• ಹೋಂ
 • »
 • ನ್ಯೂಸ್
 • »
 • ವಿಜಯಪುರ
 • »
 • Ugadi 2023 Jatra: ಮುಳುಗಡೆ ಸಂತ್ರಸ್ತರ ಅದ್ದೂರಿ ಜಾತ್ರೆ, ಯುಗಾದಿಗೂ ಮುನ್ನ ಹೆಚ್ಚಾಯ್ತು ಸಂಭ್ರಮ

Ugadi 2023 Jatra: ಮುಳುಗಡೆ ಸಂತ್ರಸ್ತರ ಅದ್ದೂರಿ ಜಾತ್ರೆ, ಯುಗಾದಿಗೂ ಮುನ್ನ ಹೆಚ್ಚಾಯ್ತು ಸಂಭ್ರಮ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಪುನರ್ವಸತಿ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯ ಮುಳುಗಡೆ ಸಂತ್ರಸ್ತರ ಆರಾಧ್ಯ ದೇವರಾಗಿರುವ ಮುದ್ದೇಶ ಪ್ರಭುಗಳ ಜಾತ್ರೆ ಪ್ರತಿ ವರ್ಷ ಯುಗಾದಿಗೂ ಮುನ್ನ ಸಡಗರ ಸಂಭ್ರಮದಿಂದ ನಡೆಯುವುದು ಸಂಪ್ರದಾಯ.

 • News18 Kannada
 • 2-MIN READ
 • Last Updated :
 • Bijapur, India
 • Share this:

ವಿಜಯಪುರ: ಜನಜಾತ್ರೆಯ ನಡುವೆ ರಥೋತ್ಸವದ(Rathotsav) ಸಂಭ್ರಮ. ಭಕ್ತರ ಜಯಘೋಷದ ನಡುವೆ ನಡೆಯಿತು ದೇವರ ಮೆರವಣಿಗೆ. ವಿದ್ಯುತ್ ದೀಪಗಳ ಚಿತ್ತಾರ, ವ್ಯಾಪಾರ ಮಳಿಗೆಗಳ ವಹಿವಾಟು, ಎಲ್ಲವೂ ಈ ಜಾತ್ರೆಯ (Ugadi 2023 Jatra) ಸೊಬಗನ್ನ ಹೆಚ್ಚಿಸಿತ್ತು. ಅಷ್ಟಕ್ಕೂ ಈ ಜಾತ್ರೆ ಎಲ್ಲಿಯದ್ದು ಅಂತೀರ? ಈ ಸ್ಟೋರಿ ನೋಡಿ ನಿಮ್ಗೇ ಗೊತ್ತಾಗುತ್ತೆ.


ಯೆಸ್, ವಿಜಯಪುರದ ಕಮದಾಳದ ಮುದ್ದೇಶ ಪ್ರಭು ಜಾತ್ರೆ ಪ್ರಯುಕ್ತ ನಡೆದ ರಥೋತ್ಸವ ಭಾರೀ ವೈಭವಕ್ಕೆ ಸಾಕ್ಷಿಯಾಯಿತು. ಕಮದಾಳ ನಗರದಿಂದ‌ 60 ಕಿಲೋಮೀಟರ್ ದೂರದಲ್ಲಿರುವ ಈ ಪುನರ್ವಸತಿ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯ ಮುಳುಗಡೆ ಸಂತ್ರಸ್ತರ ಆರಾಧ್ಯ ದೇವರಾಗಿರುವ ಮುದ್ದೇಶ ಪ್ರಭುಗಳ ಜಾತ್ರೆ ಪ್ರತಿ ವರ್ಷ ಯುಗಾದಿಗೂ ಮುನ್ನ ಸಡಗರ ಸಂಭ್ರಮದಿಂದ ನಡೆಯುವುದು ಸಂಪ್ರದಾಯ.
ದೀರ್ಘದಂಡ ನಮಸ್ಕಾರ
ನಸುಕಿನ ಜಾವ ದೇವರ ಮೂರ್ತಿಗೆ ವಿಶೇಷವಾಗಿ ಅಭಿಷೇಕ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ನಡೆದವು. ಇದಾದ ಬಳಿಕ ಇಲ್ಲಿನ ಭಕ್ತರು ದೇವಸ್ಥಾನಕ್ಕೆ ದೀರ್ಘದಂಡ ನಮಸ್ಕಾರ ಸಲ್ಲಿಸಿದರು. ಈ ಪದ್ಧತಿಯೂ ಇಲ್ಲಿ ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಅದ್ದೂರಿ ಮೆರವಣಿಗೆ
ನಂತರ ದೇವರ ಮೂರ್ತಿಗೆ ಗಂಗಸ್ಥಾನ ಮೆರವಣಿಗೆ ಮೂಲಕ ಸಮೀಪದ ಕೃಷ್ಣಾ ನದಿಗೆ ದೇವರ ಮೂರ್ತಿಯನ್ನ ತೆಗೆದುಕೊಂಡು ಹೋಗಲಾಗುತ್ತೆ. ಅಲ್ಲಿಯೂ ಪೂಜೆಯನ್ನ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮಾಡಲಾಗುತ್ತೆ. ಮೆರವಣಿಗೆ ಉದ್ದಕ್ಕೂ ಸುಮಂಗಲಿಯರು ಕಳಸಾರತಿ, ಪೂರ್ಣಕುಂಭ ಹೊತ್ತು ಸಾಗಿದರು. ಅಷ್ಟೇ ಅಲ್ಲದೇ ಯುವಕರು ಡಿಜೆ ಹಾಡಿಗೆ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ: Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ
ವೈಭವದ ಜಾತ್ರೆ ಸಂಪನ್ನ
ಅದ್ಧೂರಿಯಾಗಿ ಜರುಗಿದ ರಥೋತ್ಸವ ಸಂಜೆಯಾಗುತ್ತಿದ್ದಂತೆ ಮಹಿಳೆಯರು, ಪುರುಷರು, ಯುವಕರು ದೇವಸ್ಥಾನಕ್ಕೆ ಬಗೆ ಬಗೆಯ ಉಡುಗೆಯನ್ನ ತೊಟ್ಟು ದೇವಸ್ಥಾನದ ಪ್ರಾಂಗಣದಲ್ಲಿ ಜಮಾಯಿಸಿದರು.


ಇದನ್ನೂ ಓದಿ: Vijayapura: ಇಡೀ ವರ್ಷ ಹೆಸರಿಲ್ಲದೇ ಬೆಳೆಯುವ ಮಕ್ಕಳು!


ಭಕ್ತರು ಬಾಳೆ ಹಣ್ಣು, ಉತ್ತತ್ತಿ, ಬೆಂಡು, ಬೆತ್ತಾಸುಗಳನ್ನು ರಥೋತ್ಸವಕ್ಕೆ ಎಸೆದು ಭಕ್ತಿಭಾವವನ್ನ ಮೆರೆದರು. ಒಟ್ಟಿನಲ್ಲಿ ಕಮದಾಳದ ಮುದ್ದೇಶ ಪ್ರಭುಗಳ ಜಾತ್ರೆ ವೈಭವದೊಂದಿಗೆ ಸಂಪನ್ನಗೊಂಡಿತು.‌

top videos


  ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

  First published: