• Home
  • »
  • News
  • »
  • vijayapura
  • »
  • Startup Success Story: ವಿಜಯಪುರದಲ್ಲಿ ರೇಷ್ಮೆ ಕ್ರಾಂತಿ! ರಾಮನಗರಕ್ಕೆ ಸಖತ್ ಪೈಪೋಟಿ

Startup Success Story: ವಿಜಯಪುರದಲ್ಲಿ ರೇಷ್ಮೆ ಕ್ರಾಂತಿ! ರಾಮನಗರಕ್ಕೆ ಸಖತ್ ಪೈಪೋಟಿ

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವಿಜಯಪುರ ಅಷ್ಟೇ ಅಲ್ದೇ ನೆರೆಯ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ರೇಷ್ಮೆ ಬೆಳೆಗಾರರಿಗೂ ವರದಾನವಾಗಿದೆ ಈ ಸ್ಟಾರ್ಟಪ್!

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ರೇಷ್ಮೆ ಅಂದ್ರೇನೆ ನೆನಪಿಗೆ ಬರೋದು ರಾಮನಗರ. ಆದ್ರೆ ಇನ್ಮುಂದೆ ಅದರ ಜೊತೆಗೆ ವಿಜಯಪುರ (Vijayapura) ಹೆಸರು ಕೂಡಾ ನೆನಪಿಗೆ ಬರ್ಲೇಬೇಕು. ನಿಜ, ಅದು ಯಾಕಪ್ಪ ಅಂದ್ರೆ ಇಲ್ಲಿ ನೀವ್ ನೋಡ್ತಿರೋ ಈ ರೇಷ್ಮೆ ಘಟಕ! ಇದು ವಿಜಯಪುರ ನಾಲ್ವರು ಯುವಕರು ಸ್ಥಾಪಿಸಿದ ಸ್ಟಾರ್ಟಪ್. ಇದೇ ಕಂಪನಿ (Silk Startup Success Story) ವಿಜಯಪುರದಲ್ಲಿ ರೇಷ್ಮೆ ಬೆಳೆಗಾರರಲ್ಲಿ (Silk Farmers) ಕ್ರಾಂತಿಯನ್ನೇ ಹುಟ್ಟುಹಾಕ್ತಿದೆ!


    ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದಲ್ಲಿ ಪಿ.ಕೆ ಚಿಂಚಲಿ, ಸಿದ್ದಯ್ಯ ಮಠ, ಮಲ್ಲಿಕಾರ್ಜುನ ಬಿಜ್ಜರಗಿ ಹಾಗೂ ಸುರೇಶ ಪರಗೊಂಡ ಎಂಬ ನಾಲ್ವರು ಸ್ನೇಹಿತರ ರೇಷ್ಮೆ ಘಟಕ ಆರಂಭಿಸಿದ್ದಾರೆ. ಇದು ವಿಜಯಪುರ ಅಷ್ಟೇ ಅಲ್ದೇ ನೆರೆಯ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ರೇಷ್ಮೆ ಬೆಳೆಗಾರರಿಗೂ ವರದಾನವಾಗಿದೆ.


    ತಪ್ಪಿದ ರೈತರ ಬವಣೆ
    ಹಿಂದೆಲ್ಲ ರೇಷ್ಮೆ ಬೆಳೆಗಾರರು ಕಟಾವು ಮಾಡಿದ ಬಳಿಕ ರಾಮನಗರಕ್ಕೆ ಕೊಂಡೊಯ್ಯಬೇಕಿತ್ತು. ಆದ್ರೀಗ ವಿಜಯಪುರದಲ್ಲೇ ಈ ಘಟಕ ಆರಂಭವಾಗಿದ್ರಿಂದ ರೈತರ ಬವಣೆ ತಪ್ಪಿದೆ. ಜೊತೆಗೆ ರೈತರೂ ಆರಾಮವಾಗಿ ರೇಷ್ಮೆಯನ್ನು ವಿಜಯಪುರದ ಈ ಘಟಕಕ್ಕೆ ತಂದು ನೂಲು ಮಾಡಿಸಿಕೊಂಡು ಮಾರಾಟ ಮಾಡ್ತಿದ್ದಾರೆ.


    ಸೂಪರ್ ಐಡಿಯಾದಿಂದ ಸಿಕ್ತು ಸಕ್ಸಸ್!
    ಇಲ್ಲಿ ಪ್ರತಿನಿತ್ಯ 5 ರಿಂದ 6 ಕ್ವಿಂಟಾಲ್​ನಷ್ಟು ರೇಷ್ಮೆಗೂಡು ಖರೀದಿಸಿ 50 ರಿಂದ 60 ಕೆಜಿಯಷ್ಟು ರೇಷ್ಮೆಯನ್ನು ನೂಲು ನೇಯ್ದು ಮಾರಾಟ ಮಾಡಲಾಗ್ತಿದೆ. ಇಂತಹ ಸೂಪರ್ ಐಡಿಯಾ ಮಾಡಿರೋ ಈ ನಾಲ್ವರು ಉದ್ಯಮಿಗಳು ರೇಷ್ಮೆ ಇಲಾಖೆಯ ಸಬ್ಸಿಡಿ ಸದುಪಯೋಗಪಡಿಸಿಕೊಂಡು ನಾಲ್ಕು ಎಕರೆಯಲ್ಲಿ ಬೃಹತ್ ಘಟಕವನ್ನೇ ನಿರ್ಮಿಸಿದ್ದಾರೆ. ಅಲ್ಲದೇ ಇದ್ರಿಂದಾಗಿ ಸ್ಥಳೀಯ ಮಹಿಳೆ ಹಾಗೂ ಪುರುಷರು ಸೇರಿ 35 ನಿರುದ್ಯೋಗಿಗಳಿಗೆ ಉದ್ಯೋಗವು ದೊರೆತು ಅವರ ಬಾಳಿಗೂ ಬೆಳಕಾಗಿದೆ.


    ಹೆಚ್ಚಿದ ರೈತರ ಉತ್ಸುಕತೆ
    ಇನ್ನೂ ವಿಜಯಪುರ ಸೇರಿದಂತೆ ಹೊರರಾಜ್ಯಗಳಲ್ಲಿ ಬೆಳೆಯುವ ರೇಷ್ಮೆಯನ್ನು ದಲ್ಲಾಳಿಗಳ ಮೂಲಕ ರಾಮನಗರಕ್ಕೆ ಕಳಿಸಲಾಗ್ತಿತ್ತು. ದಲ್ಲಾಳಿ ಹಾಗೂ ಟ್ರಾನ್ಸ್​ಪೋರ್ಟ್ ವೆಚ್ಚ ಸೇರಿ ಬರುವ ಲಾಭ ಕಡಿಮೆಯಾಗ್ತಿತ್ತು. ಇದರಿಂದ ಹಲವು ರೈತರು ರೇಷ್ಮೆ ಬೆಳೆ ಬೆಳೆಯುವದನ್ನು ಕೈ ಬಿಟ್ಟಿದ್ರು. ಈಗ ವಿಜಯಪುರದಲ್ಲಿ ಘಟಕ ಆರಂಭಗೊಂಡ ಮೇಲೆ ಮತ್ತೆ ರೇಷ್ಮೆ ಬೆಳೆಯಲು ಈ ಭಾಗದ ರೈತರು ಉತ್ಸುಕತೆ ತೋರುತ್ತಿದ್ದಾರೆ.


    ಇದನ್ನೂ ಓದಿ: Positive Story: ಡ್ರ್ಯಾಗನ್ ಫ್ರುಟ್​ ಬೆಳೆದು ಲಕ್ಷಾಂತರ ರೂಪಾಯಿ ಜೇಬಿಗಿಳಿಸ್ತಿರೋ ವಿಜಯಪುರ ಕೃಷಿಕ!


    ವಿಜಯಪುರದಲ್ಲಿ ಸುಮಾರು ಒಂದು ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ರಾಮನಗರದಲ್ಲಿ ಸಿಗೋವಂತೆ ಪ್ರತಿ ಕೆಜಿಗೆ 700 ರೂಪಾಯಿಯಂತೆ ರೈತರಿಗೆ ನೀಡಲಾಗ್ತಿದೆ. ಪ್ರತಿದಿನ 5 ರಿಂದ 6 ಕ್ವಿಂಟಲ್ ರೇಷ್ಮೆಯನ್ನ ಈ ಘಟಕಕ್ಕೆ ಮಾರಾಡೋಕೆ ರೈತರು ತರ್ತಿದ್ದಾರೆ. ಇದ್ರಿಂದ ಅನಾವಶ್ಯಕವಾಗಿ ರೇಷ್ಮೆ ಹಾಳಾಗುವ ಆತಂಕವೂ ದೂರವಾಗಿದೆ. ರೈತರಿಗೆ ಸಿಗ್ತಿರೋ ಲಾಭಮೂರು ಪಟ್ಟು ಹೆಚ್ಚಾಗಿದ್ದು ಸಹಜವಾಗಿ ರೇಷ್ಮೆ ಬೆಳೆಗಾರರಲ್ಲಿ ಮಂದಹಾಸ ಮೂಡಿತ್ತಿದೆ.


    ಇದನ್ನೂ ಓದಿ: Banashankari Rathotsava: ಬನಶಂಕರಿ ದೇವಿಯ ವೈಭವದ ಜಾತ್ರೆಗೆ ಸಾಟಿಯೇ ಇಲ್ಲ! ನೀವೂ ನೋಡಿ


    ಒಟ್ಟಾರೆ ಸ್ಥಳೀಯ ಸ್ಟಾರ್ಟಪ್ ಒಂದರಿಂದ ವಿಜಯಪುರದ ರೇಷ್ಮೆ ಬೆಳೆಗಾರ ಜೇಬು ತುಂಬುತ್ತಿದೆ. ಹೆಚ್ಚೆಚ್ಚು ಆದಾಯ ಕೈಸೇರುತ್ತಿದೆ.


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: