• Home
  • »
  • News
  • »
  • vijayapura
  • »
  • Subsidy For Taxi Car: ಟ್ಯಾಕ್ಸಿ ಕಾರ್ ಖರೀದಿ ಮಾಡೋಕೆ ಸಿಗುತ್ತೆ ಸಹಾಯಧನ! ಹೀಗೆ ಮಾಡಿ ಸಾಕು

Subsidy For Taxi Car: ಟ್ಯಾಕ್ಸಿ ಕಾರ್ ಖರೀದಿ ಮಾಡೋಕೆ ಸಿಗುತ್ತೆ ಸಹಾಯಧನ! ಹೀಗೆ ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಗುಲುವ ಒಟ್ಟು ವೆಚ್ಚದಲ್ಲಿ ಗರಿಷ್ಠ ರೂ. 2.00 ಲಕ್ಷಗಳ ಸಹಾಯಧನವನ್ನು ಸರ್ಕಾರವೇ ನೀಡುತ್ತದೆ. 

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಟ್ಯಾಕ್ಸಿ ಖರೀದಿಗೆ ಸಹಾಯಧನ (Subsidy For Taxi Car) ಒದಗಿಸುವ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಗುಲುವ ಒಟ್ಟು ವೆಚ್ಚದಲ್ಲಿ ಗರಿಷ್ಠ ರೂ. 2 ಲಕ್ಷಗಳ ಸಹಾಯಧನವನ್ನು ಸರ್ಕಾರವೇ ನೀಡುತ್ತದೆ.  ಶೇ.5 ರಷ್ಟು ಹಣವನ್ನು ಅಭ್ಯರ್ಥಿಯು ಭರಿಸಬೇಕಿದೆ. ಹಾಗೂ ಉಳಿದ ಮೊತ್ತವನ್ನು ರಾಷ್ಟ್ರೀಕೃತ ವಾಣಿಜ್ಯ/ಸಹಕಾರಿ ಬ್ಯಾಂಕುಗಳ ಮೂಲಕ ಸಾಲವನ್ನು (Bank Loan) ಫಲಾನುಭವ ಪಡೆದುಕೊಳ್ಳಬಹುದಾಗಿದೆ. ವಿಜಯಪುರ ಜಿಲ್ಲೆಯ ನಾಗರಿಕರೂ (Vijayapura News) ಸಹ ಈ ಯೋಜನೆಯ ಫಲಾನುಭವವನ್ನು ಪಡೆದುಕೊಳ್ಳಬಹುದಾಗಿದೆ. 

    ಸಹಾಯಧನದ ಹೆಸರುಟ್ಯಾಕ್ಸಿ ಖರೀದಿಗೆ ಅರ್ಜಿ
    ಸಹಾಯಧನದ ಮೊತ್ತ2 ಲಕ್ಷ
    ವಿಳಾಸಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬ್ಲಾಕ್ -1 ಪ್ರವಾಸಿ ಪ್ಲಾಜಾ, ಜಿಲ್ಲಾ ಕ್ರೀಡಾಂಗಣ ಎದುರುಗಡೆ ಇಂಡಿ ರಸ್ತೆ ವಿಜಯಪುರ
    ಕೊನೆಯ ದಿನಾಂಕ21-12-2022
    ದೂರವಾಣಿ ಸಂಖ್ಯೆ08352-250359

    ಜೇಷ್ಠತೆಯ ಆಧಾರದ ಮೇಲೆ ಆಯ್ಕೆ
    ಫಲಾನುಭವಿಗಳ ಆಯ್ಕೆಯಲ್ಲಿ ಅಭ್ಯರ್ಥಿಯ ವಯಸ್ಸು ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಪಡೆದ ಫಲಿತಾಂಶದ ಶೇಕಡಾವಾರು ಅಂಕವನ್ನು ಏರಿಕೆಯಿಂದ ಇಳಿಕ ಕ್ರಮದಲ್ಲಿ (Descending Order ) ಸಿದ್ದಪಡಿಸಿ ಜೇಷ್ಠತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.


    ಇದನ್ನೂ ಓದಿ: Vijayapura: ನಷ್ಟವಾಯ್ತೆಂದು ಎದೆಗುಂದಲಿಲ್ಲ ಈ ರೈತ, ಚೆಂಡು ಹೂವಿನಿಂದ ಗೊಬ್ಬರ!


    2013-14ನೇ ಸಾಲಿನಿಂದ 2017-18ನೇ ಸಾಲಿನಲ್ಲಿ ಹಿಂಬಾಕಿ ಉಳಿದ ಎಸ್.ಸಿ.ಪಿ-ಟಿ.ಎಸ್.ಪಿ, ಯೋಜನೆಯಡಿ ಪರಿಶಿಷ್ಟ ಜಾತಿಯ 12, ಪರಿಶಿಷ್ಟ ಪಂಗಡದ 5 ಸಾಮಾನ್ಯ ಯೋಜನೆಯಡಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ 12 ಯುವಕ-ಯುವತಿಯರಿಗೆ ಸಹಾಯಧನ ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿಲಾಗಿದೆ.


    ಈ ವಿಳಾಸಕ್ಕೆ ಅರ್ಜಿ ಸಲ್ಲಿಸಿ
    ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬ್ಲಾಕ್ -1 ಪ್ರವಾಸಿ ಪ್ಲಾಜಾ, ಜಿಲ್ಲಾ ಕ್ರೀಡಾಂಗಣ ಎದುರುಗಡೆ ಇಂಡಿ ರಸ್ತೆ ವಿಜಯಪುರ ಕಚೇರಿಯಿಂದ ಪಡೆದುಕೊಳ್ಳಬಹುದಾಗಿದೆ.


    ಇದನ್ನು ಓದಿ: Vijayapura: ಬಾಲಕನ ನೆರವಿಗೆ ನಿಂತ ಅಪ್ಪು ಫ್ಯಾನ್ಸ್; ಇವರು ಭೀಮಾತೀರದ ಹೃದಯವಂತರು!


    ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸದರಿ ಕಚೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 21-12-2022 ಕೊನೆಯ ದಿನವಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08352-250359 ಸಂಖ್ಯೆಗೆ ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: