• Home
  • »
  • News
  • »
  • vijayapura
  • »
  • Ilkal Saree Special: ಇಳಕಲ್ ಸೀರೆ ಹೀಗೆ ತಯಾರಾಗುತ್ತೆ! ನೀವೂ ಮಿರಮಿರ ಮಿಂಚಿ!

Ilkal Saree Special: ಇಳಕಲ್ ಸೀರೆ ಹೀಗೆ ತಯಾರಾಗುತ್ತೆ! ನೀವೂ ಮಿರಮಿರ ಮಿಂಚಿ!

ಇಳಕಲ್ ಸೀರೆ ಗರ್ದಿ ಗಮ್ಮತ್ತು!

"ಇಳಕಲ್ ಸೀರೆ ಗರ್ದಿ ಗಮ್ಮತ್ತು!"

ಯುವತಿಯರು, ಮಹಿಳೆಯರು ಎಷ್ಟೇ ಆಧುನಿಕತೆಗೆ ಮಾರುಹೋದರೂ ಇಳಕಲ್ ಸೀರೆ ಗುಳೇದಗುಡ್ಡ ಖಣ ಅಂದರೆ ಸಾಕು ಎಲ್ಲರೂ ತಿರುಗಿ ನೋಡ್ತಾರೆ!

  • Share this:

    ಬಾಗಲಕೋಟೆ: ಸಿದ್ಧ ಉಡುಪುಗಳು ಅದೆಷ್ಟೇ ಮಾರುಕಟ್ಟೆಯಲ್ಲಿ ವೈಭವ ತೋರಿದ್ರೂ, ಈ ಇಳಕಲ್ ಸೀರೆ, ಗುಳೇದಗುಡ್ಡದ ಖಣದ (Guledagudda Khana) ಮುಂದೆ ಅದ್ಯಾವುದೂ ಲೆಕ್ಕಕ್ಕಿಲ್ಲ. ಗರಿಗರಿಯಾದ ಈ ಇಳಕಲ್ ಸೀರೆಯಂತೂ (Ilkal Saree) ಹೆಣ್ಮಕ್ಕಳನ್ನ ತನ್ನತ್ತ ಆಯಸ್ಕಾಂತಕ್ಕಿಂತ ವೇಗವಾಗಿ ಸೆಳೆಯುತ್ತೆ. ಅದೆಂತಹ ಸೀರೆಗಳು ಕಣ್ಮುಂದೆ ಇದ್ರೂ ಈ ಇಳಕಲ್ ಸಾರಿ ನಾರಿಯರ ಫೇವರಿಟ್ ಆಗಿರುತ್ತೆ. ಈ ಸೀರೆಯನ್ನ ಧರಿಸಿ ಮಿರಮಿರ ಮಿಂಚಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯರ ಕನಸು ಕೂಡಾ.


    ನಿಜ, ಇಳಕಲ್ ಸೀರೆಗೆ ಶತಶತಮಾನಗಳಿಂದಲೂ ಬೇಡಿಕೆ ಹೆಚ್ತಾನೇ ಇದೆ. ದೇಶ ವಿದೇಶದಲ್ಲೂ ಈ ಅಂದ ಚೆಂದದ ಕಲರ್ ಫುಲ್ ಸಾರಿ ಧರಿಸಿದವರ ಸಂಖ್ಯೆ ಕಡಿಮೆಯದ್ದಲ್ಲ. ಯುವತಿಯರು, ಮಹಿಳೆಯರು ಎಷ್ಟೇ ಆಧುನಿಕತೆಗೆ ಮಾರುಹೋದರೂ ಇಳಕಲ್ ಸೀರೆ ಗುಳೇದಗುಡ್ಡ ಖಣ ಅಂದರೆ ಸಾಕು ಎಲ್ಲರೂ ತಿರುಗಿ ನೋಡ್ತಾರೆ. ಒಮ್ಮೆಯಾದರೂ ಅವುಗಳನ್ನು ಧರಿಸಬೇಕು ಅದರಲ್ಲೊಮ್ಮೆ ಮಿಂಚಬೇಕು ಎಂದು ಬಯಸುತ್ತಾರೆ.


    ಖಣಗಳ ಊರು ಅಂತನೇ ಫೇಮಸ್
    ಬಾಗಲಕೋಟೆ ನಗರದಿಂದ ಕೇವಲ 25 ಕಿಲೋಮೀಟರ್ ಅಂತರದಲ್ಲಿ ಗುಳೇದಗುಡ್ಡ ಪಟ್ಟಣ ಸಿಗುತ್ತೆ. ಈ ಊರಿಗೆ ಖಣಗಳ ಊರು ಅಂತಲೂ ಕರೆಯುವುದುಂಟು. ಇಲ್ಲಿನ ಜನರ ಮೂಲ ಉದ್ಯೋಗ ನೇಕಾರಿಕೆ. ಇದರ ಮೇಲೆಯೇ ಹೆಚ್ಚು ಜನರ ಜೀವನವೂ ಅವಲಂಬಿತವಾಗಿದೆ. ಈ ಪಟ್ಟಣದ ಯಾವುದೇ ರಸ್ತೆಗೆ ಹೋದ್ರೆ ಕೈಮಗ್ಗದ ಸಪ್ಪಳ ಕೇಳಿ ಬರುತ್ತೆ. ರಾಜ್ಯದಲ್ಲೇ ರೇಷ್ಮೆ ಖಣ ತಯಾರಿಸುವ ಏಕೈಕ ಪಟ್ಟಣ ಎಂಬ ಹೆಗ್ಗಳಿಕೆಗೂ ಈ ಗುಳೇದದಗುಡ್ಡ ಪಾತ್ರವಾಗಿದೆ.


    ಇದನ್ನೂ ಓದಿ: Best Waterfalls Uttara Karnataka: ಬಾಗಲಕೋಟೆಯ ಅದ್ಭುತ ಜಲಪಾತ! ಪ್ರಕೃತಿ ಸೌಂದರ್ಯದ ವೈಭವ


    20 ರಿಂದ 25 ಬಗೆಯ ಖಣ ಸಿಗುತ್ತೆ
    ಕೇವಲ ನೇಕಾರರು ಮಾತ್ರ ಕೈಮಗ್ಗ ಬಳಸದೆ ಇಲ್ಲಿನ ಮುಸ್ಲಿ ಸಮುದಾಯದ ಕುಶಲಕರ್ಮಿಗಳು ಸಹ ಕೈಮಗ್ಗನ್ನ ಬಳಸಿ ಖಣವನ್ನ ತಯಾರಿಸುವುದು ಇನ್ನೊಂದು ವಿಶೇಷ. ಕೋವಿಡ್ ಲಾಕ್​ಡೌನ್​ನಲ್ಲಿ ಸಂಕಷ್ಟ ಅನುಭವಿಸಿದ್ದ ಸೀರೆ ಮತ್ತು ಖಣಕ್ಕೆ ಮತ್ತೆ ಬೇಡಿಕೆ ಹೆಚ್ಚಿದೆ. ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಹಲವೆಡೆ ಬೇಡಿಕೆ ಹೆಚ್ಚಿದೆ. ಇನ್ನುಳಿದ ರಾಜ್ಯಗಳಲ್ಲಿ ಆಯಾ ಭಾಷೆ, ಸಂಪ್ರದಾಯಕ್ಕೆ ತಕ್ಕಂತೆ ಉಡುಪನ್ನ ತಯಾರಿಸುತ್ತಾರೆ. ಈ ಗುಳೇದಗುಡ್ಡ ಖಣದಲ್ಲಿ ಸದ್ಯ ಹೊಸ ಹೊಸ ಆವಿಷ್ಕಾರಗಳನ್ನ ಮಾಡಲಾಗಿದ್ದು 20 ರಿಂದ 25 ಬಗೆಯ ಖಣಗಳು ಸದ್ಯ ಮಾರಾಟಕ್ಕೆ ಸಿದ್ದವಾಗಿದೆ.


    ಇದನ್ನೂ ಓದಿ: Tulja Bhavani Darshan: ತುಳಜಾ ಭವಾನಿಯೇ ಈ ಯಾತ್ರಿಗಳ ಜೊತೆ ನಡೆಯುತ್ತಿದ್ದಾಳೆ!


    ಗ್ರಾಹಕರು ಬಟ್ಟೆ ಅಂಗಡಿಗಳಲ್ಲಿ ಸೀರೆ ಮತ್ತು ಖಣವನ್ನ ಖರೀದಿಸಿದರೆ ನೀವು ಹೆಚ್ಚು ಹಣವನ್ನ ಭರಿಸಬೇಕಾಗುತ್ತದೆ. ಈ ಪಟ್ಟಣದ ಅಂಗಡಿಗಳಲ್ಲಿ ಖರೀದಿಸಿದರೆ ಕಡಿಮೆ ಬೆಲೆಯಲ್ಲಿ ಸಿಗುತ್ತೆ. ಬೇರೆ ರಾಜ್ಯ, ಬೇರೆ ಬೇರೆ ಊರುಗಳಿಂದ ನೀವು Online ಮೂಲಕವೂ ಖರೀದಿಸಬಹುದು. ಅಥವಾ ಅವರ ಮೊಬೈಲ್ ಸಂಖ್ಯೆಗೆ ಕರೆಮಾಡಿ ಹಣ ಪಾವತಿಸಿ ನಿಮಗಿಷ್ಟವಾಗುವ ಬಟ್ಟೆಯನ್ನ ಖರೀದಿಸಬಹುದು.


    ಸಂಪತಕುಮಾರ ರಾಠಿ ಸಂಪರ್ಕ ಸಂಖ್ಯೆ 9448776400 ಗುಳೇದಗುಡ್ಡ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: