• Home
  • »
  • News
  • »
  • vijayapura
  • »
  • Success Story: ಕ್ಯಾಪ್ಸಿಕಂ ಕೃಷಿಯಿಂದ ಲಕ್ಷ ಲಕ್ಷ ಲಾಭ! ಹೆಸರು, ಹಣ ಒಟ್ಟಿಗೇ ಬಂತು!

Success Story: ಕ್ಯಾಪ್ಸಿಕಂ ಕೃಷಿಯಿಂದ ಲಕ್ಷ ಲಕ್ಷ ಲಾಭ! ಹೆಸರು, ಹಣ ಒಟ್ಟಿಗೇ ಬಂತು!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಒಂದು ಎಕರೆಯಲ್ಲಿ ಬರೇ ಕ್ಯಾಪ್ಸಿಕಂ ಮಾತ್ರ ಬೆಳೆದಿರೋ ಇವರ ಯಶಸ್ಸು ಕಂಡು ವಿಜಯಪುರದ ರೈತರೆಲ್ಲ ಅಚ್ಚರಿಪಡ್ತಿದ್ದಾರೆ.

  • Share this:

    ವಿಜಯಪುರ: ಹಚ್ಚ ಹಸಿರ ಗದ್ದೆಯಲ್ಲಿ ನಳನಳಿಸುತ್ತಿರೋ ಕ್ಯಾಪ್ಸಿಕಂ. ಇಷ್ಟು ಅದ್ಭುತವಾಗಿ ಕ್ಯಾಪ್ಸಿಕಂ ಬೆಳೆಯುತ್ತಾ (Capsicum In Vijayapura) ಅಂತ ಅಂದ್ಕೊಳ್ಳೋ ಥರ ವಿಜಯಪುರದ ರೈತರೊಬ್ಬರು ಉತ್ತಮ ಫಸಲು ತೆಗೆದಿದ್ದಾರೆ. ಹೆಚ್ಚಾಗಿ ಕ್ಯಾಪ್ಸಿಕಂ ಬೆಳೆಯದ ವಿಜಯಪುರದಲ್ಲೂ ಕ್ಯಾಪ್ಸಿಕಂ ಬೆಳೆದು ಸಕ್ಸಸ್ ಕಂಡಿದ್ದಾರೆ ಈ ಕೃಷಿಕ. ವಿಜಯಪುರದ (Vijayapura) ಹುಣಶ್ಯಾಳ ಗ್ರಾಮದ ಶ್ರೀಶೈಲಗೌಡ ಪಾಟೀಲ್ ಈಗ ಜಿಲ್ಲೆಯ ಹೆಸರಾಂತ ಕ್ಯಾಪ್ಸಿಕಂ ಬೆಳೆಗಾರ. ಒಂದು ಎಕರೆಯಲ್ಲಿ ಬರೇ ಕ್ಯಾಪ್ಸಿಕಂ ಮಾತ್ರ ಬೆಳೆದಿರೋ ಇವರ ಯಶಸ್ಸು ಕಂಡು ವಿಜಯಪುರದ ರೈತರೆಲ್ಲ ಅಚ್ಚರಿಪಡ್ತಿದ್ದಾರೆ. ಇವರು ಹೀಗೆ ಕ್ಯಾಪ್ಸಿಕಂ ಬೆಳೆಯೋದಕ್ಕೂ (Capsicum Farming) ಒಂದು ಕಾರಣವಿದೆ.


    ಆರಂಭದಲ್ಲಿ ಮಾಡಿದ್ದ ಎಡವಟ್ಟು ಇವರಿಗೆ ಕೃಷಿ ಪಾಠ ಕಲಿಸಿತ್ತು. ಮುಂದೆ ತೋಟಗಾರಿಕೆ ಇಲಾಖೆ ಸಹಾಯ ಪಡೆದು ಕ್ಯಾಪ್ಸಿಕಂ ಬೆಳೆಗೆ ಕೈ ಹಾಕಿದ್ದರು. ಈಗ ಶ್ರೀಶೈಲ ಅವರ ಜಮೀನಿನ ಒಂದು ಬದಿಯಲ್ಲಿ ಕ್ಯಾಪ್ಸಿಕಂನದ್ದೇ ಹವಾ ಅನ್ನೋ ಹಾಗಾಗಿದೆ.


    ಇದನ್ನೂ ಓದಿ: Vijayapura: ಹುಲ್ಲುಲಗೋ..ಸಲಾಂಭ್ರಿಗೋ! ಉತ್ತರ ಕರ್ನಾಟಕದಲ್ಲಿ ಚರಗ ಹಬ್ಬದ ಸ್ಪೆಷಲ್ ಇದು


    ಕೇವಲ ಒಂದೇ ಮಾದರಿಯ ಕೃಷಿಯನ್ನ ನೆಚ್ಚಿಕೊಳ್ಳದೇ ವಿಭಿನ್ನ ಮಾದರಿಯ ಕೃಷಿ ಚಟುವಟಿಕೆಗೆ ಮುಂದಾಗಿರುವುದೇ ಇವರ ಕಠಿಣ ಹಾದಿ ಹೂವಿನಂತಾಗೋಕೆ ಕಾರಣ. 6 ಎಕರೆ ಜಮೀನಲ್ಲಿ ಒಂದು ಎಕ್ರೆಯಲ್ಲಷ್ಟೇ ಕ್ಯಾಪ್ಸಿಕಂಗೆ ಮೀಸಲಿರಿಸಿದ್ರೆ ಮಿಕ್ಕುಳಿದಂತೆ ಪಪ್ಪಾಯಿ, ಪೇರಳೆ, ಮೆಕ್ಕೆ ಜೋಳಗಳನ್ನೂ ಬೆಳೆದಿದ್ದಾರೆ. ಹೀಗೆ ವಿವಿಧ ಬಗೆಯ ಕೃಷಿ ಚಟುವಟಿಕೆ ಮೂಲಕ ಶ್ರೀಶೈಲ ಗೌಡರು ಲಕ್ಷ ಲಕ್ಷ ಸಂಪಾದನೆ ನಡೆಸುತ್ತಿದ್ದಾರೆ.


    ಇದನ್ನೂ ಓದಿ: Government Hospital: ಕಣ್ಣರಳಿಸಿ ನೋಡೋಥರ ಇದೆ ಈ ಸರ್ಕಾರಿ ಆಸ್ಪತ್ರೆ! ಖಾಸಗಿ ಹಾಸ್ಪಿಟಲ್ ಇಲ್ಲಿ ಲೆಕ್ಕಕ್ಕೇ ಇಲ್ಲ!


    ಬರಗಾಲ, ನೀರು- ವಿದ್ಯುತ್ ಸಮಸ್ಯೆ ನಡುವೆಯೂ ಶ್ರೀಶೈಲ ಗೌಡ ಪಾಟೀಲ್ ಅವ್ರು ಕ್ಯಾಪ್ಸಿಕಂ ಬೆಳೆದು ತೋರಿಸಿದ್ದಾರೆ. ಜೊತೆಗೆ ರೈತರು ಒಂದೇ ಬೆಳೆಗೆ ಸೀಮಿತವಾಗಬಾರದು ಅನ್ನೋದಕ್ಕೆ ಶ್ರೀಶೈಲಗೌಡರೇ ಮಾದರಿಯಾಗಿದ್ದಾರೆ.


    ವರದಿ: ಪ್ರಶಾಂತ್ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: