• Home
 • »
 • News
 • »
 • vijayapura
 • »
 • Tulja Bhavani Darshan: ತುಳಜಾ ಭವಾನಿಯೇ ಈ ಯಾತ್ರಿಗಳ ಜೊತೆ ನಡೆಯುತ್ತಿದ್ದಾಳೆ!

Tulja Bhavani Darshan: ತುಳಜಾ ಭವಾನಿಯೇ ಈ ಯಾತ್ರಿಗಳ ಜೊತೆ ನಡೆಯುತ್ತಿದ್ದಾಳೆ!

ಆ ದೇವಿಯ ಭಕ್ತರ ದರ್ಶನ ಮಾಡಿ

"ಆ ದೇವಿಯ ಭಕ್ತರ ದರ್ಶನ ಮಾಡಿ"

ಕೇಸರಿ ಧ್ವಜ, ಕೇಸರಿ ಶಾಲು, ತಲೆಗೆ ರುಮಾಲು, ಪಲ್ಲಕ್ಕಿ ಹೊತ್ತು, ಕೈಯಲ್ಲಿ ನಾದಸ್ವರ ಹಿಡಿದು ಆಯಿರಾಧಾ ಉಧೇ..ಉಧೇ.. ಉಧೇ... ಸದಾನಂದಿಚಾ ಉಧೇ..ಉಧೇ.. ಉಧೇ..ಜೈ ಮಾತಾದಿ, ತುನೇ ಮುಜೆ ಬುಲಾಯಾ ಷೇರಾವಾಲಿಯೇ ಎಂಬ ಜೈಕಾರ ಮೊಳಗುತ್ತಿದೆ.

 • News18 Kannada
 • Last Updated :
 • Bijapur, India
 • Share this:

  ವಿಜಯಪುರ: ರಸ್ತೆಯುದ್ದಕ್ಕೂ ಗುಂಪು ಗುಂಪಾಗಿ ನಡೆದುಕೊಂಡೇ ಹೋಗ್ತಿರೋ ಜನರು. ಆಗಾಗ ಉದ್ಘೋಷ, ಭಜನೆ. ಇವರ್ಯಾರು ವಲಸೆ ಕಾರ್ಮಿಕರು ಅಂದ್ಕೋಬೇಡಿ. ಯಾಕೆಂದ್ರೆ ಇವರೆಲ್ಲ ಮಹಾರಾಷ್ಟ್ರದ ತುಳಜಾ ಭವಾನಿಯ (Tulja Bhavani Darshan) ಪರಮಭಕ್ತರು. ಆ ತಾಯಿ ಮೇಲಿನ ಭಕ್ತಿಯಿಂದಲೇ ಕಾಲ್ನಡಿಗೆಯಲ್ಲೇ ಹೊರಟು ನಿಂತಿದ್ದಾರೆ. ಇನ್ನೇನು ಪಾದಯಾತ್ರೆ ಮಹಾರಾಷ್ಟ್ರ ( Tulja Bhavani Temple Maharashtra) ತಲುಪಿ, ತಾಯಿ ದರ್ಶನವನ್ನೂ ಪಡೆಯುತ್ತಾರೆ.


  ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯಲ್ಲಿರುವ ತುಳಜಾಪುರ ತುಳಜಾ ಭವಾನಿಯ ದೇವಸ್ಥಾನ ದೇಶದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದು. ಸದ್ಯ ಆ ತಾಯಿಯ ಜಾತ್ರೆ ಭಾರೀ ಸಡಗರದಿಂದ ನಡೆಯುತ್ತಿದ್ದು ಕರ್ನಾಟಕದಿಂದಲೂ ಸಾವಿರಾರು ಭಕ್ತರು ದರ್ಶನಕ್ಕೆ ಹೊರಟಿದ್ದಾರೆ.


  ಉಧೇ..ಉಧೇ.. ಉಧೇ... ಸದಾನಂದಿಚಾ ಉಧೇ..ಉಧೇ.. ಉಧೇ..ಜೈ ಮಾತಾದಿ
  ಹೀಗೆ ಹೋಗಬೇಕಾದರೆ, ಮಾರ್ಗದುದ್ದಕ್ಕೂ ಕೇಸರಿ ಧ್ವಜ, ಕೇಸರಿ ಶಾಲು, ತಲೆಗೆ ರುಮಾಲು, ಪಲ್ಲಕ್ಕಿ ಹೊತ್ತು, ಕೈಯಲ್ಲಿ ನಾದಸ್ವರ ಹಿಡಿದು ಆಯಿರಾಧಾ ಉಧೇ..ಉಧೇ.. ಉಧೇ... ಸದಾನಂದಿಚಾ ಉಧೇ..ಉಧೇ.. ಉಧೇ..ಜೈ ಮಾತಾದಿ, ತುನೇ ಮುಜೆ ಬುಲಾಯಾ ಷೇರಾವಾಲಿಯೇ ಎಂಬ ಜೈಕಾರ ಮೊಳಗಿಸುತ್ತಾ ಸಾಗುತ್ತಾರೆ.


  ತುಳಜಾ ಭವಾನಿಗೆ ದೇಶವಿಡಿ ಅಪಾರ ಭಕ್ತ ವರ್ಗವಿದೆ. ಅದರಲ್ಲೂ ಕರ್ನಾಟಕದ ಭಕ್ತರದ್ದು ಸಿಂಹಪಾಲು. ಉತ್ತರ ಕರ್ನಾಟಕದ ಭಕ್ತರಂತೂ ಸುಮಾರು 300 ಕಿಲೋ ಮೀಟರ್ ನಡೆದುಕೊಂಡೇ ಸಾಗುತ್ತಾರೆ.


  ಇದನ್ನೂ ಓದಿ: Hasanamba Temple: ಹಾಸನಾಂಬಾ ದೇಗುಲ ಓಪನ್; ಈ ಸಮಯದಲ್ಲಿ ಮಾತ್ರ ದರ್ಶನ


  ಅಭಿಷೇಕ ವಿಶೇಷ
  ತುಳಜಾ ಭವಾನಿಯು ವಿಜಯದಶಮಿಯಂದು ಕುಕ್ಕುರ ರಕ್ಕಸನ ಜೊತೆಯಲ್ಲಿ ಯುದ್ದದಲ್ಲಿ ವಿಜಯದ ಮಾಲೆ ಧರಿಸಿದ ಪುರಾಣವಿದೆ. ಅದೇ ದಿನ ವಿಶ್ರಾಂತಿಗಾಗಿ ದೇವಿಯು ನಿದ್ರೆಗೆ ಜಾರುತ್ತಾಳೆ. ಕೆಲ ದಿನಗಳ ವಿಶ್ರಾಂತಿ ಬಳಿಕ ನಿದ್ರೆಯಿಂದ ಎಚ್ಚರಗೊಳ್ಳುತ್ತಾಳೆ. ಆಗಲೇ ಅಭಿಷೇಕ ನಡೆಯುತ್ತೆ. ಆ ಅಭಿಷೇಕ ಕಣ್ತುಂಬಿಕೊಳ್ಳೋಕೆ ಭಕ್ತರು ಪಾದಯಾತ್ರೆ ಸಾಗಿದ್ದಾರೆ.


  ಇದನ್ನೂ ಓದಿ: Vijayapura: ಹುಲ್ಲುಲಗೋ..ಸಲಾಂಭ್ರಿಗೋ! ಉತ್ತರ ಕರ್ನಾಟಕದಲ್ಲಿ ಚರಗ ಹಬ್ಬದ ಸ್ಪೆಷಲ್ ಇದು


  ಭಕ್ತ ಸಾಗರವೇ ಹರಿದು ಬರುತ್ತದೆ
  ದಸರಾ ಬಳಿಕ ತುಳಜಾಪುರದ ಭವಾನಿ ಮಾತೆಯ ದರ್ಶನಕ್ಕೆ ಹೋಗುವುದು ಅಸಂಖ್ಯ ಭಕ್ತರ ವಾಡಿಕೆ. ದೇವಿಯ ಅಭಿಷೇಕದಲ್ಲಿ ಪಾಲ್ಗೊಂಡ ಭಕ್ತರ ಬಾಳು ಬಂಗಾರವಾಗುತ್ತೆ ಅನ್ನೋ ನಂಬಿಕೆಯಿದೆ. ಹೀಗಾಗಿ ಮಾತೆಯನ್ನು ಕಾಣಲು ಭಕ್ತ ಸಾಗರವೇ ಹರಿದು ಬರುತ್ತದೆ. ಅಲ್ಲದೆ ರಾತ್ರಿ ಸಮಯ ಚಳಿಗೆ ನಡುಗುವ ಭಕ್ತರು ಆ ಭವಾನಿಯ ನಾಮಸ್ಮರಣೆಯಲ್ಲಿ "ಆಯಿ ಭವಾನಿ" ಘೋಷಣೆ ಹಾಕುತ್ತಾ ಸಾಗುತ್ತಾರೆ. ಒಟ್ಟಿನಲ್ಲಿ ಜಗನ್ಮಾತೆ ತುಳಜಾ ಭವಾನಿ ತನ್ನಲ್ಲಿಗೆ ಬರೋ ಲಕ್ಷಾಂತರ ಭಕ್ತರ ಹರಸಿ ಕಳುಹಿಸುತ್ತಾಳೆ.


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: