• ಹೋಂ
  • »
  • ನ್ಯೂಸ್
  • »
  • ವಿಜಯಪುರ
  • »
  • Success Story: ವಿಜಯಪುರದಲ್ಲಿ ರಾಜಸ್ಥಾನಿ ಮಹಿಳೆಯ ಸಕ್ಸಸ್, ಚಿಪ್ಸ್‌-ಹಪ್ಪಳ ಮಾರ್ಕೆಟ್​ಗೆ ಇವ್ರೇ ಕ್ವೀನ್!

Success Story: ವಿಜಯಪುರದಲ್ಲಿ ರಾಜಸ್ಥಾನಿ ಮಹಿಳೆಯ ಸಕ್ಸಸ್, ಚಿಪ್ಸ್‌-ಹಪ್ಪಳ ಮಾರ್ಕೆಟ್​ಗೆ ಇವ್ರೇ ಕ್ವೀನ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಟ್ಟೆ ವ್ಯಾಪಾರಕ್ಕೆಂದು ರಾಜಸ್ಥಾನದಿಂದ ಬಂದ ಕುಟುಂಬವೊಂದು ಇದೀಗ ಕುರುಕಲು ತಿಂಡಿಗಳ ವ್ಯಾಪಾರದಲ್ಲಿ ಸೈ ಎನಿಸಿಕೊಂಡಿದೆ.

  • News18 Kannada
  • 4-MIN READ
  • Last Updated :
  • Bijapur, India
  • Share this:

ವಿಜಯಪುರ: ಸಂಡಿಗೆ, ಚಿಪ್ಸ್, ಹಪ್ಪಳ ಹೀಗೆ ಒಣಗಿಸಲು ಹಾಕಿರೋ ಕುರುಕಲು ತಿಂಡಿಗಳು. ಬಾಯಿಯ ರುಚಿ ಹೆಚ್ಚಿಸಬಲ್ಲ, ಸರ್ವ ಋತು ಕುರುಕಲು ತಿಂಡಿಗಳು ಇಲ್ಲಿ ಲಭ್ಯ. ಅಷ್ಟಕ್ಕೂ ದೂರದ ರಾಜಸ್ಥಾನದಿಂದ (Rajasthan) ಬಂದಿರೋ ಈ ಕುಟುಂಬ ಮೂಲ ಕಸುಬಿನ ಜೊತೆಗೆ ತಿಂಡಿ ತಯಾರಿಕೆಯಲ್ಲೂ (Rajasthan Chips In Vijauapura) ಸೈ ಎನಿಸಿಕೊಂಡಿದೆ. ಈ ಮೂಲಕ ವರ್ಷವಿಡೀ ಉತ್ತಮ ಆದಾಯದ ಸಂಪಾದನೆ ಮಾಡ್ತಿದೆ.


ಯೆಸ್, ಇದು ವಿಜಯಪುರದಲ್ಲಿ ನೆಲೆಸಿರುವ ರಾಜಸ್ಥಾನ ಮೂಲದ ಮಹಿಳೆಯ ಶ್ರಮದ ಫಲ. ನಿಜ ಹೇಳಬೇಕೆಂದರೆ ಇವ್ರದ್ದು ಬಟ್ಟೆ ವ್ಯಾಪಾರ ಮೂಲ ಕಸುಬು. ಅದಕ್ಕಾಗಿಯೇ ವಿಜಯಪುರ ಬಂದು ನೆಲೆಸಿದವರು. ಬೇಸಿಗೆ ಬಿಸಿಲು ಏರುತ್ತಿದ್ದಂತೆ ಈ ಕುಟುಂಬವು ಕುರುಕಲು ತಿಂಡಿಗಳ ತಯಾರಿಕೆ ಶುರು ಮಾಡುತ್ತೆ.




ಐದು ತಿಂಗಳ ಕಾಲ ತಿಂಡಿ ತಯಾರಿಕೆ
ಜನವರಿಯಿಂದ ಮೇವರೆಗೆ ಸಂಡಿಗೆ, ಹಪ್ಪಳ, ಚಿಪ್ಸ್ ತಯಾರಿಕೆಯಲ್ಲಿ ನಿರತವಾಗುತ್ತೆ. ಅಲ್ಲಿಂದ ಐದು ತಿಂಗಳ ಕಾಲ ಇವ್ರ ಮನೆ ಅಂಗಳದಲ್ಲಿ ರಾಜಸ್ಥಾನಿ ಶೈಲಿಯ ಚಿಪ್ಸ್, ಸಂಡಿಗೆ ಕಾಣಬಹುದಾಗಿದೆ. ರಾಜಸ್ಥಾನ ಮೂಲದ ಮಹಿಳೆ ರಿಂಕು ಭೋರಾಣ ಕುಟುಂಬವು ತಿಂಡಿಗಳಿಂದಾಗಿ ತಮ್ಮದೇ ಆದ ಮಾರುಕಟ್ಟೆಯನ್ನು ಕಟ್ಟಿಕೊಂಡಿದೆ. ಉಳಿದಂತೆ ಮೇ ನಂತರ ವರ್ಷಾಂತ್ಯದವರೆಗೆ ಇವ್ರು ಮತ್ತೆ ಬಟ್ಟೆ ವ್ಯಾಪಾರಕ್ಕೆ ಮರಳುತ್ತಾರೆ.


ರೇಟು ಕಡಿಮೆ, ಉತ್ತಮ ಗುಣಮಟ್ಟ
ಇಲ್ಲಿ ತಯಾರಿ ಮಾಡೋ ಯಾವುದೇ ತಿಂಡಿಗೂ ಕೆಮಿಕಲ್‌, ಬಣ್ಣ, ಟೇಸ್ಟಿಂಗ್ ಪೌಡರ್ ಬಳಸುವುದಿಲ್ಲ. ಸರಳವಾಗಿ ತಯಾರಿಸಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಾಡುತ್ತಾ ಬಂದಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 300 ರೂಪಾಯಿ ಕೊಟ್ಟು ಖರೀದಿಸುವ ಚಿಪ್ಸ್ ಇಲ್ಲಿ 200 ರೂಪಾಯಿಗೆ ಸಿಗುತ್ತೆ. ಇನ್ನು ಸಂಡಿಗೆ, ಹಪ್ಪಳವು ಅಷ್ಟೇ ಕಡಿಮೆ ರೇಟಲ್ಲಿ ದೊರೆಯುತ್ತೆ. ಹೀಗೆ ಈ ರಿಂಕು ಭೋರಾಣ ಅವರು ಒಂದು ತಿಂಗಳಲ್ಲಿ ಏನಿಲ್ಲ ಅಂದ್ರೂ 50 ಸಾವಿರಕ್ಕೂ ಹೆಚ್ಚು ಲಾಭವನ್ನ ಪಡೆಯುತ್ತಾರೆ.


ರಾಜಸ್ಥಾನಿ ಚಿಪ್ಸ್ ಮಾಡೋದು ಹೇಗೆ?
ನಮ್ಮ ನ್ಯೂಸ್ 18 ಕನ್ನಡ ಡಿಜಿಟಲ್ ವೀಕ್ಷಕರಿಗೆ ರಿಂಕು ಭೋರಾಣ ಅವರು ಸರಳವಾಗಿ ರಾಜಸ್ಥಾನ ಶೈಲಿಯ ಚಿಪ್ಸ್ ಹೇಗೆ ತಯಾರಿಸಬೇಕೆಂದು ತಿಳಿಸಿಕೊಟ್ಟಿದ್ದಾರೆ ನೋಡಿ.


ಇದನ್ನೂ ಓದಿ: Business Idea: ವೀಳ್ಯದೆಲೆ ಬೆಳೆದು ವರ್ಷಕ್ಕೆ 15 ಲಕ್ಷ ಸಂಪಾದನೆ! ವಿಜಯಪುರದ ಈ ರೈತನ ಸಕ್ಸಸ್ ಕಥೆ ಕೇಳಿ




ತಯಾರಿಸುವ ವಿಧಾನ ಹೀಗಿದೆ ನೋಡಿ
ಮೊದಲಿಗೆ 5-6 ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಸಿಪ್ಪೆ ತೆಗೆದು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಸ್ಲೈಸರ್​ನಿಂದ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.


ಬಳಿಕ ಎರಡು ಬಾರಿ ನೀರು ಬದಲಿಸಿ ಚೆನ್ನಾಗಿ ತೊಳೆದುಕೊಳ್ಳಿ. ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಗೂ ಉಪ್ಪು ಹಾಕಿಡಿ. ನೀರು ಕಾದ ಬಳಿಕ ಕತ್ತರಿಸಿಕೊಂಡ ಆಲೂಗಡ್ಡೆ ಚೂರುಗಳನ್ನು ಹಾಕಿ 2-3 ನಿಮಿಷ ಬೇಯಿಸಿಕೊಳ್ಳಿ. ತುಂಬಾ ಮೆತ್ತಗೆ ಆಗದಂತೆ ನೋಡಿಕೊಳ್ಳಿ. ನಂತರ ಬಿಸಿಲಿನಲ್ಲಿ 2-3 ದಿನ ಒಣಗಿಸಿಟ್ಟುಕೊಳ್ಳಿ. ಅಗತ್ಯವಿದ್ದಾಗ ಕಾದ ಎಣ್ಣೆಗೆ ಹಾಕಿ ಸವಿಯಬಹುದಾಗಿದೆ.


ಇದನ್ನೂ ಓದಿ: Rudreshwara: ಈ ಊರಿನ ಜನರು ಏನೇ ಆದ್ರೂ ಸುಳ್ಳು ಹೇಳಲ್ಲ!


ಹೀಗೆ ತಯಾರಿಸಿಯಿಟ್ಟ ಹಪ್ಪಳ ಮತ್ತು ಚಿಪ್ಸ್ ಎರಡ್ಮೂರು ವರ್ಷಗಳವರೆಗೂ ಹಾಳಾಗುವುದಿಲ್ಲವಂತೆ. ತಾಯಾರಿಸಿದ ಬಳಿಕ ಬಿಸಿಲಲ್ಲಿ ಒಣಗಿಸಿ ಪ್ಲಾಸ್ಟಿಕ್ ಡಬ್ಬ ಅಥವಾ ರಟ್ಟಿನ ಡಬ್ಬದಲ್ಲಿ ಸಂಗ್ರಹಿಸಿಡುವಂತೆ ಅವರು ಸಲಹೆಯನ್ನು ನೀಡ್ತಾರೆ.

top videos


    ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ, ವಿಜಯಪುರ

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು