ವಿಜಯಪುರ: ರಾಜ್ಯದ ಎಲ್ಲೇ ಹೋದ್ರೂ ಈಗ ತಡೆದುಕೊಳ್ಳಲಾಗದಷ್ಟು ಸೆಕೆ. ಬಿಸಿಲ ತಾಪಮಾನಕ್ಕೆ ದೇಹಕ್ಕೆ ತಂಪು ನೀಡೋ ಆಹಾರಗಳ ಮೊರೆ ಹೋಗುತ್ತಿದ್ದಾರೆ ಜನರು. ವಿಜಯಪುರದಲ್ಲಂತೂ ಈಗ ಜೋಳದ ಅಂಬಲಿಯದ್ದೇ (Jolada Ambali) ಕಥೆ. ಆರೋಗ್ಯ ಕಾಪಾಡಿಕೊಳ್ಳಲು, ದೇಹಕ್ಕೆ ತಂಪೆರೆಯಲು ಗುಮ್ಮಟ ನಗರಿಯ (Vijayapura News) ಮಂದಿ ಜೋಳದ ಅಂಬಲಿ ಮೊರೆ ಹೋಗುತ್ತಿದ್ದಾರೆ. ಕುಟುಂಬ ಸಮೇತರಾಗಿ ಅಂಬಲಿ (Jolada Ambali Recipe) ತಯಾರಿಸಿ ಸೇವಿಸುತ್ತಾರೆ. ಅಂದಹಾಗೆ ಈ ಜೋಳದ ಅಂಬಲಿ ಮಾಡೋದು ಕೂಡಾ ಅಷ್ಟೇ ಈಸಿ.
ಏನೆಲ್ಲ ಬೇಕು ಸಾಮಗ್ರಿ?
ನಾಲಗೆಯ ರುಚಿ ಹೆಚ್ಚಿಸಬಲ್ಲ ಈ ಜೋಳದ ಅಂಬಲಿ ಮಾಡೋದು ನಿಜಕ್ಕೂ ಸುಲಭವೇ. ಅದಕ್ಕೆ ಬೇಕಾಗುವ ಸಾಮಗ್ರಿಗಳು ಯಾವುದೆಂದರೆ, ಬಿಳಿ ಜೋಳದ ಹಿಟ್ಟು 2 ಕಪ್, ಜೀರಿಗೆ 2 ಚಮಚ, ಎರಡು ಬೆಳ್ಳುಳ್ಳಿ, ಒಂದು ಸಣ್ಣ ಕಪ್ ಅಡುಗೆ ಎಣ್ಣೆ, 3 ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಮಜ್ಜಿಗೆ 3 ಗ್ಲಾಸ್, ಉಪ್ಪು 2 ಚಮಚ ರೆಡಿ ಇಟ್ಟುಕೊಳ್ಳಬೇಕು.
ಹೀಗೆ ತಯಾರಿಸಿ
ಮಾಡುವ ವಿಧಾನ ಹೇಗೆಂದರೆ, ಒಂದು ಕಪ್ನಲ್ಲಿ ಜೋಳದ ಹಿಟ್ಟನ್ನ ಹಾಕಿ ಅದಕ್ಕೆ ನೀರನ್ನ ಬೆರೆಸಬೇಕು. ಎರಡನ್ನೂ ಗಂಟಾಗದಂತೆ ಕಲಸಬೇಕು. ನಂತರ ಎರಡು ಸುಲಿದ ಬೆಳ್ಳುಳ್ಳಿ ಮತ್ತು ಮೂರು ಮೆಣಸಿನಕಾಯಿ, ಜೀರಿಗೆ ಈ ಮೂರನ್ನು ಬೇರೆ ಬೇರೆಯಾಗಿ ಕುಟ್ಟಿಕೊಳ್ಳಬೇಕು.
ಇದನ್ನೂ ಓದಿ: Vijayapura: ಮನೆ ಮನೆಗೆ ಭೇಟಿ ಕೊಡೋ ದೇವರು, ದುಷ್ಟಶಕ್ತಿಯಿದ್ರೆ ಆಗುತ್ತೆ ಹಾಜರ್!
ಒಲೆ ಅಥವಾ ಗ್ಯಾಸ್ ಮೇಲೆ ಒಂದು ಅಗಲವಾದ ಪಾತ್ರೆಯನ್ನ ಇಟ್ಟು ಒಂದು ಕಪ್ ಅಡುಗೆ ಎಣ್ಣೆ ಹಾಕಬೇಕು. ಎಣ್ಣೆ ಕಾದ ಬಳಿಕ ಮೊದಲು ಜೀರಿಗೆ ಹಾಕಬೇಕು, ನಂತರ ಬೆಳ್ಳುಳ್ಳಿ ಹಾಕಬೇಕು. ಕೊನೆಯಲ್ಲಿ ಜಜ್ಜಿ ಇಟ್ಟುಕೊಂಡ ಮೆಣಸಿನಕಾಯಿ ಹಾಕಿ ಎರಡು ನಿಮಿಷ ಚೆನ್ನಾಗಿ ಬೇಯಿಸಬೇಕು.
ಬಳಿಕ ನೀರಿನಲ್ಲಿ ಕಲಸಿಟ್ಟುಕೊಂಡ ಜೋಳದ ಹಿಟ್ಟನ್ನು ಹಾಕಬೇಕು. ಇದನ್ನ ಹಾಕಿದ ತಕ್ಷಣವೇ ರೆಡಿಯಾಗಿಟ್ಟುಕೊಂಡ ಮಜ್ಜಿಗೆಯನ್ನ ಬೆರೆಸಿ ಗಂಟಾಗದಂತೆ 3 ನಿಮಿಷ ಚನ್ನಾಗಿ ತಿರುಗಾಡಿಸಬೇಕು. ಇದಾದ ಬಳಿಕ ಕೊತ್ತಂಬರಿ ಸೊಪ್ಪು ಮಿಶ್ರಣ ಮಾಡಿದ್ರೆ ಸಿದ್ದವಾಗುತ್ತೆ ಜೋಳದ ಅಂಬಲಿ.
ಇದನ್ನೂ ಓದಿ: Business Idea: ವೀಳ್ಯದೆಲೆ ಬೆಳೆದು ವರ್ಷಕ್ಕೆ 15 ಲಕ್ಷ ಸಂಪಾದನೆ! ವಿಜಯಪುರದ ಈ ರೈತನ ಸಕ್ಸಸ್ ಕಥೆ ಕೇಳಿ
ದೇಹಕ್ಕೆ ತಂಪು
ಹೌದು, ಹೀಗೆ ರೆಡಿಯಾದ ಜೋಳದ ಅಂಬಲಿ ಸವಿಯೋದಕ್ಕೆ ಎಷ್ಟು ರುಚಿಯೋ, ಬೇಸಿಗೆಯಲ್ಲಿ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಇದೆಲ್ಲವನ್ನ ನ್ಯೂಸ್ 18 ಕನ್ನಡ ಡಿಜಿಟಲ್ ವೀಕ್ಷಕರಿಗಾಗಿ ನಮ್ಮ ವಿಜಯಪುರದ ಭಾಗ್ಯಾ ಹೂಗಾರ್ ಅವರು ತಯಾರಿಸಿ, ಹೇಗೆ ಮಾಡ್ಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಹಾಗಿದ್ರೆ ಇನ್ನೇಕೆ ತಡ.. ನೀವೂ ನಿಮ್ಮ ಮನೆಗಳಲ್ಲಿ ಜೋಳದ ಅಂಬಲಿ ಟ್ರೈ ಮಾಡಿ, ಟೇಸ್ಟ್ ಮಾಡಿ!
ವರದಿ: ಪ್ರಶಾಂತ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ