• Home
  • »
  • News
  • »
  • vijayapura
  • »
  • Best Waterfalls Uttara Karnataka: ಬಾಗಲಕೋಟೆಯ ಅದ್ಭುತ ಜಲಪಾತ! ಪ್ರಕೃತಿ ಸೌಂದರ್ಯದ ವೈಭವ

Best Waterfalls Uttara Karnataka: ಬಾಗಲಕೋಟೆಯ ಅದ್ಭುತ ಜಲಪಾತ! ಪ್ರಕೃತಿ ಸೌಂದರ್ಯದ ವೈಭವ

ಈ ಅದ್ಭುತ ಜಲಪಾತದ ವಿಡಿಯೋ ನೋಡಿ

"ಈ ಅದ್ಭುತ ಜಲಪಾತದ ವಿಡಿಯೋ ನೋಡಿ"

ಅದ್ಭುತ ಅನುಭವದೊಂದಿಗೆ ಸಂಭ್ರಮಿಸುತ್ತಾ, ಖುಷಿ ಪಡುತ್ತಿದ್ದಾರೆ. ಭೋರ್ಗರೆದು ಹರಿದು ಹೋಗುವ ನೀರಿನ ತಳದಲ್ಲಿ ಮನಸೋ ಇಚ್ಛೆ ಕುಣಿದು ಕುಪ್ಪಳಿಸುತ್ತಾರೆ.

  • News18 Kannada
  • Last Updated :
  • Bagalkot, India
  • Share this:

    ಬಾಗಲಕೋಟೆ: ಬಂಡೆಕಲ್ಲುಗಳ ನಡುವೆ ಭೋರ್ಗರೆಯುತ್ತಿರುವ ಜಲಧಾರೆ. ನೀರಲ್ಲಿ ಆಟವಾಡುತ್ತಾ ಖುಷಿ ಪಡುತ್ತಿರೋ ಪ್ರವಾಸಿಗರು. ಹೀಗೆ ಉತ್ತರ ಕರ್ನಾಟಕದ ಹಲವು ಜಲಪಾತಗಳು (Waterfalls In Uttara Karnataka)  ಈಗ ಮೈದುಂಬಿ ಹರಿಯುತ್ತಿದ್ರೆ, ಜನರೆಲ್ಲ ಮೈತುಂಬಾ ಕಣ್ಣಾಗಿಸಿ ಖುಷಿಪಡ್ತಿದ್ದಾರೆ. ಜಲಪಾತದ ಜಲಧಾರೆಗೆ ಮೈಯೊಡ್ಡಿ ಸಂಭ್ರಮಿಸ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗ್ತಿದ್ದಂತೆ ಬಾಗಲಕೋಟೆಯ (Bagalokot Waterfalls)) ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಅದ್ರಲ್ಲೂ ಬಾಗಲಕೋಟೆಯ ಶಿರೂರು ಪಟ್ಟಣದ ಭೈರಪ್ಪನ ಪಡಿ, ಬೆಣ್ಣೆ ದಿಡುಗು ಹಾಗೂ ಬಾದಾಮಿ ತಾಲೂಕಿನ ಹುಲಿಗೆಮ್ಮನ ಕೊಳ್ಳದ ಫಾಲ್ಸ್ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಬರುತ್ತಿದೆ.


    ಅದ್ಭುತ ಅನುಭವದೊಂದಿಗೆ ಸಂಭ್ರಮಿಸುತ್ತಾ, ಖುಷಿ ಪಡುತ್ತಿದ್ದಾರೆ. ಭೋರ್ಗರೆದು ಹರಿದು ಹೋಗುವ ನೀರಿನ ತಳದಲ್ಲಿ ಮನಸೋ ಇಚ್ಛೆ ಕುಣಿದು ಕುಪ್ಪಳಿಸುತ್ತಾರೆ.


    ಇದನ್ನೂ ಓದಿ: Tulja Bhavani Darshan: ತುಳಜಾ ಭವಾನಿಯೇ ಈ ಯಾತ್ರಿಗಳ ಜೊತೆ ನಡೆಯುತ್ತಿದ್ದಾಳೆ!


    ಈ ಫಾಲ್ಸ್​ಗಳ ವೈಭವ ಅದ್ಭುತ!
    ಭೈರಪ್ಪನ ಪಡಿ, ಬೆಣ್ಣೆ ದಿಡುಗು ಫಾಲ್ಸ್​ಗಳು ಶಾಂತವಾಗಿ ಹರಿಯುತ್ತಾ ತನ್ನ ಒಡಲವರೆಗೂ ಪ್ರವಾಸಿಗರನ್ನು ಆಕರ್ಷಿಸ್ತಿದೆ. ಆದರೆ ಇನ್ನೊಂದೆಡೆ ಹುಲಿಗೆಮ್ಮನ ಕೊಳ್ಳದ ಫಾಲ್ಸ್ ಮಾತ್ರ ಎತ್ತರದಿಂದ ಧುಮ್ಮಿಕ್ಕುತ್ತಾ ಭುಸುಗುಡುವಂತಿದೆ. ಅದ್ರ ಜೊತೆಯಲ್ಲೇ ಬಂಡೆ ಕಲ್ಲಿನ ಮೇಲೆ ಇರುವ ಹುಲಿಗೆಮ್ಮ ದೇವಿಯ ದೇವಾಲಯ ಹಾಗು ಚಾಲುಕ್ಯರ ಕಾಲದ ಚಿಕ್ಕ ಈಶ್ವರಲಿಂಗ ದೇವಾಲಯ ಆಗಮಿಸುವ ಪ್ರವಾಸಿಗರ ಭಕ್ತಿಯನ್ನೂ ಹೆಚ್ಚಿಸುತ್ತಿದೆ.


    ಇದನ್ನೂ ಓದಿ: Bengaluru To Vijayapura: ಬೆಂಗಳೂರಿನಿಂದ ವಿಜಯಪುರ ಇನ್ನಷ್ಟು ಹತ್ತಿರ!


    Siddana Kolla Bagalkot
    ಜಲಪಾತ ನೋಡಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಮಳೆಗಾಲದಲ್ಲಿ ಬಾಗಲಕೋಟೆಗೆ ಬನ್ನಿ!
    ಮಳೆಗಾಲದಲ್ಲಷ್ಟೇ ಮೈದಳೆಯುವ ಈ ಜಲಪಾತಗಳು ಪ್ರಕೃತಿಯ ಸೊಬಗನ್ನ ಹೆಚ್ಚಿಸುತ್ತಿದೆ. ಪ್ರವಾಸಿಗರಂತೂ ತಂಡೋಪತಂಡವಾಗಿ ಫಾಲ್ಸ್​ನತ್ತ ಮುಖ ಮಾಡ್ತಿದ್ದಾರೆ. ಶಾಂತವಾಗಿ ಹರಿಯುವ, ಧುಮ್ಮಿಕ್ಕುತ್ತಾ ಭೋರ್ಗರೆವ ಈ ಪ್ರಕೃತಿ ಸೌಂದರ್ಯದ ಜಲಪಾತಗಳನ್ನ ಕಣ್ತುಂಬಿಕೊಳ್ಳಬೇಕೆಂದರೆ ಮಳೆಗಾಲದಲ್ಲಿ ಬಾಗಲಕೋಟೆಗೆ ಹೋಗಲೇಬೇಕು.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: