಾಗುವವರು ಬಳಲು ಸಾಧ್ಯತೆ ಇದ್ಯಂತೆ. ಒಟ್ಟಿನಲ್ಲಿ ಈ ವರ್ಷದ ಭವಿಷ್ಯದ ಭಯದ ಜೊತೆಗೆ ಭರವಸೆಯನ್ನು ಗುಳೇದಗುಡ್ಡದ ಫಲ ಭವಿಷ್ಯ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ