Success Story: ಉತ್ತರ ಕರ್ನಾಟಕದ ಹಳ್ಳಿಯಲ್ಲೇ ಇದ್ದು ತಿಂಗಳಿಗೆ 50 ಸಾವಿರ ಆದಾಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸೇವಂತಿಗೆಯಂತೆ ಕಂಡರೂ ಈ ಹೂವು 5 ತಿಂಗಳ ಫಸಲು ನೀಡುವ ಬೆಳೆ. ಹಳದಿ ಮತ್ತು ಕೆಂಪು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಹೂವು ಬಿಡುವ ಈ ಪುಷ್ಪಕ್ಕೆ ಬಹು ಬೇಡಿಕೆ ಇದೆ.

  • Share this:

ವಿಜಯಪುರ: ನೋಡೋದಕ್ಕೆ ಸೇವಂತಿಗೆ ಅಂತೇ ಕಂಗೊಳಿಸೋ ಹೂವಿದು. ಬಿಸಿಲ ನಾಡಿನ ಸುಡು ಬಿಸಿಲಿಗೆ ಸವಾಲೊಡ್ಡಿದಂತೆ ನಳನಳಿಸುತ್ತಿರುವ ಪುಷ್ಪ ರಾಶಿ. ಗುಮ್ಮಟ ನಗರಿಯ (Vijayapura News) ರೈತರ ಸಾಧನೆಗೆ ಉತ್ತಮ ಫಸಲಿನ (Success Story) ಘಮಲು. ಜೊತೆಗೆ ಆದಾಯದ (Best Income) ಗಳಿಕೆಯೂ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.


ಯೆಸ್‌, ಬರದ ಜಿಲ್ಲೆಯೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ಗರಿಷ್ಠ ತಾಪಮಾನ ಇದೆ. ಆದರೂ ಈ ಅವಳಿ ಜಿಲ್ಲೆಯ ರೈತರು ಅದಕ್ಕೇನೂ ಕಡಿಮೆ ಇಲ್ಲದಂತೆ ಹೊಸ, ಹೊಸ ಆವಿಷ್ಕಾರಗಳನ್ನು ಬಳಸಿ ಕೃಷಿಯಲ್ಲಿ ಸಾಧನೆ ಮಾಡುತ್ತ ಸಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕೊಲ್ಹಾರ ತಾಲೂಕಿನ ತಡಲಗಿಯ ಯುವ ರೈತ ಮಹಾಂತೇಶ ಗಲಾಟಿ ಹೂವು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಉತ್ತಮ ಆದಾಯವೂ ಬರುತ್ತಿದ್ದು, ಗಲಾಟಿ ಹೂ ಬದುಕಿಗೂ ದಾರಿ ತೋರಿದೆ.




ಪುಷ್ಪ ಕ್ರಾಂತಿ ನಡೆಸಿದ ಯುವ ರೈತ
ಮಹಾಂತೇಶ ಅವರು ಈ ಹಿಂದೆ ಈರುಳ್ಳಿ ಬೆಳೆ ಬೆಳೆದು ಸರಿಯಾದ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದರು. ನಂತರ ತಮ್ಮ ಆಪ್ತರೊಬ್ಬರ ಸಲಹೆಯಂತೆ ಗಲಾಟಿ ಹೂ ಬೆಳೆಯಲು ಆರಂಭಿಸಿದರು. ತಮ್ಮ ಅರ್ಧ ಎಕರೆ ಕಲ್ಲು ಮಿಶ್ರಿತ ಬರಡು ಭೂಮಿಯಲ್ಲಿ ಸುಮಾರು 1 ಲಕ್ಷ ಖರ್ಚು ಮಾಡಿ ಕಾಲುವೆಯಿಂದ ಪೈಪ್ ಲೈನ್ ಮಾಡಿಸಿ ಜಮೀನಿಗೆ ನೀರು ತಂದು ಇದೇ ಭೂಮಿಯಲ್ಲಿ ಪುಷ್ಪ ಕೃಷಿ ಆರಂಭಿಸಿದರು.


ಇದನ್ನೂ ಓದಿ: Vijayapura: ಈ ಗ್ರಾಮದಲ್ಲಿ ದೇವರ ಫೋಟೋ ಮನೆಯಲ್ಲಿ ಇಡುವಂತಿಲ್ಲ!


ಹೇಗಿರುತ್ತೆ ರೇಟ್?‌
ಧಾರವಾಡ, ಮತ್ತು ಮಹಾರಾಷ್ಟ್ರದ ಸಾಂಗ್ಲಿಯಿಂದ ಈ ಗಲಾಟಿ ಸಸಿ ತಂದು ನಾಟಿ ಮಾಡಿದ್ರೂ, ಬರೋಬ್ಬರಿ 2 ತಿಂಗಳಲ್ಲಿ ಹೂವು ಬಿಡಲು ಆರಂಭವಾದ ಬಳಿಕ ವಿಜಯಪುರ ಮಾರುಕಟ್ಟೆಗೆ ಸಾಗಿಸಿ ನಿತ್ಯ ಹೂ ಮಾರಾಟ ಮಾಡುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಕೆಜಿ ಹೂವು 100 ರೂಪಾಯಿಗೆ ಮಾರಾಟವಾದರೆ, ಉಳಿದ ದಿನಗಳಲ್ಲಿ 30 ರೂಪಾಯಿಗೆ ಮಾರಾಟವಾಗುತ್ತೆ. ಏನೇ ಇದ್ರೂ, ತಿಂಗಳಿಗೆ ಸರಾಸರಿ 40 ರಿಂದ 50 ಸಾವಿರ ಆದಾಯ ಪಡೆಯುತ್ತಾರೆ.


ಇದನ್ನೂ ಓದಿ: Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ


ಅಲಂಕಾರಕ್ಕೆ ಹೇಳಿಟ್ಟ ಹೂ
ಸೇವಂತಿಗೆಯಂತೆ ಕಂಡರೂ ಈ ಹೂವು 5 ತಿಂಗಳ ಫಸಲು ನೀಡುವ ಬೆಳೆ. ಹಳದಿ ಮತ್ತು ಕೆಂಪು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಹೂವು ಬಿಡುವ ಈ ಪುಷ್ಪಕ್ಕೆ ಬಹು ಬೇಡಿಕೆ ಇದೆ. ದೇವರಿಗೆ, ಅಲಂಕಾರಕ್ಕೆ ಈ ಹೂಗಳನ್ನು ಬಳಸಲಾಗುತ್ತೆ. ಸದ್ಯ ಇದೇ ಹಾದಿಯಲ್ಲಿ ವಿಜಯಪುರ ಜಿಲ್ಲೆಯ ರೈತರು ಗಲಾಟಿ ಹೂವಿನ ಮೊರೆ ಹೋಗಿದ್ದಾರೆ. ಉತ್ತಮ ಆದಾಯದ ಜೊತೆಗೆ, ಉತ್ತಮ ಮಾರುಕಟ್ಟೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

top videos
    First published: