ವಿಜಯಪುರ: ಹೋಳಿ ಹಬ್ಬ ಅಂದ್ರೆ ರಂಗು ರಂಗಿನ ಚಿತ್ತಾರ, ಬಣ್ಣದ ಓಕುಳಿ, ಡಿಜೆ ಸದ್ದಿಗೆ ಕುಣಿತ, ಹಲಗೆ ಸದ್ದು. ಯೆಸ್, ಆದ್ರೆ ಈ ಗ್ರಾಮದತ್ತ ಒಂದ್ಸಲ ಕಣ್ಣಾಡಿಸಿ ನೋಡಿ. ಅಂತಹ ಯಾವುದೇ ಕುರುಹು ಕಾಣಿಸಲ್ಲ. ಹಬ್ಬದ ವಾತಾವರಣ ಬಿಡಿ, ಹಬ್ಬ ಇತ್ತು ಅನ್ನೋದು ಗೊತ್ತಾಗಲ್ಲ. ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ಹೋಳಿ ಸಂಭ್ರಮ ಅಬ್ಬರ (Holi 2023) ಜೋರಿದ್ರೂ, ಇಲ್ಯಾಕೆ ಸ್ಮಶಾನ ಮೌನ ಅಂತೀರ? ಈ ಕುರಿತ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಬಣ್ಣದೋಕುಳಿ ಕಾಣಸಿಗದು?
ಯೆಸ್, ಉತ್ತರ ಕರ್ನಾಟಕದಲ್ಲಿ ಹೋಳಿ ಅಂದ್ರೆ ಸಂಭ್ರಮಕ್ಕೆ ಇನ್ನೊಂದು ಹೆಸರು ಇದ್ದಂತೆ. ಆದ್ರೆ ವಿಜಯಪುರದ ಆರ್.ಎಸ್. ಬೇನಾಳ ಗ್ರಾಮದಲ್ಲಿ ಇಂತಹ ಯಾವುದೇ ಸಂಪ್ರದಾಯ ಕಂಡು ಬರುವುದಿಲ್ಲ.
ಇಲ್ಲಿ ಯಾರೊಬ್ಬರೂ ಕಾಮದಹನ ಮಾಡಲ್ಲ, ಹಲಗೆ ಬಾರಿಸಲ್ಲ, ಸೋಗಿನ ಬಂಡಿಗಳು ಇರಲ್ಲ, ಬಣ್ಣದೋಕುಳಿಯೂ ಇರಲ್ಲ. ಇದು ಇಂದು ನಿನ್ನೆಯ ಸಂಪ್ರದಾಯವೂ ಅಲ್ಲ. ತಲೆ ತಲಾಂತರಗಳಿಂದಲೂ ಇಲ್ಲಿನ ಹಿರಿಯರು ಹೋಳಿ ಆಚರಿಸಿಲ್ಲ. ಅದನ್ನೇ ಈಗಲೂ ಇಲ್ಲಿನ ಯುವಕರು ಮುಂದುವರೆಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: Sainik School: ಸೈನಿಕ ಶಾಲೆಗೆ ಪ್ರವೇಶ ಪಡೆದ 25 ಹೆಣ್ಮಕ್ಕಳು, ಕಡು ಕಷ್ಟದ ತರಬೇತಿ ಇವರಿಗೆ ನೀರು ಕುಡಿದಷ್ಟೇ ಸಲೀಸು!
ಯಾಕೆ ಹೀಗೆ ಗೊತ್ತೇ?
ಅಷ್ಟಕ್ಕೂ ಇಲ್ಲಿ ಹೋಳಿ ಹಬ್ಬ ಆಚರಿಸದೇ ಇರೋದಕ್ಕೆ ಕಾರಣ ಈ ಭಾಗದಲ್ಲಿ ಇರುವ ದುರ್ಗಾದೇವಿ ದೇವಸ್ಥಾನ. ದುರ್ಗಾದೇವಿ ದೇವಸ್ಥಾನ ಈ ಗ್ರಾಮದಲ್ಲಿ ಇರೋದ್ರಿಂದ ಹೋಳಿ ಹಬ್ಬ ಆಚರಿಸಿದರೆ ಕೇಡಾಗುತ್ತದೆ ಎನ್ನುವ ನಂಬಿಕೆ ಇಲ್ಲಿದೆ. ಹೀಗಾಗಿ ಹೋಳಿಯ ಯಾವೊಂದು ಸಂಭ್ರಮವನ್ನೂ ಇಲ್ಲಿ ಆಚರಿಸಲಾಗುವುದಿಲ್ಲ. ಒಂದರ್ಥದಲ್ಲಿ ಆರ್.ಎಸ್. ಬೇನಾಳ ಗ್ರಾಮದಲ್ಲಿ ಹೋಳಿ ಹಬ್ಬಕ್ಕೆ ನಿಷೇಧವಿದೆ.
ಇದನ್ನೂ ಓದಿ: Vijayapura: ಚಂದ್ರಮ್ಮ ದೇವಿ ಭಕ್ತರಿಗೆ ಜೋಳದ ಅಂಬಲಿಯೇ ಮಹಾ ಪ್ರಸಾದ!
ಸಂಪ್ರದಾಯ ಮುರಿಯದ ಗ್ರಾಮಸ್ಥರು
ಒಟ್ಟಿನಲ್ಲಿ ವಿಜಯಪುರದ ಪ್ರಮುಖ ಬೀದಿಗಳಲ್ಲಿ ಹೋಳಿ ಸಂಭ್ರಮ ಜೋರಾಗಿದ್ರೆ, ಆರ್.ಎಸ್.ಬೇನಾಳ ಗ್ರಾಮ ಮಾತ್ರ ಹೋಳಿ ರಂಗಿನಿಂದ ದೂರವೇ ಉಳಿದು ಸಾಮಾನ್ಯ ದಿನದಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿ ಗಮನ ಸೆಳೆದಿದೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ