Vijayapura Shiva Temple: ತಲೆಯ ಮೇಲೆ ಶ್ರೀ ಚಕ್ರ ಹೊಂದಿರುವ ಅಪರೂಪದ ಶಿವಲಿಂಗ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ದೇವರಿಗೆ ಬಂದು ಭಕ್ತಿಯಿಂದ ನಡೆದುಕೊಂಡರೆ ಇಷ್ಟಾರ್ಥಗಳೆಲ್ಲವೂ ಈಡೇರುತ್ತವೆ ಅನ್ನೋ ಮಾತಿದೆ.

  • Share this:

ವಿಜಯಪುರ: ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯ ನಿರ್ಮಾಣ. ಹಳೆಯದಾದ್ರೂ ಆಕರ್ಷಕವಾದ ಶಿವಲಿಂಗ. ಲಿಂಗದ ಶಿರದ ಮೇಲೆ ಶ್ರೀ ಚಕ್ರದ ಚಿತ್ತಾರ. ರಾಜ್ಯದ ಅಪರೂಪದ ದೇವಸ್ಥಾನಗಳಲ್ಲಿ ಒಂದು, ಶಂಕರಾಚಾರ್ಯರು (Shankaracharya) ಪ್ರತಿಷ್ಠಾಪಿಸಿದ ಈ ದೇಗುಲವೇ ವಿಜಯಪುರ ನಗರದಲ್ಲಿರುವ (Temples In Vijayapura) ಶ್ರೀ ಸುಂದರೇಶ್ವರ ಜಾತ್ರೆ.


ಹೌದು, ವಿಶಿಷ್ಟವಾದ ಕೆತ್ತನೆ ಹಾಗೂ ಗಾತ್ರದಿಂದ ಸುಂದರೇಶ್ವರ ದೇಗುಲದಲ್ಲಿರುವ ಈ ಶಿವಲಿಂಗವು ಭಕ್ತರ ಗಮನ ಸೆಳೆಯುತ್ತದೆ. ಶಿವಲಿಂಗದ ನೆತ್ತಿಯ ಮೇಲೆ ಇರುವ ಶ್ರೀ ಚಕ್ರ ಶಿವಶಕ್ತಿಯರ ಸಮ್ಮಿಲನದ ಕುರುಹು ಎಂದೇ ನಂಬಲಾಗಿದೆ. ಜೊತೆಗೆ ಸುಂದರವಾದ ಶ್ರೀ ಚಕ್ರ ಹೊಂದಿರುವುದರಿಂದ ಈ ದೇಗುಲಕ್ಕೆ ಸುಂದರೇಶ್ವರ ದೇವಸ್ಥಾನ ಎಂದು ಹೆಸರು ಬಂತು ಎನ್ನಲಾಗುತ್ತದೆ.




ಶಂಕರಾಚಾರ್ಯರಿಂದ ಪ್ರತಿಷ್ಠಾಪನೆ
ವಿಜಯಪುರಕ್ಕೆ ಆಗಮಿಸಿದ ಸಮಯದಲ್ಲಿ ಶಂಕರಾಚಾರ್ಯರು ಈ ಲಿಂಗವನ್ನು ಪ್ರತಿಷ್ಠಾಪಿಸಿ, ತಲೆಯ ಮೇಲೆ ಶಿವ ಪಾರ್ವತಿಯರ ಅರ್ಧನಾರೀಶ್ವರ ಪ್ರತೀಕವಾಗಿ ಶ್ರೀಚಕ್ರವನ್ನು ಲಿಂಗದ ಶಿರದ ಮೇಲೆ ಕೆತ್ತಲಾಗಿದೆ ಎನ್ನಲಾಗುತ್ತೆ.


ಇದನ್ನೂ ಓದಿ: Vijayapura Cashew Farming: ಕೃಷ್ಣಾ ನದಿ ತೀರದ ರೈತರ ಖುಷಿ ಹೆಚ್ಚಿಸಿದ ಗೋಡಂಬಿ!


ದಾರಿದ್ರ್ಯ ನಿವಾರಣೆ
ಸುಂದರೇಶ್ವರ ದೇವರು ವಿಜಯಪುರದ ಅತ್ಯಂತ ಜಾಗೃತ ದೇವರೆಂದು ಪ್ರಚಲಿತವಾಗಿದೆ. ಶಿವಲಿಂಗದ ಮೇಲೆ ಶ್ರೀಚಕ್ರ ಇರುವ ಕಾರಣ ಪರಶಿವರ ಜೊತೆ ಜೊತೆಗೆ ಶಕ್ತಿ ದೇವತೆಗಳು ಸೇರಿ ದುಷ್ಟಶಕ್ತಿಗಳಿಗೆ ಪರಿಹಾರ ಮತ್ತು ದಾರಿದ್ರ್ಯವನ್ನು ನಿವಾರಣೆ ಮಾಡುತ್ತಿದ್ದಾರೆ ಎಂಬುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.




ಹಲವು ಹೆಸರು
ಹೀಗೆ ಆದಿಗುರು ಶಂಕರಾಚಾರ್ಯರು ಪ್ರತಿಷ್ಠಾಪಿಸಲ್ಪಟ್ಟ ಸುಂದರೇಶ್ವರ ಸ್ವಾಮಿಗೆ ಮಹಾದೇವ, ಸುಂದರೇಶ್ವರ, ಜ್ಯೋತಿರ್ಲಿಂಗ, ಜಾಗೃತ ದೇವರು ಎಂಬ ಹೆಸರುಗಳೊಂದಿಗೆ ನಾಮಾಂಕಿತ ಇದೆ.


ಇದನ್ನೂ ಓದಿ: Vijayapura Travel Plan: ಲಕ್ಷ ಲಕ್ಷ ಬೆಲೆಯ ಮೀನುಗಳನ್ನ ನೋಡ್ಬೇಕಿದ್ರೆ ಇಲ್ಲಿಗೆ ಬನ್ನಿ!

top videos


    ಈ ದೇವರಿಗೆ ಬಂದು ಭಕ್ತಿಯಿಂದ ನಡೆದುಕೊಂಡರೆ ಇಷ್ಟಾರ್ಥಗಳೆಲ್ಲವೂ ಈಡೇರುತ್ತವೆ ಅನ್ನೋ ಮಾತಿದೆ. ವಿಭಿನ್ನ ವಾಸ್ತುಶಿಲ್ಪ ಹಾಗೂ ಶಿವಲಿಂಗದ ಪ್ರತಿಷ್ಠಾಪನೆಯಿಂದ ಈ ದೇಗುಲ ವಿಜಯಪುರ ಅಷ್ಟೇ ಅಲ್ದೇ ಸುತ್ತಮುತ್ತ ಜಿಲ್ಲೆಯಲ್ಲೂ ಸಾಕಷ್ಟು ಹೆಸರು ಪಡೆದಿದೆ.

    First published: