ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಫೆಬ್ರವರಿ 2 ರಿಂದ 4ರವರೆಗೆ ಪಟ್ಟಣದಲ್ಲಿ ಅಂತರ್ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆಯನ್ನ ಶ್ರೀ ಬಸವೇಶ್ವರ ಜಾತ್ರಾ ಕಮಿಟಿ ಆಯೋಜಿಸಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಡಾ.ಎ. ಆರ್. ಬೆಳಗಲಿ ಅವರು ತಿಳಿಸಿದ್ದಾರೆ. ಈ ತೆರಬಂಡಿ ಉತ್ಸವದಲ್ಲಿ (Terabandi Utsav) ಭಾಗವಹಿಸಿ ಗೆದ್ದವರಿಗೆ ನಗದು ಬಹುಮಾನಗಳೂ ಇರಲಿವೆ. ಈ ವಿಶಿಷ್ಟ ಸ್ಪರ್ಧೆಯ ಕುರಿತು ಇಲ್ಲಿದೆ ಮಾಹಿತಿ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳ ನೂರಾರು ರೈತರು ತಮ್ಮ ಎತ್ತುಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ತೆರಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಎತ್ತುಗಳ ಮಾಲೀಕನಿಗೆ ಮೊದಲ ಬಹುಮಾನವಾಗಿ ಕಾರ್ ಕೊಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: Mantralaya: ಮಂತ್ರಾಲಯಕ್ಕೆ ಪಾದಯಾತ್ರೆ, ನೀವೂ ಪಾಲ್ಗೊಳ್ಳಲು ಇಲ್ಲಿದೆ ಅವಕಾಶ
ನಗದು ಬಹುಮಾನವೂ ಇರಲಿದೆ
ನಂತರದ 12 ಸ್ಥಾನಗಳನ್ನು ಪಡೆಯುವ ಎತ್ತುಗಳ ಮಾಲೀಕರಿಗೆ ತಲಾ ಒಂದೊಂದು ಬೈಕ್ ನೀಡಲಾಗುತ್ತದೆ. 14 ರಿಂದ 31 ಸ್ಥಾನ ಗಳಿಸಿದ ಎತ್ತುಗಳ ಮಾಲೀಕರಿಗೆ ನಗದು ಬಹುಮಾನ ನೀಡಲಾಗುತ್ತದೆ.
ಇದನ್ನೂ ಓದಿ: Jobs In Kuwait: ಕುವೈತ್ನಲ್ಲಿ ಭಾರೀ ಉದ್ಯೋಗಾವಕಾಶ, ಇಲ್ಲಿದೆ ಸಂಪೂರ್ಣ ವಿವರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಈ ಸ್ಪರ್ಧೆಯನ್ನ ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತಿದ್ದು, ಸಕಲ ವ್ಯವಸ್ಥೆ ಮಾಡಲಾಗುವುದು. ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ಹೆಚ್ಚಿನ ಮಾಹಿತಿಗೆ ಕೃಷ್ಣಗೌಡ ಪಾಟೀಲ (9901343522), ನಾರಾಯಣಗೌಡ ಪಾಟೀಲ (9731097077) ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ