• Home
 • »
 • News
 • »
 • vijayapura
 • »
 • Positive Story: ಚಿತ್ರಗಳಲ್ಲೇ ವಿಜ್ಞಾನ, ಗಣಿತ ಕಲಿಸುವ ವಿಜಯಪುರ ಕಲಾವಿದ!

Positive Story: ಚಿತ್ರಗಳಲ್ಲೇ ವಿಜ್ಞಾನ, ಗಣಿತ ಕಲಿಸುವ ವಿಜಯಪುರ ಕಲಾವಿದ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇವರ ಮನೆಲಿರೋ ಖಗೋಳಶಾಸ್ತ್ರ, ಭೂಗೋಳಶಾಸ್ತ್ರ, ವಿಜ್ಣಾನ, ಗಣಿತ ಸೇರಿ ನಾನಾ ವಿಷಯಗಳ ಚಿತ್ರಕಲೆಗಳು, ತ್ರಿಡೀ ಪೇಟಿಂಗ್​ಗಳು ಸೇರಿ ಹಲವು ಚಿತ್ರಗಳು ಗಮನಸೆಳೆಯುತ್ತಿವೆ.

 • Share this:

  ವಿಜಯಪುರ: ಆಹಾ! ಗೋಡೆಗಳ ಮೇಲೆಲ್ಲ ಎಷ್ಟೆಲ್ಲ ಪೇಟಿಂಗ್ಸ್! ಇದು ಯಾವುದೋ ಆರ್ಟ್ ಗ್ಯಾಲರಿನೋ ಅಥವಾ ಕಲಾಶಾಲೆನೋ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು! ಇದು ನಮ್ ವಿಜಯಪುರದ (Vijayapura Artist) ಓರ್ವ ಚಿತ್ರಕಲಾವಿದರ ಮನೆ. ಮನೆ ಅನ್ನೋದಕ್ಕಿಂತಲೂ ಮಕ್ಕಳ ಪಾಲಿನ ಸ್ಟಡಿ ಸೆಂಟರ್! ಸಾಮಾನ್ಯವಾಗಿ ವಿಜ್ಞಾನ, ಗಣಿತ (Science And Maths) ಕಬ್ಬಿಣದ ಕಡಲೆಕಾಯಿ ಅನ್ನೋ ಫೀಲ್ ವಿದ್ಯಾರ್ಥಿಗಳಲ್ಲಿರುತ್ತೆ. ಆದ್ರೆ ವಿಜಯಪುರದ ಹಲವು ವಿದ್ಯಾರ್ಥಿಗಳಿಗೆಈ ಸಬ್ಜೆಕ್ಟ್​ಗಳು ಕಷ್ಟವೆನಿಸುತ್ತಿಲ್ಲ. ಹಾಗೇನಾದರೂ ಕಷ್ಟ ಅಂತಾದ್ರೆ ಅವ್ರು ಸೀದಾ ಈ ಚಿತ್ರ ಕಲಾವಿದರ ಮನೆ ಬಂದ್ಬಿಡ್ತಾರೆ!


  ಇವರ ಹೆಸರು ನೀಲಕಂಠ ಪಾಟೀಲ್ ಅಂತ. ಇವ್ರ ಮನೇಲಿ ಚಿತ್ರಗಳ ಸಾಗರವೇ ಇದೆ. ವಿಶೇಷ ಅಂದ್ರೆ ವಿಜ್ಞಾನಕ್ಕೆ ಸಂಬಂಧಿಸಿದ್ದ ಚಿತ್ರಗಳು ತುಂಬಿ ತುಳುಕಾಡ್ತಿವೆ. ಗ್ರಾಮೀಣ ಮಕ್ಕಳಿಗೆ ನೆರವಾಗಲಿ ಅನ್ನೋ ಉದ್ದೇಶದಿಂದಲೇ ಇಷ್ಟೆಲ್ಲ ಚಿತ್ರ ರಚಿಸಿದ್ದಾರೆ ನೀಲಕಂಠ ಪಾಟೀಲ್. ಪ್ರತಿಯೊಂದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಸುಲಭವಾಗಿ ಚಿತ್ರದ ಮೂಲಕ ಪಠ್ಯವನ್ನು ವಿವರಿಸ್ತಾರೆ. ಶಾಲಾ ಮಕ್ಕಳು ಶಿಕ್ಷಕರ ಜೊತೆಗೋ ಅಥವಾ ಫ್ರೀ ಟೈಮಲ್ಲಿ ತಾವಾಗಿಯೇ ಪಾಟೀಲ್ ಮನೆಗೆ ಭೇಟಿ ನೀಡ್ತಾರೆ.


  ಇದನ್ನೂ ಓದಿ: God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!


  ಓದಿದ್ದು ನಾಲ್ಕನೇ ಕ್ಲಾಸ್, ಆದ್ರೆ ಸಾಧನೆ ಮಾತ್ರ ಅಪರಿಮಿತ!
  ವಿಶೇಷ ಅಂದ್ರೆ, ಸರಳ ವ್ಯಕ್ತಿತ್ವದ ಚಿತ್ರಕಲಾವಿದ ನೀಲಕಂಠ ಪಾಟೀಲ್ ಓದಿದ್ದು ನಾಲ್ಕನೇ ಕ್ಲಾಸ್ ಮಾತ್ರ. ಆದ್ರೂ ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ಪರಿಣಿತಿ ಪಡೆದಿದ್ದಾರೆ. ಹೆಚ್ಚು ಶಾಲೆ ಕಲಿಯದೆ, ಗುರುವಿನ ಮಾರ್ಗದರ್ಶನವಿಲ್ಲದೆ, ಸ್ವಯಂ ಪ್ರಯತ್ನದಿಂದ ಚಿತ್ರಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ವಿಜ್ಞಾನ ಆಧಾರಿತ ಚಿತ್ರಗಳು ಸೇರಿ ನಾನಾ ವಿಧದ ಚಿತ್ರಕಲಾ ಪ್ರದರ್ಶನವನ್ನ ತಮ್ಮ ಮನೆಯಲ್ಲಿಯೇ ಏರ್ಪಡಿಸಿದ್ದಾರೆ.


  ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ಇವರ ಮನೆ ಹುಡುಕಿ ಬರ್ತಾರೆ!
  ಇವರ ಮನೆಲಿರೋ ಖಗೋಳಶಾಸ್ತ್ರ, ಭೂಗೋಳಶಾಸ್ತ್ರ, ವಿಜ್ಣಾನ, ಗಣಿತ ಸೇರಿ ನಾನಾ ವಿಷಯಗಳ ಚಿತ್ರಕಲೆಗಳು, ತ್ರಿಡೀ ಪೇಟಿಂಗ್​ಗಳು ಸೇರಿ ಹಲವು ಚಿತ್ರಗಳು ಗಮನಸೆಳೆಯುತ್ತಿವೆ. ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ನಿತ್ಯ ಇವರ ಮನೆಗೆ ಭೇಟಿ ನೀಡಿ ಪಾಟೀಲ್ ಅವರಿಂದ ಮಾಹಿತಿ ಪಡೆಯುತ್ತಾರೆ.


  ಇದನ್ನೂ ಓದಿ: Ilkal Saree Special: ಇಳಕಲ್ ಸೀರೆ ಹೀಗೆ ತಯಾರಾಗುತ್ತೆ! ನೀವೂ ಮಿರಮಿರ ಮಿಂಚಿ!


  ಇವರೇ ರಚಿಸಿರುವ ನಾನಾ ಆಧುನಿಕ ಚಿತ್ರಗಳು, ವಸ್ತುಚಿತ್ರಗಳು, ಕುತೂಹಲ ಮೂಡಿಸುವ ಚಿತ್ರಗಳು, ಮಕ್ಕಳ ಯೋಚನಾ ಶಕ್ತಿ ಹೆಚ್ಚಿಸುವ ಚಿತ್ರಗಳು ಪ್ರದರ್ಶನ ಏರ್ಪಡಿಸ್ತಾರೆ. ಗ್ರಾಮೀಣ ಭಾಗದಲ್ಲಿ ಹೀಗೊಂದು ಜ್ಞಾನದ ಬೆಳಕು ಪಸರಿಸುತ್ತಿರುವ ಈ ಚಿತ್ರ ಕಲಾವಿದರಿಗೆ ಸೆಲ್ಯೂಟ್ ಹೇಳಲೇಬೇಕು.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: