• Home
 • »
 • News
 • »
 • vijayapura
 • »
 • Travel Plan: ರಾಮಾಯಣದ ಸೀತೆ, ಶ್ರೀರಾಮ, ಲಕ್ಷ್ಮಣ, ಹನುಮರನ್ನು ಮೀಟ್ ಮಾಡಿ!

Travel Plan: ರಾಮಾಯಣದ ಸೀತೆ, ಶ್ರೀರಾಮ, ಲಕ್ಷ್ಮಣ, ಹನುಮರನ್ನು ಮೀಟ್ ಮಾಡಿ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸೀತಮ್ಮನಗುಡ್ಡದಲ್ಲಿ ಸೀತಾಮಾತೆ ನೆಲೆಸಿದ್ದಳೆಂಬ ಪ್ರತೀತಿಯಿದೆ. ಹೀಗಾಗಿ ಇಲ್ಲಿ ಕೃಷ್ಣ, ಲವ ಕುಶ ಉದ್ಯಾನವನದ ಬಳಿಕ ಇದೀಗ ಸೀತಾಮಾತೆ ವನವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ.

 • News18 Kannada
 • Last Updated :
 • Bijapur, India
 • Share this:

  ವಿಜಯಪುರ: ಶ್ರೀರಾಮಚಂದ್ರ, ಲಕ್ಷ್ಮಣ, ಹನುಮಂತ, ಸೀತಾಮಾತೆ, ರಾವಣ, ಇವರೆಲ್ರನ್ನೂ ಭೇಟಿಯಾಗ್ಬೇಕು ಅನ್ನೋ ಆಸೆಯೇನಾದ್ರೂ ನಿಮಗಿದೆಯಾ? ಬೇರೇನೂ ಮಾಡ್ದೇ ಡೈರೆಕ್ಟ್ ಆಗಿ ಇಲ್ಲಿಬನ್ನಿ. ಲಂಕಾದಹನ, ರಾವಣ ವಧೆ ಸೇರಿ ರಾಮಾಯಣದ (Ramayana) ಹಲವು ಪ್ರಸಂಗಗಳು ಇಲ್ಲಿ ಮೈದಳೆದುನಿಂತಿದೆ. ಅರೇ! ಇಂಥದ್ದೂ ಒಂದು ಪ್ಲೇಸ್ ಎಲ್ಲಿದೆ ಅಂದ್ಕೊಂಡ್ರಾ? ಇದು ವಿಜಯಪುರದ ಸೀತಮ್ಮನ ಗುಡ್ಡ (Vijayapura Sitammana Gudda)  ಬನ್ನಿ ನಾವೂ ಒಮ್ಮೆ ಹೋಗಿಬರೋಣ


  ಅಲಮಟ್ಟಿ ಜಲಾಶಯದ ಬಲಭಾಗದಲ್ಲಿರೋ ಸೀತಮ್ಮನ ಗುಡ್ಡದಲ್ಲಿ ಸೀತಾ ಸ್ವಯಂವರದಿಂದ ಹಿಡಿದು ಸೀತಾಮಾತೆಯ ವನವಾಸದವರೆಗಿನ ಬದುಕನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ರಾಮಾಯಣ ಓದಿದವರಿಗಂತೂ ಈ ಉದ್ಯಾನವನ ಕಾಣುತ್ತಲೇ ಎಲ್ಲವೂ ನಿಜವೆನ್ನುವಂತೆ ಕಣ್ಣು ಮುಂದೆ ಬಂದು ನಿಲ್ಲುತ್ತೆ.


  9 ಎಕರೆ ಜಾಗದಲ್ಲಿ ಸೀತಾವನ!
  ಸೀತಮ್ಮನಗುಡ್ಡದಲ್ಲಿ ಸೀತಾಮಾತೆ ನೆಲೆಸಿದ್ದಳೆಂಬ ಪ್ರತೀತಿಯಿದೆ. ಹೀಗಾಗಿ ಇಲ್ಲಿ ಕೃಷ್ಣ, ಲವ ಕುಶ ಉದ್ಯಾನವನದ ಬಳಿಕ ಇದೀಗ ಸೀತಾಮಾತೆ ವನವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. 9 ಎಕರೆ ಜಾಗದಲ್ಲಿ ಈ ಹೊಸದಾದ ಸೀತಾವನವನ್ನ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗ್ತಿದೆ.


  ಇದನ್ನೂ ಓದಿ: Banashankari Rathotsava: ಬನಶಂಕರಿ ದೇವಿಯ ವೈಭವದ ಜಾತ್ರೆಗೆ ಸಾಟಿಯೇ ಇಲ್ಲ! ನೀವೂ ನೋಡಿ


  ಭರದಿಂದ ಸಾಗುತ್ತಿದೆ ಕಾಮಗಾರಿ
  ಇದಕ್ಕಾಗಿಯೇ ಹಲವಾರು ಕಲಾವಿದರು ದುಡಿಯುತ್ತಿದ್ದಾರೆ. ರಾಮಸೇತು ನಿರ್ಮಾಣ, ಯುದ್ಧಘಟ್ಟಗಳನ್ನ ನೆನಪಿಸುವ ಕಲಾಕೃತಿಗಳನ್ನ ತಯಾರಿಸಲಾಗಿದೆ. ರಾಮ ಲಕ್ಷ್ಮಣರ ಜತೆ ವನವಾಸ, ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸುತ್ತಿರುವುದರಿಂದ ಹಿಡಿದು ಚಿನ್ನದ ಜಿಂಕೆಯ ವ್ಯಾಮೋಹ, ಲಕ್ಷ್ಮಣ ರೇಖೆ, ಸೀತಾಪಹರಣ, ರಾವಣನ ಪುಷ್ಪಕ ವಿಮಾನ ತಡೆಗಟ್ಟುವ ಜಟಾಯು, ಹನುಮಂತ ಸೀತೆಯ ಭೇಟಿ ಹೀಗೆ ಪ್ರತಿಯೊಂದು ರಾಮಾಯಣದ ಪ್ರಮುಖ ಘಟ್ಟಗಳನ್ನು ಕಲಾಕೃತಿಗಳಲ್ಲಿ ತೋರಿಸುವ ಕಾರ್ಯ ಭರದಿಂದ ಸಾಗಿದೆ.


  ಇದನ್ನೂ ಓದಿ: Startup Success Story: ಗಾಣದಿಂದ ಎಣ್ಣೆ ಉತ್ಪಾದಿಸೋ ಬಾಗಲಕೋಟೆಯ ಸ್ಟಾರ್ಟ್​ಅಪ್; ಸಾಂಪ್ರದಾಯಕ ಉದ್ಯಮಕ್ಕೆ ಆಧುನಿಕ ಟಚ್


  Seeatavana
  ಸೀತಾವನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಖ್ಯಾತ ಕಲಾವಿದ ಶ್ರೀಕಾಂತ್ ಪತ್ತಾರ ತಂಡದ ಕೈಚಳಕ
  ಖ್ಯಾತ ಕಲಾವಿದ ಶ್ರೀಕಾಂತ್ ಪತ್ತಾರ ಅವರ ತಂಡ ಈ ಎಲ್ಲ ದೃಶ್ಯಗಳನ್ನ ತಯಾರಿಸಿದೆ. ಒಂದೊಂದು ಕಲಾಕೃತಿಗಳು ಸುಂದರತೆಯ ಕಾರಣಕ್ಕೆ ಈಗಾಗಲೆ ಗಮನಸೆಳೆಯುತ್ತಿವೆ. ರಾಮಾಯಣದ ಪ್ರಮುಖ ಘಟ್ಟಗಳ ನೈಜ ಅನಾವರಣದಿಂದ ಇಡೀ ರಾಮಾಯಣವನ್ನ ಕೇವಲ ಅರ್ಧ ಗಂಟೆಯಲ್ಲಿಯೇ ಅರಿಯಬಹುದಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಪ್ರವಾಸಿಗರಂತೂ ಇಷ್ಟಪಡೋದರಲ್ಲಿ ಎರಡು ಮಾತಿಲ್ಲ.


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: