Drone In Agriculture: ಕೃಷಿಯಲ್ಲಿ ಡ್ರೋನ್ ಬಳಕೆ ಹೇಗೆ? ಈ ರೈತರನ್ನು ನೋಡಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕ್ರಿಮಿನಾಶಕ ಸಿಂಪಡಣೆ ಅನ್ನೋದು ರೈತರ ಪಾಲಿಗೆ ಸವಾಲಿನ ವಿಚಾರ. ದಿನವಿಡೀ ಬೆನ್ನ ಮೇಲೆ ಪಂಪ್ ಹೊತ್ತುಕೊಂಡು ಕ್ರಿಮಿನಾಶಕ ಸಿಂಪಡಿಸಬೇಕಾಗುತ್ತದೆ. ಆದರೆ, ಇಲ್ಲೊಬ್ಬ ಇದೆಲ್ಲಕ್ಕೂ ಸುಲಭ ಪರಿಹಾರ ಕಂಡುಕೊಂಡಿದ್ದಾನೆ.

  • Share this:
top videos

    ವಿಜಯಪುರ: ರೈತರಿಗೆ ಪಂಪ್ ಮೂಲಕ ಒಂದು ಎಕರೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಒಂದು ದಿನ ಬೇಕು. ಆದರೆ ಡ್ರೋನ್ ಮೂಲಕ ಸಿಂಪಡಣೆ ಮಾಡಿದ್ರೆ ಕೇವಲ 6 ನಿಮಿಷ ಸಾಕಾಗುತ್ತದೆ. ಡ್ರೋನ್ ಮೂಲಕ ಹಣವೂ ಉಳಿಯತ್ತದೆ, ಜೊತೆಗೆ ಸಮಯವೂ ಉಳಿಯತ್ತದೆ. ಹೀಗಾಗಿ ಜಿಲ್ಲೆಯ ಜನರು  ಡ್ರೋನ್ ಮೊರೆ (Drone Usage In Agriculture) ಹೋಗಿದ್ದಾರೆಸದ್ಯ ಜಿಲ್ಲೆಯಲ್ಲಿ ಔಷಧಿ ಸಿಂಪಡಣೆ ಮಾಡಲು ಕೂಲಿ ಕಾರ್ಮಿಕರ ಕೊರತೆಯಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯ (Vijayapura) ನಿಡಗುಂದಿಯ ರೈತ ಆಂಜನೇಯಲು ರೆಡ್ಡಿ ಎಂಬ ರೈತ ತಮ್ಮ 25 ಎಕರೆ ಜಮೀನಿನಲ್ಲಿ ಬಿತ್ತಿದ ಬೆಳೆಗೆ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸಿ ತಂತ್ರಜ್ಞಾನದ ಕೃಷಿಗೆ (Technology In Agriculture) ಮುಂದಾಗಿದ್ದಾರೆ. ಈ ಡ್ರೋನ್​ಗೆ ಆಂಜನೇಯಲು ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ.


    ಬಾಡಿಗೆಗೂ ಲಭ್ಯ!
    ಮಾತ್ರವಲ್ಲದೇ, ಅವಶ್ಯಕತೆ ಇರುವ ರೈತರಿಗೆ ಎಕರೆಗೆ 500 ರೂಪಾಯಿ ಪಡೆದು ಅವರ ಜಮೀನಿಗೆ ತೆರಳಿ ಇವರೇ ಕ್ರಿಮಿನಾಶಕ ಔಷಧ ಸಿಂಪಡಣೆ ಮಾಡುತ್ತಾರೆ. ಡ್ರೋನ್ಏಳು ನಿಮಿಷಕ್ಕೆ ಒಂದು ಎಕರೆಗೆ ಕ್ರಿಮಿನಾಶಕ ಸಿಂಪಡಿಸುತ್ತದೆ.


    ಲಾಭದಾಯಕ ಡ್ರೋನ್ ಬಳಕೆ
    ಆಂಜನೇಯಲು ಅವರು ತಮ್ಮ ಜಮೀನಿನಲ್ಲಿ ಬೆಳೆದ, ಬಾಳೆ, ಕಬ್ಬು, ಹೂವು, ತರಕಾರಿ ಬೆಳೆಗಳಿಗೆ ಡ್ರೋನ್ಮುಖಾಂತರವೇ ಕ್ರಿಮಿನಾಶಕ ಸಿಂಪಡಿಸಿದ್ದಾರೆ. ಕ್ರಿಮಿನಾಶಕ ಸಿಂಪಡಣೆ ಮೂಲಕ ಸಮಯ ಉಳಿತಾಯ ಅಷ್ಟೇ ಅಲ್ಲ, ಆಳುಗಳಿಗೆ ಕೊಡಬೇಕಾದ ಹೆಚ್ಚುವರಿ ಹಣವೂ ಸಹ ರೈತನಿಗೆ ಉಳಿತಾಯವಾಗುತ್ತೆ.


    ಇದನ್ನೂ ಓದಿ: Positive Story: ವಿಧವೆಯರೇ ನಡೆಸೋ ಹೊಟೇಲ್! ಇಲ್ಲಿದೆ ನೋಡಿ

    ಇದರಿಂದ ಹಲವು ರೈತರು ತಂತ್ರಜ್ಞಾನದ ಮೊರೆ ಹೋಗಿದ್ದು, ಮುಂದಿನ ದಿನಗಳಲ್ಲಿ ಡ್ರೋನ್ ಮೂಲಕವೇ ಕ್ರಿಮಿನಾಶಕ ಸಿಂಪಡಣೆ ಮಾಡುವ ಉತ್ಸಾಹ ಹೊಂದಿದ್ದಾರೆ ಇಲ್ಲಿನ ರೈತರು.


    ಇದನ್ನೂ ಓದಿ: Vijayapura: ಬಟ್ಟೆ ಅಂಗಡಿಲಿ ಸಂಸ್ಕೃತ! ಮುಸ್ಲಿಂ ನೌಕರರ ಸಂಸ್ಕೃತ ಕೇಳೋಕೆ ಹಿತ

    ಡ್ರೋನ್ ಬಾಡಿಗೆಗೆ ಯಾರನ್ನು ಸಂಪರ್ಕಿಸಬೇಕು?
    ಹೆಚ್ಚು ಜಮೀನು ಹೊಂದಿದ ರೈತರು ಡ್ರೋನನ್ನು ಬಾಡಿಗೆಗೆ ಪಡೆಯಬಹುದು. ಸಾಕಷ್ಟು ಜಮೀನು ಇದ್ದ ರೈತರು ಏಕಕಾಲಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಸಾಧ್ಯವಿಲ್ಲ. ಅದು ಡ್ರೋನ್ ನಿಂದ ಮಾತ್ರ ಸಾಧ್ಯ. ಡ್ರೋನ್ ಮಾಲೀಕ ಆಂಜನೇಯಲು ಪ್ರತಿ ಎಕರೆಗೆ ₹500 ಪಡೆದು ಬಾಡಿಗೆಗೆ ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಆಂಜನೇಯಲು ರೆಡ್ಡಿ ಅವರ ಸಂಪರ್ಕ ಸಂಖ್ಯೆ 9611148409 ಯನ್ನು ಸಂಪರ್ಕಿಸಬಹುದಾಗಿದೆ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    First published: