• Home
  • »
  • News
  • »
  • vijayapura
  • »
  • Positive Story: ಲಕ್ಷ ಲಕ್ಷ ಸ್ವಂತ ಹಣದಲ್ಲಿ ಊರು ಕ್ಲೀನ್ ಮಾಡೋ ವಿಜಯಪುರದ ಯುವಕರು!

Positive Story: ಲಕ್ಷ ಲಕ್ಷ ಸ್ವಂತ ಹಣದಲ್ಲಿ ಊರು ಕ್ಲೀನ್ ಮಾಡೋ ವಿಜಯಪುರದ ಯುವಕರು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಗಾನಯೋಗಿ ಸಂಘದಲ್ಲಿ ಗಾಯಕ, ವರ್ಣಚಿತ್ರ ಕಲಾವಿದ, ರಂಗಕರ್ಮಿ, ಬಟ್ಟೆ ವ್ಯಾಪಾರಿ, ಹೋಟೆಲ್ ಮಾಲೀಕ ಹೀಗೆ ಬದುಕಿಗಾಗಿ ಸಣ್ಣಪುಟ್ಟ ಕೆಲಸದಲ್ಲಿ ತೊಡಗಿದವರಾಗಿದ್ದಾರೆ.

  • Share this:

    ವಿಜಯಪುರ: ಕಸ ಹಿಡಿದು ಗುಡಿಸುತ್ತಿರೋ ಯುವಕರು, ಪ್ಲಾಸ್ಟಿಕ್, ಗುಟ್ಕಾ, ಪಾನ್ ಉಗುಳಿದ ಕಲೆ ಹೀಗೆ ಏನೇ ಇರ್ಲಿ ಕ್ಲೀನ್ ಕ್ಲೀನ್ ಕ್ಲೀನ್. ಇವರು ಬಂದ್ರ ಅಂದ್ರೆ, ಅಲ್ಲಿ ಕೊಳೆಯ ಮಾತೇ ಇಲ್ಲ! ಅರೇ! ಯಾರಿವರು ಅಂದ್ರಾ? ಇವ್ರೇ ನೋಡಿ ಗಾನಯೋಗಿಯ ಕರ್ಮಯೋಗಿಗಳು. ಹೌದು, ನೀವು ನೋಡ್ತಿರುವ ಆಕರ್ಷಕ ಗೋಡೆ ಮೊದಲು ಈ ರೀತಿ ಇರ್ಲೇ ಇಲ್ಲ. ಇದನ್ನ ನೋಡಿದ್ರೆ ಎಂತವರಿಗೂ ವಾಕರಿಕೆ ಬರುತ್ತಿತ್ತು. ಆದರೆ, ಹೊಸ ಚಿಂತನೆಯ ಯುವಕರು ಅದೆಲ್ಲಕ್ಕೂ ಮುಕ್ತಿ ನೀಡಲು (Positive Story) ಪಣ ತೊಟ್ಟು ವಿಜಯಪುರ ನಗರವನ್ನು (Vijayapura News) ಅಂದವನ್ನಾಗಿಸಿದೆ.


    5 ವರ್ಷಗಳ ಹಿಂದೆ ಹುಟ್ಟಿದ್ದ ಗಾನಯೋಗಿ ಸಂಘ
    ವಿಜಯಪುರ ನಗರದಲ್ಲಿ ಕಳೆದ 5 ವರ್ಷಗಳ ಹಿಂದೆ ಹುಟ್ಟಿಕೊಂಡ ಗಾನಯೋಗಿ ಸಂಘ ಸ್ವಚ್ಛತಾ ಅಭಿಯಾನಕ್ಕೆ ಈಗ ಹೆಸರುವಾಸಿ. ಯುವಕರ ಪರಿಶ್ರಮದಿಂದ ಕಸ, ಕಡ್ಡಿ, ಗುಟ್ಕಾ, ಪಾನ್ ತಿಂದು ಉಗುಳಿ ಕಲುಷಿತಗೊಂಡಿದ್ದ ನಗರದ ಪ್ರಮುಖ ಸ್ಥಳಗಳಲ್ಲಿ ಈಗ ಸ್ಚಚ್ಛತೆಯ ಛಾಯೆ! ತಾವೇ ಖುದ್ದಾಗಿ ತೆರಳಿ ಕೊಳಕು ಗೋಡೆ, ಕಟ್ಟಡಗಳನ್ನ ಸ್ವಚ್ಛಗೊಳಿಸಿ ಅದಕ್ಕೊಂದು ಹೊಸ ರೂಪ ನೀಡಿದ್ದಾರೆ. ಬಣ್ಣ ಕಳೆದುಕೊಂಡಿದ್ದ ಸರಕಾರಿ ಶಾಲೆಗಳ ಕಟ್ಟಡಕ್ಕೂ ಹೊಸ ಲುಕ್ ನೀಡಿದ್ದಾರೆ.


    ಇದನ್ನೂ ಓದಿ: Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!


    5 ಲಕ್ಷದವರೆಗೆ ಸ್ವಂತ ಹಣ ಖರ್ಚು
    ಗಾನಯೋಗಿ ಸಂಘದಲ್ಲಿ ಗಾಯಕ, ವರ್ಣಚಿತ್ರ ಕಲಾವಿದ, ರಂಗಕರ್ಮಿ, ಬಟ್ಟೆ ವ್ಯಾಪಾರಿ, ಹೋಟೆಲ್ ಮಾಲೀಕ ಹೀಗೆ ಬದುಕಿಗಾಗಿ ಸಣ್ಣಪುಟ್ಟ ಕೆಲಸದಲ್ಲಿ ತೊಡಗಿದವರಾಗಿದ್ದಾರೆ. ಪ್ರತಿ ರವಿವಾರದಂದು ಎಲ್ಲರೂ ಒಂದೆಡೆ ಸೇರಿ ಸ್ವಚ್ಚತಾ ಕಾರ್ಯಕ್ಕೆ ಅಣಿಯಾಗ್ತಾರೆ. ವರ್ಷಂಪ್ರತಿ ಸುಮಾರು 5 ಲಕ್ಷದವರೆಗೆ ಸ್ವಂತ ಹಣ ಖರ್ಚುಮಾಡಿ ನಗರದ ಸ್ವಚ್ಚತೆ ಕಾಪಾಡ್ತಿದ್ದಾರೆ.


    ಇದನ್ನೂ ಓದಿ: Vijayapura: ಸಹಜ ಹೆರಿಗೆಗೆ ಫೇಮಸ್ ಈ ಸರ್ಕಾರಿ ಆಸ್ಪತ್ರೆ! ಗರ್ಭಿಣಿಯರು ಎಲ್ಲೆಲ್ಲಿಂದ್ಲೋ ಹುಡುಕಿ ಬರ್ತಾರೆ


    ಸರ್ಕಾರಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮಾಡಬೇಕಿರುವ ಈ ಸ್ವಚ್ಚತೆ ಕೆಲಸವನ್ನ ಈ ಯುವಕರು ಮಾಡುತ್ತಾ ಬರ್ತಿರೋದು. ಇವರು ಮಾಡಿದ ಕೆಲಸ ಇದುವರೆಗೆ ಅಧಿಕಾರಿಗಳ ಗಮನಕ್ಕೆ ಬರದಿರುವುದು ವಿಪರ್ಯಾಸದ ಸಂಗತಿ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಈ ಗಾನಯೋಗಿ ಸಂಘಕ್ಕೆ ಬೆನ್ನೆಲುಬಾಗಿ ನಿಲ್ತಾರಾ ಎಂದು ಕಾದುನೋಡಬೇಕಿದೆ..


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: