kkಕಣ್ಣು ಹಾಯಿಸಿದಲ್ಲೆಲ್ಲ ಕೆಂಪೋ ಕೆಂಪು. ಮೆಣಸಿನಕಾಯಿಯ ಖಾರದ ಕಂಪು. ಹೀಗೆ ನೆಲದಲ್ಲಿ ನೆಲದಲ್ಲಿ ಕೂತು ಮೆಣಸಿನಕಾಯಿ ಆಯುತ್ತಿರೋ ಮಹಿಳೆಯರ ಮುಖದಲ್ಲಿ ಖುಷಿಯೋ ಖುಷಿ. ಯೆಸ್, ಖಾರ ಖಾರ ಮೆಣಸಿನಕಾಯಿ (Chilli Cultivation) ಸದ್ಯ ಬೆಳೆಗಾರರ ಪಾಲಿಗೆ ಸಿಹಿಯಾಗಿದೆ. ಯಾಕೆ ಅಂತೀರಾ? ಹೇಳ್ತೀವಿ ನೋಡಿ. ಬಾಗಲಕೋಟೆ ಜಿಲ್ಲೆಯ (Bagalakot News) ಈರುಳ್ಳಿ, ಜೋಳ ಕೃಷಿ ಬೆಳೆಗಾರರ ಬದುಕು (Success Story) ಬದಲಾಗೋದಕ್ಕೆ ಸಾಕ್ಷಿ ನುಡಿಯುತ್ತಿವೆ ಈ ಕೆಂಪು ಮೆಣಸುಗಳು.
ಹೌದು, ಬಾಗಲಕೋಟೆಯ ಹಳ್ಳೂರು ಗ್ರಾಮದ ಅನ್ನದಾತರು ಸತತ ಎರಡು ವರ್ಷಗಳಿಂದ ಕೃಷಿಯಲ್ಲಿ ನಷ್ಟವನ್ನ ಅನುಭವಿಸಿದ್ದರು. ಆದ್ರೆ ಈರುಳ್ಳಿ, ಜೋಳದ ಬದಲಾಗಿ ಗುಂಟೂರು ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ ಬೆಳೆದು ಭರಪೂರ ಬೆಳೆ ತೆಗೆದಿದ್ದಾರೆ.
ಕ್ವಿಂಟಲ್ಗೆ 50 ಸಾವಿರದವರೆಗೂ ದರ
ಜೊತೆಗೆ ಪ್ರತಿ ಕ್ವಿಂಟಾಲ್ ಮೆಣಸು ಅಂದಾಜು 50 ಸಾವಿರದವರೆಗೆ ರೈತರ ಜೇಬು ತುಂಬಿಸ್ತಿದೆ. ಇದರಿಂದ ರೈತರು ಈರುಳ್ಳಿ, ಜೋಳಕ್ಕೆ ಗುಡ್ ಬೈ ಹೇಳಿದ್ದು, ಮೆಣಸಿನಕಾಯಿಯ ಮೊರೆ ಹೋಗಿದ್ದಾರೆ.
ಈ ಭಾಗದ ರೈತರಿಗೆ ಖುಷಿಯೋ ಖುಷಿ
ಬಾಗಲಕೋಟೆ ತಾಲೂಕಿನ ಶಿರೂರ, ಬೆಣಕಟ್ಟಿ, ಭಗವತಿ, ಹಳ್ಳೂರು, ಅಚನೂರು ಸೇರಿದಂತೆ ನಾನಾ ಕಡೆಗಳಲ್ಲಿ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಪ್ರತಿ ಎಕರೆಗೆ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಮಾರುಕಟ್ಟೆ ಸಾಗಾಣಿಕೆ ವೆಚ್ಚ ಸೇರಿದಂತೆ ಹತ್ತರಿಂದ ಹದಿನೈದು ಸಾವಿರದವರೆಗೆ ಖರ್ಚಾಗುತ್ತದೆ.
ಇದನ್ನೂ ಓದಿ: Tagaru Kalaga: ಬಾಗಲಕೋಟೆಯಲ್ಲಿ ಮೈನವಿರೇಳಿಸಿದ ಟಗರು ಕಾಳಗ! ವಿಡಿಯೋ ನೋಡಿ
1 ಕ್ವಿಂಟಲ್ ಮೆಣಸಿಗೆ 1 ತೊಲ ಬಂಗಾರ!
ಪ್ರತಿ ಎಕರೆಗೆ ಅಂದಾಜು 1 ಲಕ್ಷ ರೂಪಾಯಿವರೆಗೆ ಲಾಭ ರೈತರ ಕೈಸೇರ್ತಿದೆ. ಅದರಲ್ಲೂ ಬ್ಯಾಡಗಿ ಮೆಣಸಿನಕಾಯಿಗೆ ಇದೀಗ ಬಂಗಾರದ ಬೆಲೆ ಬರುತ್ತಿದೆ. ಒಂದು ಕ್ವಿಂಟಲ್ ಮೆಣಸಿನಕಾಯಿ ದರ ಸುಮಾರು 1 ತೊಲ ಬಂಗಾರದ ದರಕ್ಕೆ ಸರಿಸಮ ಅನ್ನೋಮಟ್ಟಿಗೆ ಬೆಲೆ ಏರಿಕೆಯಾಗಿದೆ.
ಇದನ್ನೂ ಓದಿ: Real Singham: ಶಾಲಾ ಮಕ್ಕಳ ಪ್ರವಾಸದ ಬಸ್ ತಳ್ಳಿದ PSI, ಇವರೇ ನೋಡಿ ರಿಯಲ್ ಸಿಂಗಂ ಎಂದ ವಿದ್ಯಾರ್ಥಿಗಳು
ಒಟ್ಟಿನಲ್ಲಿ ಈ ಬಾರಿ ಮೆಣಸಿನಕಾಯಿ ಬೆಳೆಗಾರರಿಗೆ ವ್ಯಾಪಾರಸ್ಥರು ದಾಖಲೆಯ ದರವನ್ನು ನೀಡುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ