Sapota Farmers: ರಸ್ತೆ ಬದಿ ಚಿಕ್ಕು ಮಾರಿ ಸಖತ್ ಆದಾಯ, ಈ ರೈತರ ಸಕ್ಸಸ್ ಸ್ಟೋರಿ ಕೇಳಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪಕ್ಕಾ ಸಾವಯವ ವಿಧಾನದಿಂದ ಬೆಳೆಯೋ ಈ ಚಿಕ್ಕುಗಳನ್ನು ನೇರವಾಗಿ ಜಮೀನಿನಿಂದ ಕಟಾವು ಮಾಡಿ ತಂದು ಮಾರಲಾಗುತ್ತಿದೆ.

  • News18 Kannada
  • 4-MIN READ
  • Last Updated :
  • Bijapur, India
  • Share this:

ವಿಜಯಪುರ: ರಸ್ತೆ ಪಕ್ಕನೇ ಇವ್ರ ಮಾರ್ಕೆಟ್‌, ಛತ್ರಿಯೋ, ಮರದ ಅಡಿಯಲ್ಲೋ ಇವ್ರ ಅಂಗಡಿ. ಕಂದು ಬಣ್ಣದಿಂದ ಕಂಡು ಬರೋ ರುಚಿ ರುಚಿಯಾದ ಸಪೋಟದ ವಹಿವಾಟು. ಯೆಸ್‌, ಸುಡು ಬಿಸಿಲಿನ ನಡುವೆಯೂ ರೈತರು ಚಿಕ್ಕು ಹಣ್ಣು (Sapota Farmers In Vijayapura) ಮಾರೋದರಲ್ಲಿ ನಿರತರಾಗಿದ್ರೆ, ಅಲ್ಲೇ ಪಕ್ಕದ ಹೈವೇಯಲ್ಲಿ ಸಾಗುತ್ತಿರುವವರೇ ಇವ್ರ ಕಸ್ಟಮರ್. ಮಧ್ಯವರ್ತಿಗಳ ಕಾಟವಿಲ್ಲದೇ ಅತೀ ಕಡಿಮೆಗೆ ಹಣ್ಣುಗಳ ಮಾರಾಟ ಮಾಡ್ತಾ ಉತ್ತಮ ಆದಾಯ ಗಳಿಸ್ತಿದ್ದಾರೆ ವಿಜಯಪುರದ (Vijayapura News)  ಚಿಕ್ಕು ಹಣ್ಣು ಬೆಳೆಗಾರರು.


ಯೆಸ್‌, ವಿಜಯಪುರದಲ್ಲಿ ಬೆಳೆಯಲಾಗುವ ಸಪೋಟಾ ಸಖತ್‌ ಟೇಸ್ಟಿ. ಅದ್ರಲ್ಲೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಮಾರೋ ಈ ಸಪೋಟಗಳಂತೂ ಇನ್ನೂ ಉತ್ತಮ ಗುಣಮಟ್ಟದ್ದು.




ಪಕ್ಕಾ ಸಾವಯವ ವಿಧಾನದಿಂದ ಬೆಳೆಯೋ ಈ ಚಿಕ್ಕುಗಳನ್ನು ನೇರವಾಗಿ ಜಮೀನಿನಿಂದ ಕಟಾವು ಮಾಡಿ ತಂದು ಮಾರಲಾಗುತ್ತಿದೆ. ಹಾಗಾಗಿ ಸಹಜವಾಗಿಯೇ ಇಲ್ಲಿಂದ ಹಾದುಹೋಗೋ ಜನರು ಬಾಯಲ್ಲಿ ನೀರೂರಿಸೋ ಈ ಸಪೋಟಕ್ಕೆ ಕರಗಿ ಖರೀದಿಸಿಕೊಂಡು ಮುಂದೆ ಸಾಗುತ್ತಾರೆ.


ಮಧ್ಯವರ್ತಿಯಿಲ್ಲದ ವ್ಯಾಪಾರ
ಹೀಗೆ ರಸ್ತೆ ಪಕ್ಕದಲ್ಲಿ ಮಾರಾಟ ಮಾಡೋ ಬೆಳೆಗಾರರ ಬಹುತೇಕ ಜಮೀನು ಅದೇ ರಸ್ತೆ ತಾಗಿಕೊಂಡಂತೆಯೇ ಇರ್ತದೆ. ಅಲ್ಲಿಂದ ಕಟಾವು ಮಾಡಿ ಯಾವುದೇ ಮಧ್ಯವರ್ತಿಯನ್ನು ಅವಲಂಬಿಸದೇ, ತಾವೇ ಖುದ್ದು ತಂದು ಮಾರಾಟ ಮಾಡುವುದು ಈ ಭಾಗದ ಸಪೋಟ ಬೆಳೆಗಾರರ ಆದಾಯ ಹೆಚ್ಚಿಸುವಂತೆ ಮಾಡಿದೆ.




ಕಡಿಮೆ ಬೆಲೆ
ಮೂಲತ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಯಡಹಳ್ಳಿ ಗ್ರಾಮದ ರೈತರಾದ ಸಿದ್ದಪ್ಪ ಮೆಟಗುಡ್ಡ ಅವರು ತಮ್ಮ ಗ್ರಾಮವನ್ನ ತೊರೆದು ಕೃಷಿ ಮಾಡುತ್ತ ವಿಜಯಪುರ ಜಿಲ್ಲೆಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ.


ಇದನ್ನೂ ಓದಿ: Success Story: ವಿಜಯಪುರದಲ್ಲಿ ರಾಜಸ್ಥಾನಿ ಮಹಿಳೆಯ ಸಕ್ಸಸ್, ಚಿಪ್ಸ್‌-ಹಪ್ಪಳ ಮಾರ್ಕೆಟ್​ಗೆ ಇವ್ರೇ ಕ್ವೀನ್!


ಈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಸ್ತೆಯ ಎರಡು ಬದಿಗೆ ಸಣ್ಣ ಸಣ್ಣ ಅಂಗಡಿಗಳನ್ನ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿ ದಿನಕ್ಕೆ ಇವರು ಅಂದಾಜು 200 ಕೇಜಿ ಹಣ್ಣುಗಳನ್ನ ಮಾರಾಟ ಮಾಡುತ್ತಾರೆ. ಇದೇ ಹಣ್ಣುಗಳನ್ನ ಮಾರುಕಟ್ಟೆಯಲ್ಲಿ ಖರೀದಿಸಿದ್ರೆ 60 ರೂಪಾಯಿಗೆ ಸಿಗುತ್ತದೆ. ಆದ್ರೆ ಇವರು ಪ್ರತಿ ಕೆಜಿಗೆ 25 ರೂ. ನಂತೆ ಮಾರಾಟ ಮಾಡ್ತಾರೆ.




ಸಾವಯವ ಸಪೋಟ
ಇನ್ನು ವಿಜಯಪುರ ಜಿಲ್ಲೆಯ ಮಣ್ಣು ಮತ್ತು ಹವಾಗುಣ ಸಪೋಟ ಬೆಳೆಗಳಿಗೆ ಬಹಳಷ್ಟು ಉಪಯುಕ್ತವಾಗಿದೆ. ಜೊತೆಗೆ ರೈತರು ಹಣ್ಣುಗಳನ್ನ ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿಯೇ ಬೆಳೆದು ತೋರಿಸಿದ್ದಾರೆ. ಮರದಿಂದ ಕಾಯಿಗಳನ್ನ ಕಿತ್ತು ಅವುಗಳನ್ನ ಮರದ ಕೆಳಗಡೆ ಗುಡ್ಡೆ ಹಾಕುತ್ತಾರೆ. ಅದಕ್ಕೆ ಬೇರೇನೆನ್ನೂ ಮಿಶ್ರಣ ಮಾಡದೇ, ಹಾಗೆಯೇ ನೈಸರ್ಗಿಕವಾಗಿ ಅದನ್ನ ಹಣ್ಣಾಗಿಸ್ತಾರೆ. ಅಲ್ಲಿಂದ ನೇರ ತಮ್ಮದೇ ಮಾರುಕಟ್ಟೆಗೆ ಸಾಗಾಟ ಮಾಡಿ ಮಾರಾಟ ಮಾಡ್ತಾರೆ.


ಇದನ್ನೂ ಓದಿ: Business Idea: ವೀಳ್ಯದೆಲೆ ಬೆಳೆದು ವರ್ಷಕ್ಕೆ 15 ಲಕ್ಷ ಸಂಪಾದನೆ! ವಿಜಯಪುರದ ಈ ರೈತನ ಸಕ್ಸಸ್ ಕಥೆ ಕೇಳಿ


ಹೀಗೆ ವಿಜಯಪುರದ ಹೈವೇ ಪಕ್ಕದಲ್ಲಿ ಮಾರೋ ಈ ಸಪೋಟಗಳು ಪಕ್ಕ ಸೂಪರ್‌ ಕ್ವಾಲಿಟಿ ಅನ್ನೋದರಲ್ಲಿ ಡೌಟಿಲ್ಲ. ಹಾಗಾಗಿ ನೀವೂ ಅಷ್ಟೇ ವಿಜಯಪುರ ಕಡೆ ಹೋದ್ರೆ ರಸ್ತೆ ಪಕ್ಕದಲ್ಲಿ ಈ ಚಿಕ್ಕುಗಳ ರಾಶಿ ಕಂಡ್ರೆ ಆಗ್ಲೇ ಖರೀದಿಸಿಬಿಡಿ.


ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ವಿಜಯಪುರ

First published: