• Home
 • »
 • News
 • »
 • vijayapura
 • »
 • Betel Leaf Farming: ವೀಳ್ಯದೆಲೆಯಿಂದ ಕೈತುಂಬಾ ಲಾಭ! ಇದು ವಿಜಯಪುರ ರೈತರ ಸಕ್ಸಸ್ ಸ್ಟೋರಿ

Betel Leaf Farming: ವೀಳ್ಯದೆಲೆಯಿಂದ ಕೈತುಂಬಾ ಲಾಭ! ಇದು ವಿಜಯಪುರ ರೈತರ ಸಕ್ಸಸ್ ಸ್ಟೋರಿ

ವೀಳ್ಯದೆಲೆಯಿಂದ ಲಾಭ!

"ವೀಳ್ಯದೆಲೆಯಿಂದ ಲಾಭ!"

ಕೂಡಗಿ ಊರಿನ ವೀಳ್ಯದೆಲೆ ರುಚಿಗೆ ಮಹಾರಾಷ್ಟ್ರ, ಗೋವಾ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡಿನ ಜನರೂ ಬೆರಗಾಗಿದ್ದಾರೆ.

 • Share this:

  ವಿಜಯಪುರ: ಎಲ್ಲಿ ನೋಡಿದ್ರೂ ವೀಳ್ಯದೆಲೆಯ ಬಳ್ಳಿ, ಅಬ್ಬಾ! ಕಣ್ಣು ನೋಡಿದಷ್ಟೂ ದೂರ, ಬರೋಬ್ಬರಿ 1 ಸಾವಿರ ಎಕರೆಯಲ್ಲಿ ವೀಳ್ಯದೆಲೆಯ (Betel Leaf Farming) ತೋಟ. ಹಸಿರು ಎಲೆಗಳ ನಡುವೆ ನಿಂತು ನಗುವ ರೈತರು, ಏನಿವರ ಯಶಸ್ಸಿನ ಗುಟ್ಟು ಅಂದ್ಕೊಂಡ್ರಾ? ಇದೇ ಹಸಿರು ಎಲೆಗಳೇ ಈ ರೈತರ ಕಿಸೆಯನ್ನು ತುಂಬಿಸಿವೆ ಅಂದ್ರೆ ನೀವು ಆಶ್ಚರ್ಯಪಡ್ತೀರಿ. ಕರ್ನಾಟಕದಲ್ಲಿ ವೀಳ್ಯದೆಲೆ (Betel Leaf Farming In Karnataka) ತವರೂರೆಂದೇ ವಿಜಯಪುರ ಜಿಲ್ಲೆಯನ್ನ ಕರೆಯಲಾಗುತ್ತದೆ. ವಿಜಯಪುರದ (Vijayapura) ಕೂಡಗಿ ಗ್ರಾಮದಲ್ಲಿ ಅಂದಾಜು 800ಕ್ಕೂ ಹೆಚ್ಚು ಕೃಷಿಕರು ವೀಳ್ಯದೆಲೆ ಕೃಷಿ ಮಾಡ್ತಾರೆ. ಪ್ರತಿ ತಿಂಗಳೂ 2 ಬಾರಿ ಈ ಎಲೆ ಕಟಾವು ಮಾಡಲಾಗುತ್ತದೆ. ಪ್ರತಿ ಎಕರೆಗೆ ಸರಾಸರಿ 5 ರಿಂದ 6 ಲಕ್ಷ ಆದಾಯಕ್ಕೆ ಮೋಸವೇ ಇಲ್ಲ ಅಂತಾರೆ ವೀಳ್ಯದೆಲೆ ಬೆಳೆವ ರೈತರು. ಕೊರೊನಾ ಬರ್ಲಿ, ಲಾಕ್ಡೌನ್ ಹೇರಲಿ ವೀಳ್ಯದೆಲೆ ಬೆಳೆದ ರೈತರಿಗಂತೂ ನಷ್ಟ ಆಗಿಲ್ವಂತೆ.


  ಅಂದಹಾಗೆ ಕೂಡಗಿ ಊರಿನ ವೀಳ್ಯದೆಲೆ ರುಚಿಗೆ ಮಹಾರಾಷ್ಟ್ರ, ಗೋವಾ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡಿನ ಜನರೂ ಬೆರಗಾಗಿದ್ದಾರೆ. ಇಲ್ಲಿಂದ ಖಾಯಂ ಆಗಿ ಈ ಎಲ್ಲ ರಾಜ್ಯಕ್ಕೂ ವೀಳ್ಯದೆಲೆ ರಫ್ತಾಗುತ್ತದೆ.


  ಇದನ್ನೂ ಓದಿ: Vijayapura: ಇದು ಪೊಲೀಸ್ ಸ್ಟೇಷನ್ ಅಂದ್ರೆ ನೀವು ನಂಬೋದೇ ಇಲ್ಲ!


  ಒಮ್ಮೆ ವೀಳ್ಯದೆಲೆ ಬೆಳೆಯೋಕೆ ಹೆಚ್ಚೂ ಅಂದ್ರೆ 2 ಲಕ್ಷ ಖರ್ಚಾದ್ರೆ, ಮತ್ತೆ ಆದಾಯ ಲೆಕ್ಕ ಹಾಕೋದೊಂದೇ ಬಾಕಿ, ಯಾವುದೇ ಬಾಧೆಯ ಸಮಸ್ಯೆ ಇರಲ್ಲ ಅಂತಾರೆ ರೈತರು.


  ಇದನ್ನೂ ಓದಿ: Vijayapura Viral Video: ರಣರೋಚಕ ಟಗರು ಕಾಳಗ! ನೋಡ್ತಿದ್ರೆ ಮೈ ಝುಮ್ಮೆನ್ನುತ್ತೆ!


  ಅಷ್ಟೇ ಅಲ್ಲ, ಕೂಡಗಿಯ ವೀಳ್ಯದೆಲೆ ಬೆಳೆವ ರೈತರು ಚಿಕ್ಕ ಚೊಕ್ಕ ಸಹಕಾರಿ ಮಾರುಕಟ್ಟೆಯನ್ನೂ ನಿರ್ಮಿಸಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆ 6 ಕ್ಕೆಲ್ಲ ಎಲೆ ಕಟಾವು ಮಾಡಿ ತಾವೇ ಪ್ಯಾಕ್ ಮಾಡಿ ಹೊರಗಿನ ಮಾರುಕಟ್ಟೆಗಳಿಗೆ ಸಾಗಿಸ್ತಾರೆ. ಇದ್ರಿಂದ ರೈತರಲ್ಲಿ ಒಗ್ಗಟ್ಟೂ ಹೆಚ್ಚಾಗಿದೆ. ಹಸಿರು ವೀಳ್ಯದೆಲೆ ಜೀವನವನ್ನೂ ತಂಪಾಗಿಸಿರಿಸಿದೆ.


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: