Vijayapura: ವಿಜಯಪುರದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏಪ್ರಿಲ್ 1 ರಿಂದ ಮೇ 1 ರವರೆಗೆ ಈ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಸದುಪಯೋಗವನ್ನ ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

  • News18 Kannada
  • 2-MIN READ
  • Last Updated :
  • Bijapur, India
  • Share this:

ವಿಜಯಪುರ: ಈಗಾಗಲೇ ಶಾಲಾ ಮಕ್ಕಳು ಪರೀಕ್ಷೆ ಮುಗಿಸಿ ಬೇಸಿಗೆ ರಜೆ ಕಳೆಯಲು ಕಾತುರರಾಗಿದ್ದಾರೆ. ಇಂತಹ ಮಕ್ಕಳಿಗಾಗಿ ಸುಕ್ಷೇತ್ರ ಕನ್ನೂರಿನಲ್ಲಿ ಶೈಕ್ಷಣಿಕ - ಆಧ್ಯಾತ್ಮಿಕ ಈ ವರ್ಷದ ಬೇಸಿಗೆ ಶಿಬಿರ (Summer Camp) ಆಯೋಜಿಸಲಾಗಿದೆ. ಮಕ್ಕಳನ್ನು ನೀತಿವಂತ, ಗುಣವಂತ, ವಿದ್ಯಾವಂತ, ಆರೋಗ್ಯವಂತರನ್ನಾಗಿ ಮಾಡುವ ಉದ್ದೇಶದೊಂದಿಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ


ಏಪ್ರಿಲ್ 1 ರಿಂದ ಮೇ 1 ರವರೆಗೆ ಈ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಸದುಪಯೋಗವನ್ನ ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.


ಶಿಬಿರದಲ್ಲಿ ಯಾರಿಗೆ ಅವಕಾಶ?
ಈ ಒಂದು ಬೇಸಿಗೆ ಶಿಬಿರದಲ್ಲಿ 5ರಿಂದ 10ನೇ ತರಗತಿಯ ಗ್ರಾಮೀಣ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದ್ದು ಎಂದು ತಿಳಿಸಿದ್ದಾರೆ.
ಶಿಬಿರದ ಸಮಯ ಹೀಗಿದೆ
ಪ್ರತಿದಿನ ಬೆಳಗ್ಗೆ 9-30ರಿಂದ ಆರಂಭವಾಗಿ ಸಂಜೆ 5-30ರವರೆಗೆ ಈ ಶಿಬಿರ ನಡೆಯಲಿದೆ. ನಿತ್ಯ ಆಯಾ ತರಗತಿ ಬೋಧನೆಯೊಂದಿಗೆ ಧ್ಯಾನ, ಪ್ರಾರ್ಥನೆ, ನಾಮಸ್ಮರಣಿ, ಅಭ್ಯಾಸದಲ್ಲಿ ಏಕಾಗ್ರತೆ, ನಮ್ಮ ಸಂಸ್ಕೃತಿ ಹಾಗೂ ಭವ್ಯ ಪರಂಪರೆಯನ್ನು ಪರಿಚಯಿಸುವ ವಿಡಿಯೋ ದೃಶ್ಯಾವಳಿಗಳು, ಆಟೋಟಗಳು, ವ್ಯಕ್ತಿತ್ವ ವಿಕಾಸದ ಬೋಧನೆ, ಬೋಧಿಸಿದ ಪಾಠದ ಮೇಲೆ ಪರೀಕ್ಷೆ, ವಿಜ್ಞಾನ ಹೀಗೆ ಸಾಕಷ್ಟು ವಿಷಗಳ ಕುರಿತು ಉಚಿತವಾಗಿ ಹೇಳಿಕೊಡಲಾಗುತ್ತದೆ.


ಇದನ್ನೂ ಓದಿ: Bagalkote: 24 ಗಂಟೆ ತೆರೆದೇ ಇರುತ್ತೆ ಈ ಗ್ರಾಮ ಪಂಚಾಯತ್‌!


ಹಾಗೂ ಅಗಸ್ಯ ಫೌಂಡೇಷನ್ ಸಹಕಾರದಿಂದ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಉಚಿತ ಬಸ್ ಸೇವೆಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಲಾಗಿದೆ.


ಇದನ್ನೂ ಓದಿ: Jobs In Bagalkote: ಬಾಗಲಕೋಟೆಯಲ್ಲಿ ಕೆಲಸ ಖಾಲಿ ಇದೆ, 21 ರಿಂದ 97 ಸಾವಿರದವರೆಗೆ ಸಂಬಳ


ಹೆಚ್ಚಿನ ಮಾಹಿತಿಗಾಗಿ ಶ್ರೀಕೃಷ್ಣ ಸಂಪಗಾಂವಕರ್ ಅವರ ದೂರವಾಣಿ ಸಂಖ್ಯೆ 98804 19364, ಷಣ್ಮು ರಾವ್‌ ಜಗತಾಪ್: 99641 39943  ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

top videos


    ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ, ವಿಜಯಪುರ

    First published: