Vijayapura: ಫ್ರೆಂಡ್ಸ್ ಅಂದ್ರೆ ಮೋಜು ಮಸ್ತಿಯಷ್ಟೇ ಅಲ್ಲ! ಈ ಗೆಳೆಯರು ಏನ್ಮಾಡ್ತಾರೆ ನೋಡಿ

ವಿಜಯಪುರದಲ್ಲಿ ಸಿದ್ದೇಶ್ವರ ಕ್ಷೇತ್ರದಲ್ಲಿ ಗೆಳೆಯರ ಬಳಗವೊಂದು ಪ್ರತೀ ಸೋಮವಾರ ಪ್ರಸಾದ ವಿತರಿಸುತ್ತಿದೆ. ಈ ಸೇವೆಗೆ ಇದೀಗ 350ನೇ ವಾರ ಸಂದಿವೆ.

ವಿಡಿಯೋ ನೋಡಿ

"ವಿಡಿಯೋ ನೋಡಿ"

  • Share this:
    ವಿಜಯಪುರ: ಅತ್ತ ಆರಾಧ್ಯ ದೈವ ಸಿದ್ದೇಶ್ವರನಿಗೆ ಪೂಜೆ ಸಲ್ಲಿಕೆ ಆಗ್ತಿದ್ರೆ, ಇತ್ತ ತಂಡವೊಂದು ಪ್ರಸಾದ ವಿತರಿಸುತ್ತೆ. ಬರೋ ನೂರಾರು ಭಕ್ತರಿಗೂ (Temple Devotees) ಹಣ್ಣು ಹಂಪಲು ನೀಡಿ ಸತ್ಕರಿಸುತ್ತವೆ. ಹೀಗೆ ದೇವ ಸನ್ನಿಧಿಗೆ ಬಂದವರ ಸೇವೆಯಲ್ಲಿ ಈ ತಂಡವು ಜನಾರ್ಧನನ್ನು (Social Service) ಕಾಣುತ್ತದೆ. ಬಾಳೆ ಹಣ್ಣು, ಸೇಬು ನೀಡಿ ಬರೋ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡೋ ವಿಜಯಪುರ ಜಿಲ್ಲೆಯ (Vijayapura) ಈ ಗೆಳೆಯರ ಬಳಗದ ನಿಸ್ವಾರ್ಥ ಸೇವೆಗೆ 350 ವಾರಗಳು ಸಂದಿವೆ.

    ಗೆಳೆಯರ ಬಳಗದ ಸೇವೆ
    ಪ್ರತೀ ಸೋಮವಾರ ಅತ್ತ ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರನಿಗೆ ಪೂಜೆ ಆಗ್ತಿದ್ರೆ, ಇತ್ತ ಗೆಳೆಯರ ಬಳಗವೊಂದು ರಾಶಿ ಹಣ್ಣುಗಳನ್ನು ತಂದು ಪ್ರಸಾದದ ರೂಪದಲ್ಲಿ ವಿತರಿಸಲು ಸಿದ್ಧವಾಗುತ್ತವೆ. ಈ ಮೂಲಕ ಗೆಳೆಯರ ಬಳಗ ಅಂದ್ರೆ ಬರೇ ಮೋಜು ಮಸ್ತಿ ಮಾತ್ರವಲ್ಲ, ಧಾರ್ಮಿಕ ಸೇವೆಯಲ್ಲೂ ತೊಡಗಬಹುದು ಎಂದು ಈ ಬಳಗ ತೋರಿಸಿಕೊಟ್ಟಿದೆ.

    ಇದನ್ನೂ ಓದಿ: Drone In Agriculture: ಕೃಷಿಯಲ್ಲಿ ಡ್ರೋನ್ ಬಳಕೆ ಹೇಗೆ? ಈ ರೈತರನ್ನು ನೋಡಿ!

    ಭಕ್ತರಿಗಾಗಿಯೇ ಪ್ರಸಾದ ವಿತರಣೆ
    ಆರಂಭದಲ್ಲಿ ವಿಜಯಪುರ ನಗರದ ಉದ್ಯಮಿ ಪ್ರೇಮಾನಂದ ಹತ್ತಿ ಎನ್ನುವವರು 2018 ರಲ್ಲಿ ಸಿದ್ದೇಶ್ವರ ದೇವಸ್ಥಾನದಲ್ಲಿ ಬಾಳೆಹಣ್ಣು, ಸೇಬು ಹಣ್ಣುಗಳನ್ನು ವಿತರಿಸುತ್ತಿದ್ದರು. ನಂತರ ಈ ಸೇವೆಯಲ್ಲಿ ಒಂದಿಷ್ಟು ಗೆಳೆಯರೂ ಸೇರಿಕೊಂಡಿದ್ದು ವಿಶಿಷ್ಟ ಸೇವೆ ಮೂಲಕ ದೇವರ ಪ್ರೀತಿಗೂ ಪಾತ್ರರಾಗುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಾತ್ರವಲ್ಲದೇ ಭಕ್ತರೂ ಈ ಗೆಳೆಯರ ಬಳಗದ ಕೈಯ್ಯಿಂದ ಪ್ರಸಾದ ಪಡೆಯದೇ ಬರಿಗೈಯ್ಯಲ್ಲಿ ಹೋಗಲಾರರು.

    ಇದನ್ನೂ ಓದಿ: Positive Story: ವಿಧವೆಯರೇ ನಡೆಸೋ ಹೊಟೇಲ್! ಇಲ್ಲಿದೆ ನೋಡಿ

    ಜನಪರ ಸೇವೆಯೇ ಇವರ ಧ್ಯೇಯ
    ಹೀಗೆ ಪ್ರತೀ ಸೋಮವಾರ ನೀಡುವ ಪ್ರಸಾದ ವಿತರಣಾ ಕಾರ್ಯಕ್ರಮಕ್ಕೆ 350ನೇ ಸೋಮವಾರ ಸಂದಿವೆ. ಇದರ ಪ್ರಯುಕ್ತ ಅಂಧ ಮಕ್ಕಳಿಗೆ ಹೊದಿಕೆಗಳನ್ನು ನೀಡಿ ವಿಶಿಷ್ಟವಾಗಿ ಆಚರಿಸಿಕೊಂಡಿವೆ. ಇದು ಮಾತ್ರವಲ್ಲದೇ ಇಂತಹ ನೂರಾರು ಜನಪರ ಕಾರ್ಯಗಳನ್ನೂ ಈ ಗೆಳೆಯರ ಬಳಗ ಹಮ್ಮಿಕೊಳ್ಳುತ್ತಾ ಬಂದಿವೆ. ಹೀಗೆಯೆ ಇವರ ಸೇವೆ ಇನ್ನಷ್ಟು ಮುಂದುವರೆಯಲಿ ಅನ್ನೋದೆ ನಮ್ಮ ಆಶಯ ಕೂಡಾ.

    ವರದಿ: ಪ್ರಶಾಂತ ಹೂಗಾರ್, ವಿಜಯಪುರ
    Published by:ಗುರುಗಣೇಶ ಡಬ್ಗುಳಿ
    First published: