• Home
  • »
  • News
  • »
  • vijayapura
  • »
  • North Karnataka: ಉತ್ತರ ಕರ್ನಾಟಕ ಮೊದಲು ಹೇಗಿತ್ತು? ತಿಳಿಯೋಕೆ ಇಲ್ಲಿಗೆ ಬರ್ಲೇಬೇಕು!

North Karnataka: ಉತ್ತರ ಕರ್ನಾಟಕ ಮೊದಲು ಹೇಗಿತ್ತು? ತಿಳಿಯೋಕೆ ಇಲ್ಲಿಗೆ ಬರ್ಲೇಬೇಕು!

ಇಲ್ಲಿ ನೋಡಿ ವಿಡಿಯೋ

ಇಲ್ಲಿ ನೋಡಿ ವಿಡಿಯೋ

ವೀರಗಲ್ಲುಗಳು, ಶಾಸನಗಳು, ಭಗ್ನಗೊಂಡ ಶಿಲ್ಪಗಳು, ನಾಣ್ಯಗಳು, ಪುರಾತನ ಕಾಲದ ಪಾತ್ರೆ, ಪಳೆಯುಳಿಕೆ, ಯದ್ಧದಲ್ಲಿ ರಾಜ ಮಹಾರಾಜರು ಬಳಸಿದ ಖಡ್ಗಗಳನ್ನ ಕೂಡಾ ಇಲ್ಲಿ ಸಂರಕ್ಷಿಸಲಾಗಿದೆ.

  • Share this:

    ಬಾಗಲಕೋಟೆ: ಹಳ್ಳಿ ಕಟ್ಟೆಯಲ್ಲಿ ಕೂತು ಮಾತಾಡೋರು, ಚಾಪೆ ಹಾಸಿ ಹೋಂ ವರ್ಕ್ ಮಾಡೋ ಮಕ್ಕಳು, ಊರ ಬಾವಿಯಿಂದ ನೀರು ಸೇದೋ ನಾರಿಯರು, ದೇವ್ರಿಗೆ ಪೂಜೆ ಮಾಡ್ತಿರೋ ಹೆಂಗಸು, ಅಡುಗೆ ಮನೆಯಲ್ಲಿನ ಸಂಭ್ರಮ, ನೃತ್ಯ, ಕುಣಿತ.. ಅಬ್ಬಬ್ಬ ಹೇಳುತ್ತಾ ಹೋದರೆ ದಿನವೇ ಸಾಲದು, ಅಷ್ಟೊಂದು ಬಗೆಯ ಕಲಾಕೃತಿಗಳು! ಪಕ್ಕಾ ಹಳ್ಳಿ ಸಂಸ್ಕೃತಿಯನ್ನ ಮನಮುಟ್ಟುವಂತೆ ತಿಳಿಸಿಕೊಡುತ್ತೆ ಈ ವಸ್ತು ಸಂಗ್ರಹಾಲಯ. ಅಂದಹಾಗೆ ಈ ಉತ್ತರ ಕರ್ನಾಟಕ ಜಾನಪದ ವಸ್ತು ಸಂಗ್ರಹಾಲಯ (North Karnataka Folk Culture Museum) ಇರೋದು ಬಾಗಲಕೋಟೆಯ (Bagalakote) ನವನಗರದ ಕಲಾ ಭವನದಲ್ಲಿ.


    ವಿಜಯಪುರ ಮತ್ತು ಬಾಗಲಕೋಟೆ ಈ ಅವಳಿ ಜಿಲ್ಲೆಗಳ ನಡುವೆ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ನಿರ್ಮಾಣದಿಂದ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಈ ಗ್ರಾಮಗಳಲ್ಲಿ ಪತ್ತೆಯಾಗಿರುವ ವೀರಗಲ್ಲುಗಳು, ಶಾಸನಗಳು, ಭಗ್ನಗೊಂಡ ಶಿಲ್ಪಗಳು, ನಾಣ್ಯಗಳು, ಪುರಾತನ ಕಾಲದ ಪಾತ್ರೆ, ಪಳೆಯುಳಿಕೆ, ಯದ್ಧದಲ್ಲಿ ರಾಜ ಮಹಾರಾಜರು ಬಳಸಿದ ಖಡ್ಗಗಳನ್ನ ಕೂಡಾ ಇಲ್ಲಿ ಸಂರಕ್ಷಿಸಲಾಗಿದೆ.


    ಇದನ್ನೂ ಓದಿ: God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!


    ನಿರ್ಜೀವ ಕಲಾಕೃತಿಗಳು ಮಾತನಾಡುತ್ತಿವೆ ಅನಿಸುವಂತಿದೆ!
    ಉತ್ತರ ಕರ್ನಾಟಕದ ಭಾಗದಲ್ಲಿನ ಜನತೆಯ ಜೀವನ ಶೈಲಿ, ಕಲೆ, ಸಂಸ್ಕೃತಿಯನ್ನ ಜನರಿಗೆ ಪರಿಚಯಿಸುತ್ತವೆ ಇಲ್ಲಿನ ಕಲಾಕೃತಿಗಳು. ಕೆಲವೊಂದಂತೂ ನೋಡ್ತಿದ್ರೆ ಅರೆ! ಇದೇ ಸಂಸ್ಕೃತಿ ಚೆನ್ನಾಗಿತ್ತಲ್ವ ಅಂತಾ ಅದೆಷ್ಟೋ ಹಿರಿಯರು ಭಾವಿಸದೇ ಇರರು. ಇಲ್ಲಿರೋ ಪ್ರತಿಯೊಂದು ನಿರ್ಜೀವ ಕಲಾಕೃತಿಗಳು ಕೂಡಾ ನಮ್ಮ ಜೊತೆಗೆ ಮಾತನಾಡುತ್ತಿವೆ ಅನ್ನೋ ಹಾಗಿವೆ. ವಸ್ತು ಸಂಗ್ರಹಾಲಯದ ಅದ್ಭುತ. ಹಾಗಾಗಿ ಪ್ರವಾಸಿಗರು ಕೂಡಾ ಮ್ಯೂಸಿಯಂ ಒಳಹೊಕ್ಕುತ್ತಲೇ ಆಸಕ್ತಿಯಿಂದ ವೀಕ್ಷಿಸುತ್ತಲೇ ಮುಂದೆ ಸಾಗ್ತಾರೆ.


    ಇದನ್ನೂ ಓದಿ: Positive Story: ಚಿತ್ರಗಳಲ್ಲೇ ವಿಜ್ಞಾನ, ಗಣಿತ ಕಲಿಸುವ ವಿಜಯಪುರ ಕಲಾವಿದ!


    ಒಟ್ಟಿನಲ್ಲಿ ಮೊಬೈಲ್ ಸಂಸ್ಕೃತಿಯ ನಡುವೆ ಇಂದಿನ ಮಕ್ಕಳಿಗೆ ಈ ಹಿಂದೆ ಇದ್ದ ಹಳ್ಳಿ ಸಂಸ್ಕೃತಿಯನ್ನ ಪರಿಚಯ ಮಾಡುತ್ತಿರುವುದು ಶ್ಲಾಘನೀಯ ವಿಚಾರವೇ ಸರಿ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: