• Home
  • »
  • News
  • »
  • vijayapura
  • »
  • Success Story: ಕಾಲೇಜ್​ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!

Success Story: ಕಾಲೇಜ್​ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವಿಜಯನಿರಂಜನ ಅವ್ರ ಶ್ರಮದಿಂದ ಇಡೀ ನಾಲತವಾಡದ ಜನರು ಖುಷಿಪಡ್ತಿದ್ದಾರೆ. ಡೊನೇಷನ್ ಇಲ್ದೇ ತಮ್ಮ ಮಕ್ಕಳನ್ನು ಕಾಲೇಜ್ ಓದ್ಸೋಕೆ ರೆಡಿ ಆಗಿದ್ದಾರೆ.

  • Share this:

    ವಿಜಯಪುರ: ನನ್ನಿಂದ ತಾನೇ ತಾನೇ ಏನಾಗುತ್ತೆ? ಹೀಗಂತ ಕೂತ್ರೆ ಏನೂ ಆಗಲ್ಲ, ಆದ್ರೆ ನಮ್ ಪಾಡಿಗೆ ನಾವು ಪ್ರಯತ್ನ ನಡೆಸಿದ್ರೆ ಏನು ಬೇಕಾದ್ರೂ ಆಗುತ್ತೆ ಅನ್ನೋ ಮಾತಿಗೆ ಇವ್ರೇ ಉದಾಹರಣೆ ನೋಡಿ. ತನ್ನೂರಿಗೆ ಪಿಯು ಕಾಲೇಜು (PU Collage) ಬೇಕೆಂದು 5 ವರ್ಷಗಳಿಂದ ಹೋರಾಡಿದ್ದ ಯುವಕನಿಗೆ ಅಂತೂ ಜಯ ಸಿಕ್ಕ (Success Story) ಸ್ಟೋರಿಯಿದು! ಅಬ್ಬಾ! ವಿಜಯಪುರದ (Vijayaoura) ಈ ಯುವಕನ ಸಾಧನೆಯೇ ಅಂತ ಹುಬ್ಬೇರಿಸಿದ್ರಾ? ಇವ್ರ ಕಥೆನ ನಾವ್ ಹೇಳ್ತೀವಿ ಕೇಳಿ.


    ಈ ಯುವಕನ ಹೆಸರು ವಿಜಯರಂಜನ ಜೋಶಿ ಅಂತ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ನಿವಾಸಿ. ಸ್ವಂತ ಊರಿನಲ್ಲಿ ಸರಕಾರಿ ಪಿಯು ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸಿದ್ರು, ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ರು.




    ಹೆಚ್. ಡಿ. ಕುಮಾರಸ್ವಾಮಿ ಅವ್ರು ಸಿಎಂ ಆಗಿದ್ದಾಗಲೇ ಮನವಿ ಮಾಡಿದ್ರು. ಐದು ವರ್ಷಗಳಿಂದ ಹಗಲಿರುಳು ಎನ್ನದೇ ಸದಾ ಕಾಲೇಜ್ ಕನಸು ಕಂಡಿದ್ರು.ಪ್ರಧಾನಿ ನರೇಂದ್ರ ಮೋದಿ ಅವರಿಗೂ 2019ರಲ್ಲಿ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ್ರು. ಆಶಾಕಿರಣ ಎಂಬಂತೆ ಮೋದಿ ಕಚೇರಿಯಿಂದ ರಿಪ್ಲೈ ಬಂದಿತ್ತು. ಆದ್ರೂ ಇವ್ರ ಕಾಲೇಜ್ ಹೋರಾಟ ನಡೀತಾನೆ ಇತ್ತು.


    ಇದನ್ನೂ ಓದಿ: Positive Story: ವಿಧವೆಯರೇ ನಡೆಸೋ ಹೊಟೇಲ್! ಇಲ್ಲಿದೆ ನೋಡಿ


    ಆದ್ರೆ ಈಗ ಕಂಡ ಕನಸೆಲ್ಲ ನನಸಾಗಿಬಿಡ್ತು ಎಂಬಂತೆ ವಿಜಯರಂಜನ ಅವ್ರ ಶ್ರಮಕ್ಕೆ ಪ್ರತಿಫಲ ಸಿಕ್ಕೇಬಿಟ್ಟಿದೆ. ಈಗ ನಾಲತವಾಡ ಪಟ್ಟಣಕ್ಕೆ ಸರ್ಕಾರಿ ಕಾಲೇಜು ಮಂಜೂರಾಗಿದೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸರಕಾರಿ ಪಿಯು ಕಾಲೇಜು ಆರಂಭಕ್ಕೆ ಕರ್ನಾಟಕ ಸರಕಾರ ಹಸಿರು ನಿಶಾನೆ ತೋರಿಸಿದೆ.




    ಇದನ್ನೂ ಓದಿ: Drone In Agriculture: ಕೃಷಿಯಲ್ಲಿ ಡ್ರೋನ್ ಬಳಕೆ ಹೇಗೆ? ಈ ರೈತರನ್ನು ನೋಡಿ!


    ವಿಜಯನಿರಂಜನ ಅವ್ರ ಶ್ರಮದಿಂದ ಇಡೀ ನಾಲತವಾಡದ ಜನರು ಖುಷಿಪಡ್ತಿದ್ದಾರೆ. ಡೊನೇಷನ್ ಇಲ್ದೇ ತಮ್ಮ ಮಕ್ಕಳನ್ನು ಕಾಲೇಜ್ ಓದ್ಸೋಕೆ ರೆಡಿ ಆಗಿದ್ದಾರೆ.


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: