Positive Story: ವಿಧವೆಯರೇ ನಡೆಸೋ ಹೊಟೇಲ್! ಇಲ್ಲಿದೆ ನೋಡಿ

ಗಂಡ ತೀರಿಕೊಂಡ ಒಟ್ಟು 9 ಮಹಿಳೆಯರು ಅನುಗ್ರಹ ಹೊಟೇಲ್ನಲ್ಲಿ ಕೆಲಸ ಮಾಡ್ತಿದ್ದಾರೆ. ಲೈಂಗಿಕ ಕಾರ್ಯಕರ್ತೆಯರಿಗೆ ಕೆಲಸ ಅಗತ್ಯ ಇದ್ರೆ ಅವರಿಗೂ ರೆಡ್ ಕಾರ್ಪೆಟ್ ಹಾಕಿ ಕೆಲಸ ಕೊಡ್ತಾರೆ ಭಾರತಿ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

 • Share this:
  ವಿಜಯಪುರ: ಒಂದ್ ಪ್ಲೇಟ್ ಇಡ್ಲಿ, ನಂಗೊಂದ್ ಪ್ಲೇಟ್ ಚಪಾತಿ.. ಆರ್ಡರ್ ಮಾಡಿದ್ ಕೂಡ್ಲೆ ಬರೋ ರುಚಿರುಚಿಯಾದ ತಿಂಡಿ ತಿನಿಸು ಊಟ. ಅರೇ! ಏನ್ ಆರ್ಡರ್ ಮಾಡಿದ್ರೂ ಮಹಿಳೆಯರೇ ತಂದುಕೊಡ್ತಾರಲ್ಲ ಅಂತ ಮೂಗಿನ ಮೇಲೆ ಬೆರಳಿಟ್ರಾ? ಹೌದು, ಇಲ್ಲಿ ಹಾಗೇ, ಇದೇ ಈ ಈ ಹೊಟೇಲ್ ವಿಶೇಷ. ವಿಜಯಪುರ ನಗರದ (Vijayapura) ಸೈನಿಕ ವೃತ್ತದ ಪಕ್ಕದಲ್ಲಿರುವ ಈ ಚಿಕ್ಕ ಹೋಟೆಲ್ (Vijayapura Anugraha Hotel) ಹೆಸರು ಅನುಗ್ರಹ ಅಂತ, ಅರೇ, ಈ ಹೊಟೇಲ್ ಸುದ್ದಿ ಏಕೆ ಅಂದುಕೊಂಡ್ರಾ? ಇಲ್ಲೇ ಇದೆ ಒಂದೊಳ್ಳೆ ವಿಷ್ಯ! ಈ ಹೊಟೇಲ್ನಲ್ಲಿ ಕೆಲಸ ಮಾಡೋರೆಲ್ಲ ಮಹಿಳೆಯರೇ! ಅಲ್ದೇ ಈ ಹೊಟೇಲ್​ನಲ್ಲಿ 9 ವಿಧವೆಯರು ಕೆಲಸ ಮಾಡ್ತಾ ತಮ್ಮ ಕಾಲ ಮೇಲೆ ತಾವು ಸ್ವತಂತ್ರವಾಗಿ ನಿಂತಿದ್ದಾರೆ. 6 ವರ್ಷದ ಹಿಂದೆ ಓರ್ವ ಮಹಿಳೆ ಶುರುಮಾಡಿದ ಹೋಟೆಲ್ ಸ್ಟಾರ್ಟ್ಅಪ್ ಇಂದು ಸಾಮಾಜಿಕ ಬದಲಾವಣೆಯನ್ನೇ ಮಾಡ್ತಿದೆ.

  ಇವರೇ ನೋಡಿ ಹೊಟೇಲ್ ಓನರ್, ಹೆಸ್ರು ಭಾರತಿ ಅಂತ. ಭಾರತಿ ಅವರ ಗಂಡ ಅನಾರೋಗ್ಯದಿಂದ ನಿಧನರಾಗ್ತಾರೆ. ಇಬ್ರು ಹೆಣ್ಣುಮಕ್ಕಳು, ಮನೆ ಜವಾಬ್ದಾರಿ, ಒಂದ್ ಕ್ಷಣ ಏನ್ಮಾಡ್ಬೇಕು ಅಂತಾನೇ ಹೊಳೆಯಲ್ಲ. ಆದ್ರೂ ಏನಾದ್ರೂ ಮಾಡ್ಲೇಬೇಕು ಅನ್ನೋ ಉತ್ಸಾಹದಿಂದ ಪುಟ್ಟ ಗಾಡಿಲಿ ತಿಂಡಿ ತಿನಿಸು ಮಾರಾಟ ಶುರುಮಾಡ್ತಾರೆ. ಆ ಗಾಡಿನೇ ಇಂದು ಇಷ್ಟು ದೊಡ್ಡ ಹೊಟೇಲ್ ಆಗಿದೆ! ವಿಧವೆಯರ ಪಾಲಿಗೆ ಕೆಲಸ ನೀಡೋ ತಾಣ ಆಗಿದೆ.

  ಏನೆಲ್ಲ ಸಿಗುತ್ತೆ?
  ಬೆಳ್ಳಂಬೆಳಗ್ಗೆ ಅನುಗ್ರಹ ಹೊಟೇಲ್​ಗೆ ಹೋದ್ರೆ ಬಿಸಿಬಿಸಿ ಇಡ್ಲಿ, ರುಚಿರುಚಿ ದೋಸೆ ಇರುತ್ತೆ. ಮಧ್ಯಾಹ್ನ ಹೊಟ್ಟೆ ಹಸಿದರೆ ಚಪಾತಿ, ಚಟ್ನಿ,ಕಾಳು ಪಲ್ಯ, ಅಂಡಾಕರಿ, ಅನ್ನ ಸಾಂಬಾರ್ ರೆಡಿ ಇರುತ್ತೆ. ಒಂದು ಫುಲ್ ಮೀಲ್ಸ್​ಗೆ ಕೇವಲ 40 ರೂಪಾಯಿ ಕೊಟ್ರಾಯ್ತು, ಹೊಟ್ಟೆತುಂಬಾ ಊಟ ಹೊಟ್ಟೆಸೇರುತ್ತೆ. ಹತ್ರಾನೇ ಇರೋ ಕೋಚಿಂಗ್ ಸೆಂಟರ್​ಗಳ ವಿದ್ಯಾರ್ಥಿಗಳ ಪಾಲಿಗೆ ಇವರೇ ಅನ್ನದಾತೆ.

  ಇದನ್ನೂ ಓದಿ: Vijayapura: ಬಟ್ಟೆ ಅಂಗಡಿಲಿ ಸಂಸ್ಕೃತ! ಮುಸ್ಲಿಂ ನೌಕರರ ಸಂಸ್ಕೃತ ಕೇಳೋಕೆ ಹಿತ

  ಲೈಂಗಿಕ ಕಾರ್ಯಕರ್ತೆಯರಿಗೂ ಕೆಲಸ
  ಕೆಲಸ ಇದೆ ಅಂತ ಬೋರ್ಡ್ ಹಾಕಿ ಮಹಿಳೆಯರಿಗೆ, ಅದ್ರಲ್ಲೂ ವಿಧವೆಯರಿಗೆ ಕೆಲಸ ಕೊಡದೇ ಇರೋರ ಸಂಖ್ಯೆ ಇಂದೂ ತುಂಬಾನೇ ಇದೆ. ಇಂಥಾ ಕೆಟ್ಟ ಯೋಚನೆಗಳಿಗೆ ಸಮಾಜದಲ್ಲಿ ಜಾಗಾನೇ ಇರ್ಬಾರ್ದು ಅಂತ ಭಾರತಿ ಅವ್ರು ವಿಧವೆಯರಿಗೇನೇ ಕೆಲಸ ಕೊಡ್ತಾರೆ. ಗಂಡ ತೀರಿಕೊಂಡ ಒಟ್ಟು 9 ಮಹಿಳೆಯರು ಅನುಗ್ರಹ ಹೊಟೇಲ್ನಲ್ಲಿ ಕೆಲಸ ಮಾಡ್ತಿದ್ದಾರೆ. ಲೈಂಗಿಕ ಕಾರ್ಯಕರ್ತೆಯರಿಗೆ ಕೆಲಸ ಅಗತ್ಯ ಇದ್ರೆ ಅವರಿಗೂ ರೆಡ್ ಕಾರ್ಪೆಟ್ ಹಾಕಿ ಕೆಲಸ ಕೊಡ್ತಾರೆ ಭಾರತಿ.

  ಇದನ್ನೂ ಓದಿ:Yellamma Temple: ಬೇಡಿದ ವರ ನೀಡುವ ತಾಯಿ ಯಲ್ಲಮ್ಮ; ಎಲ್ಲಿದೆ ದೇವಸ್ಥಾನ?

  ತಮ್ಮ ಪಾಡಿಗೆ ತಾವು ಕೆಲಸ ಮಾಡ್ತಾ ದೊಡ್ಡ ಬದಲಾವಣೆಯನ್ನೇ ಮಾಡ್ತಿರೋ ಭಾರತಿ ಅವ್ರಿಗೆ ನಾವೂ ಒಂದ್ ಸಲಾಮ್ ಹಾಕ್ಲೇಬೇಕಲ್ವಾ..

  ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
  Published by:ಗುರುಗಣೇಶ ಡಬ್ಗುಳಿ
  First published: