ಬಾಗಲಕೋಟೆ: ಚಿಪ್ಸ್, ಹಪ್ಪಳ, ಕಡ್ಲೆಕಾಯಿ, ಕರ್ ಕುರ್ ಅನ್ನೋ ಬಗೆ ಬಗೆಯ ತಿನಿಸುಗಳು. ನಾಲಗೆ ರುಚಿ ಹೆಚ್ಚಿಸಬಹುದಾದ ಕರಿದ ತಿಂಡಿಗಳು. ವಿಶೇಷ ಅಂದ್ರೆ ಇಲ್ಲಿ ಚಿಪ್ಸ್ ಗಳ ವೆರೈಟಿ ನೋಡಿದ್ರೆ ಅಚ್ಚರಿಯಾಗುತ್ತೆ! ಬಗೆ ಬಗೆಯ ಹಪ್ಪಳಗಳು ಕೈ ಬೀಸಿ ಕರೆಯುತ್ತೆ. ಬಾಗಲಕೋಟೆಯ (Bagalakot News) ವಿದ್ಯಾಗಿರಿಯಲ್ಲಿರುವ ವಿನಾಯಕ ಹಾಟ್ ಚಿಪ್ಸ್ ಅಂಗಡಿ ಎಣ್ಣೆಯಲ್ಲಿ ಕರಿದ ಚಿಪ್ಸ್, ಹಪ್ಪಳಗಳಿಗೆ ಫೇಮಸ್. ಅದ್ರಲ್ಲೂ 15ಕ್ಕೂ ಹೆಚ್ಚು ಬಗೆ ಬಗೆಯ ಚಿಪ್ಸ್ಗಳು (Chips) ಸಿಗೋದು ಇಲ್ಲಿನ ವಿಶೇಷ.
ಇಲ್ಲಿ ಒಂದೇ ಸ್ಟಾಲ್ನಲ್ಲಿ ಇಂತಹ ವೆರೈಟಿ ವೆರೈಟಿ ಚಿಪ್ಸ್ಗಳು ಸಿಗೋದ್ರಿಂದ ಗ್ರಾಹಕರು ಆಕರ್ಷಿತರಾಗ್ತಾರೆ. ಹಲಸಿನ ಚಿಪ್ಸ್ ಇಲ್ಲಿಗೆ ಹೆಚ್ಚು ಫೇಮಸ್ ಆದ್ರೆ, ಆಲೂ, ಬಾಳೆಕಾಯಿ ಚಿಪ್ಸ್ಗಳು ಕೂಡಾ ಸಖತ್ ಡಿಮ್ಯಾಂಡ್ ಹೊಂದಿದೆ. ಕೇರಳ, ಹೊರನಾಡು, ಮಂಗಳೂರು, ಉಡುಪಿ ಭಾಗದಲ್ಲಿ ಸಿಗುವ ಚಿಪ್ಸ್ ಕೂಡಾ ಇಲ್ಲಿ ಪ್ರಸಿದ್ಧಿ ಪಡೆದಿದೆ.
ಮೂಲತಃ ತಮಿಳುನಾಡು ಮೂಲದವರಾದ ವಿಶ್ವನಾಥ್ ಅವ್ರೇ ಈ ಫೇಮಸ್ ಅಂಗಡಿ ಓನರ್. ಬಾಗಲಕೋಟೆ ನಗರದಲ್ಲಿ ಸುಮಾರು ಹದಿನೈದು ವರ್ಷಗಳ ಹಿಂದೆ ವಿನಾಯಕ ಹಾಟ್ ಚಿಪ್ಸ್ ಅಂಗಡಿ ತೆರೆದ ಇವ್ರು ಬಹುರಾಷ್ಟ್ರೀಯ ಕಂಪನಿಗಳಿಗೂ ಪೈಪೋಟಿ ನೀಡ್ತಿದ್ದಾರೆ.
ಇದನ್ನೂ ಓದಿ: Vijayapura: ಬಬಲಾದಿ ಮಠದ ಕೊರೊನಾ ಭವಿಷ್ಯ!
ಜೊತೆಗೆ ಇಲ್ಲಿ ಕಡಲೆ ಬೇಳೆ ಹಪ್ಪಳ, ಮೆಣಸಿನ ಹಪ್ಪಳ, ಹೆಸರು ಬೇಳೆ ಹಪ್ಪಳ, ಉದ್ದಿನ ಹಪ್ಪಳ ಹೀಗೆ ಹಲವಾರು ವಿಧದ ಕುರುಕಲು ತಿಂಡಿಗಳು ವಿನಾಯಕ ಹಾಟ್ ಚಿಪ್ಸ್ ಹಾಟ್ ಫೇವರೇಟ್ ತಿಂಡಿಗಳು.
ಇದನ್ನೂ ಓದಿ: Banashankari Temple: ಇವ್ರೇ ನೋಡಿ ಸಾಲುಮಂಟಪದ ಅನ್ನಪೂರ್ಣೇಶ್ವರಿಯರು!
ಚಳಿಗಾಲದಲ್ಲಂತೂ ಇಲ್ಲಿನ ಕುರುಕಲು ತಿಂಡಿಗಳಿಗೆ ಎಲ್ಲಿಲ್ಲದ ಬೇಡಿಕೆ. ಹಪ್ಪಳಗಳನ್ನ ಊಟದ ಜೊತೆ ನೆಚ್ಚಿಕೊಂಡರೆ, ಚಿಪ್ಸ್ಗಳನ್ನ ಟೀ ಜೊತೆಗೋ, ಮೂವಿ ನೋಡುವಾಗ ತಿನ್ನುತ್ತಲೇ ಟೈಂ ಪಾಸ್ ಮಾಡುತ್ತಾ ಸವಿಯುವ ಖುಷಿ ಇಲ್ಲಿನ ಮಂದಿಯದ್ದು.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ