• Home
  • »
  • News
  • »
  • vijayapura
  • »
  • Positive Story: ಡ್ರ್ಯಾಗನ್ ಫ್ರುಟ್​ ಬೆಳೆದು ಲಕ್ಷಾಂತರ ರೂಪಾಯಿ ಜೇಬಿಗಿಳಿಸ್ತಿರೋ ವಿಜಯಪುರ ಕೃಷಿಕ!

Positive Story: ಡ್ರ್ಯಾಗನ್ ಫ್ರುಟ್​ ಬೆಳೆದು ಲಕ್ಷಾಂತರ ರೂಪಾಯಿ ಜೇಬಿಗಿಳಿಸ್ತಿರೋ ವಿಜಯಪುರ ಕೃಷಿಕ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವಿಜಯಪುರ ಡ್ರ್ಯಾಗನ್ ಫ್ರುಟ್

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಬರದ ನಾಡಲ್ಲಿ ಕೆಂಪು ಹಣ್ಣಿನ ಕ್ರಾಂತಿ. ಗುಮ್ಮಟ ನಗರಿಯಲ್ಲಿ ಕೃಷಿಕರ ಕೈ ಹಿಡಿಯಿತು ನೋಡಿ ವಿದೇಶಿ ತಳಿಯ ಹಣ್ಣು!  ಜೋಳ, ಮೆಕ್ಕೆಜೋಳ, ಗೋಧಿ, ತೊಗರಿ ಬೆಳೆಯ ಮಧ್ಯೆ ಮೈದಳೆದು ನಿಂತಿದೆ ಡ್ರ್ಯಾಗನ್ ಫ್ರುಟ್. ಒಣಭೂಮಿಯಲ್ಲಿ ಕಂಗೊಳಿಸುತ್ತಿರುವ ಕೆಂಪು ಹಣ್ಣಿನಿಂದ ಬಾಳೇ ಬಂಗಾರವಾದ ಪ್ರಗತಿಪರ ಕೃಷಿಕರ ಸಕ್ಸಸ್​ಫುಲ್ ಕಥೆಯಿದು! ವಿಜಯಪುರ ಜಿಲ್ಲೆಯಲ್ಲಿ (Vijayapura Success Story) ಜೋಳ, ಮೆಕ್ಕೆಜೋಳ, ಗೋಧಿ, ತೊಗರಿಯಂತಹ ಬೆಳೆಗಳನ್ನ ಮಾತ್ರ ಬೆಳೆಯಲಾಗ್ತಿತ್ತು. ಆದ್ರೆ ಇದರ ಮಧ್ಯೆ ಡ್ರ್ಯಾಗನ್ ಫ್ರುಟ್ (Dragon Fruit)ಬೆಳೆದು ಸಖತ್ ಸುದ್ದಿ ಮಾಡ್ತಿರೋ ಪ್ರಗತಿಪರ ಕೃಷಿಕ ಸದಾನಂದ ಹುಗ್ಗಿ ಭರ್ಜರಿ ಫಸಲು ತೆಗೆಯುತ್ತಿದ್ದಾರೆ. ನಿರೀಕ್ಷೆ ಮೀರಿ ಫಸಲು (Earn Money From Dragon Fruit) ಬಂದಿರೋದ್ರಿಂದ ಹುಗ್ಗಿಯವರು ಹುಗ್ಗಿಪಾಯಸ ಕುಡಿದಷ್ಟೇ ಖುಷಿಗೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಜೇಬಿಗಿಳಿಸುತ್ತಿದ್ದಾರೆ.


    ಹುಗ್ಗಿಯವರಿಗೆ ಹುಗ್ಗಿಪಾಯಸ ಕುಡಿದಷ್ಟೇ ಸಂತೋಷ!
    ತಮ್ಮ ಎರಡು ಎಕರೆ ಜಮೀನಿನಲ್ಲಿ ಅಚ್ಚುಕಟ್ಟಾಗಿ ಡ್ರ್ಯಾಗನ್ ಫ್ರುಟ್ ಕೃಷಿ ಮಾಡಿದ್ದಾರೆ ಕೃಷಿಕ ಸದಾನಂದ ಹುಗ್ಗ. ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ದೊರೆಯುತ್ತಿದೆ. ರೋಗ, ಕೀಟ ಬಾಧೆ ಇಲ್ಲದೆ ಡ್ರ್ಯಾಗನ್ ಫ್ರುಟ್ ಹೇಗೆ ಬೆಳೆಯಬಹುದು ಅನ್ನೋದನ್ನ ಕರಗತ ಮಾಡಿಕೊಂಡು ಕಡಿಮೆ ಖರ್ಚಲ್ಲಿ ಸಖತ್ ಬೆಳೆ ತೆಗೆಯುತ್ತಿದ್ದಾರೆ. ಕಡಿಮೆ ಸಕ್ಕರೆ ಅಂಶ, ಅಧಿಕ ಐರನ್, ಕ್ಯಾಲ್ಸಿಯಂ, ವಿಟಮಿನ್ ಹೊಂದಿರುವ ಈ ಹಣ್ಣಿಗೆ ಇರುವ ಬೇಡಿಕೆಯಿಂದ ಕೈತುಂಬಾ ಸಂಪಾದಿಸ್ತಿದ್ದಾರೆ.


    ಇದನ್ನೂ ಓದಿ: Startup Success Story: ಗಾಣದಿಂದ ಎಣ್ಣೆ ಉತ್ಪಾದಿಸೋ ಬಾಗಲಕೋಟೆಯ ಸ್ಟಾರ್ಟ್​ಅಪ್; ಸಾಂಪ್ರದಾಯಕ ಉದ್ಯಮಕ್ಕೆ ಆಧುನಿಕ ಟಚ್


    ಈ ಡ್ರ್ಯಾಗನ್ ಫ್ರುಟ್ ಬೆಳೆಯೋದು ಹೇಗಪ್ಪಾ ಅಂತಂದ್ರೆ, ಮೊದಲು ಕೃಷಿಭೂಮಿಯಲ್ಲಿ ಅರ್ಧ ಅಡಿ ಸುತ್ತಳತೆಯ ಗುಂಡಿ ತೆಗೆದು ಗಿಡವನ್ನ ಮಾಡಲಾಗುತ್ತವೆ. ಸಸಿ ನೆಟ್ಟು ಮೂರು ತಿಂಗಳ ನಂತರ ಆಧಾರಕ್ಕೆ ಸಿಮೆಂಟ್ ಕಂಬಗಳನ್ನು ನಿಲ್ಲಿಸಲಾಗುತ್ತೆ.


    ಬಂಗಾರದ ಫಲ ತೆಗೆಯೋಕೆ ಸಾಧ್ಯ
    ನಂತರ ಕಂಬದಲ್ಲಿರುವ ತಟ್ಟೆಯ ಮೇಲೆ ಅರಳಿದ ಎರಡು ಕವಲುಗಳನ್ನು ಮಾತ್ರ ಕತ್ತರಿಸದೆ ಹಾಗೆ ಬಿಡ್ತಾರೆ. ಹಣ್ಣು ನೆಲಕ್ಕೆ ಬೀಳುವುದನ್ನು ತಡೆಯಲು ಬಳ್ಳಿಯನ್ನು ಕಂಬಕ್ಕೆ ತಾಗಿ ಕಟ್ಟಬೇಕಾಗುತ್ತೆ. ಹೀಗೆ ಅತೀ ಸೂಕ್ಷ್ಮವಾಗಿ ಇದರ ಪಾಲನೆ ಮಾಡಿದರೆ ಬಂಗಾರದ ಫಲ ತೆಗೆಯೋಕೆ ಸಾಧ್ಯ ಅಂತಾರೆ ಸದಾನಂದ ಹುಗ್ಗಿಯವರು.


    ಇದನ್ನೂ ಓದಿ: Banashankari Rathotsava: ಬನಶಂಕರಿ ದೇವಿಯ ವೈಭವದ ಜಾತ್ರೆಗೆ ಸಾಟಿಯೇ ಇಲ್ಲ! ನೀವೂ ನೋಡಿ


    ಒಟ್ಟಿನಲ್ಲಿ ಕಪ್ಪು ನೆಲದಲ್ಲಿ ಡ್ರ್ಯಾಗನ್ ಎಂಬ ಕೆಂಪು ಹಣ್ಣಿನ ಕಂಪನ್ನು ಪಸರಿಸುತ್ತಿರುವ ಸದಾನಂದ ಹುಗ್ಗಿಯವರ ಕೃಷಿ ಪ್ರಯೋಗ ಇತರರಿಗೂ ಮಾದರಿಯಾಗ್ತಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: