• Home
 • »
 • News
 • »
 • vijayapura
 • »
 • Bagalkot: ವಾಮಾಚಾರಕ್ಕೆ ಹೆದರಿದ ಅರಣ್ಯ ಇಲಾಖೆ!

Bagalkot: ವಾಮಾಚಾರಕ್ಕೆ ಹೆದರಿದ ಅರಣ್ಯ ಇಲಾಖೆ!

ವಾಮಾಚಾರಕ್ಕೆ ರಸ್ತೆ ಬಂದ್

ವಾಮಾಚಾರಕ್ಕೆ ರಸ್ತೆ ಬಂದ್

ನಿಂಬೆಹಣ್ಣು, ಅರಿಶಿನ, ಕುಂಕುಮ, ಕುಂಬಳಕಾಯಿ, ಮಾಂಸದ ತುಂಡು ಹೀಗೆ ಮೂರು ರಸ್ತೆ ಸೇರೋ ಈ ಜಾಗದಲ್ಲಿ ಅದೆಂತಹ ವಾಮಾಚಾರ?

 • Share this:

  ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಮುಗಿದರೂ ಇಲ್ಲೇನಪ್ಪ ರಸ್ತೆ ಬಂದ್ ಮಾಡ್ಯಾರ. ಕಂಟೋನ್ಮೆಂಟ್ ಝೋನ್ ಥರ ಬಂದೋ ಬಸ್ತು ಮಾಡ್ಯಾರ. ಜನ ಓಡಾಡೋ ರಸ್ತೇನೆ (Vijayapura Road Closed) ಹಿಂಗ್ಯಾಕೆ ಮಾಡಿದ್ರ್? ಅಂತ ಅಂದ್ಕೊಂಡ್ರಾ? ಇಲ್ಲಿ ಕೊರೊನಾನೂ ಇಲ್ಲ, ಯಾವ ಲಾಕ್​ಡೌನ್ (Covid 19 Lockdown) ಇಲ್ಲ. ಆದ್ರೆ ಹಿಂಗೆ ರಸ್ತೆ ಬಂದ್ ಮಾಡ್ಸಿದ್ದು ಮಾತ್ರ ಅರಣ್ಯ ಇಲಾಖೆ (Karnataka Forest Department) ಅಧಿಕಾರಿಗಳು.
  ಅರಣ್ಯ ಇಲಾಖೆ ಹೀಗ್ ಮಾಡೋದಕ್ಕೂ ರೀಸನ್ನಿದೆ. ಅದೇ ನೋಡಿ ಈ ವಾಮಾಚಾರ. ನಿಂಬೆಹಣ್ಣು, ಅರಿಶಿನ, ಕುಂಕುಮ, ಕುಂಬಳಕಾಯಿ, ಮಾಂಸದ ತುಂಡು ಹೀಗೆ ಮೂರು ರಸ್ತೆ ಸೇರೋ ಈ ಜಾಗದಲ್ಲಿ ಅದೆಂತಹ ವಾಮಾಚಾರ. ಪ್ರತಿ ಸಲನೂ ಈ ಬಾಗಲಕೋಟೆಯ ತೇರದಾಳ ಪಟ್ಟಣದ ಮಂದಿ ಇದನ್ನ ಕಂಡು ಆತಂಕಿತರಾಗುತ್ತಿದ್ದರು.


  ಯಾವಾಗ್ ನೋಡಿದ್ರೂ ಈ ರಸ್ತೆಲಿ ವಾಮಾಚಾರದ ಕಾಟ
  ಇಲ್ಲಿನ ರಬಕವಿ ರಸ್ತೆಯ ಭದ್ರಗಿರಿ ಬೆಟ್ಟಕ್ಕೆ ಹೋಗೋದಕ್ಕಂತೂ ಜನರು ಹಿಂಜರಿಯುತ್ತಿದ್ದರು. ಯಾವಾಗ್ ನೋಡಿದ್ರೂ ಈ ರಸ್ತೆಲಿ ವಾಮಾಚಾರದ ಕಾಟ. ಹೀಗಾಗಿ ಅನಿವಾರ್ಯವಾಗಿ ಅರಣ್ಯ ಇಲಾಖೆ ಮೂರು ರಸ್ತೆಯನ್ನ ತಪ್ಪಿಸಿ ಪರ್ಯಾಯ ರಸ್ತೆ ನಿರ್ಮಿಸಿದೆ. ಸದ್ಯ ವಾಮಾಚಾರದ ಸ್ಪಾಟ್ ಆಗಿದ್ದ ಭದ್ರಗಿರಿ ಬೆಟ್ಟಕ್ಕೆ ಹೋಗುವ ರಸ್ತೆಯೇ ಕ್ಲೋಸ್ ಮಾಡಲಾಗಿದೆ.
  ಇದನ್ನೂ ಓದಿ: Success Story: ಕಾಲೇಜ್​ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!


  ವಾಹನ ಸವಾರರಿಗೆ ಆ್ಯಕ್ಸಿಡೆಂಟ್ ಆಗುತ್ತಂತೆ
  ಅಮಾವಾಸ್ಯೆ, ಹುಣ್ಣಿಮೆ, ಶುಕ್ರವಾರ, ಭಾನುವಾರ ಬಂದರಂತೂ ಕೇಳೋದೆ ಬೇಡ. ಈ ರಸ್ತೆಯುದ್ದಕ್ಕೂ ವಾಮಾಚಾರದ್ದೇ ಅವಶೇಷ. ಸುಮ್ನೆ ಸುತ್ತಾಡೋಕೆ ಅಂತ ಹೋಗೋರು, ಸಾರ್ವಜನಿಕರು ಓಡಾಡೋಕ್ಕೂ ಭಯಪಡ್ತಿದ್ರು. ವಾಹನ ಸವಾರರಂತೂ ರಾತ್ರಿ ಮೇಲೆ ಹೋದ್ರೆ ಅಪಘಾತ ಆಗ್ತವೆ ಅಂತಾ ನೈಟ್ ಓಡಾಟವೇ ಬಿಟ್ಟಿದ್ರು.


  ಇದನ್ನೂ ಓದಿ: Positive Story: ವಿಧವೆಯರೇ ನಡೆಸೋ ಹೊಟೇಲ್! ಇಲ್ಲಿದೆ ನೋಡಿ


  ಇದ್ರಿಂದ ಬೇಸತ್ತ ಅರಣ್ಯ ಇಲಾಖೆ ತಮಗೆ ಸೇರಿದ ರಸ್ತೆಯನ್ನ ಬಂದ್ ಮಾಡಿ ಪರ್ಯಾಯ ರೋಡ್ ಮಾಡಿದೆ. ಒಟ್ಟಿನಲ್ಲಿ ವಾಮಾಚಾರ ವಿಜಯಪುರದ ಭದ್ರಗಿರಿ ಬೆಟ್ಟಕ್ಕೆ ತೆರಳೋ ರಸ್ತೆಯನ್ನೇ ಸೀಲ್ ಡೌನ್ ಮಾಡಿಸಿದೆ.


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: