ವಿಜಯಪುರ: ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಡೇ೯ಕರ್ ಮಂಜಪ್ಪ, ತೋಂಟದ ಸಿದ್ದಲಿಂಗಶ್ರೀ, ಫ.ಗು.ಹಳಕಟ್ಟಿಯವರ ಕುರಿತು ವಿಶೇಷ ಕಾರ್ಯಕ್ರಮವೊಂದು ಆಯೋಜನೆಯಾಗಿದೆ. ಇದೇ ಫೆಬ್ರವರಿ 9 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ವಿಜಯಪುರದ (Vijayapura News) ಆಲಮಟ್ಟಿಯಲ್ಲಿ (Almatti) ನಡೆಯಲಿದೆ.
ಸ್ಥಳೀಯ SVV ಸಂಸ್ಥೆಯ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಕರುನಾಡ ಗಾಂಧಿ ಉತ್ಸವದ ಅಂಗವಾಗಿ ಶರಣ ಮಂಜಪ್ಪ ಹಡೇ೯ಕರ್, ಡಾ.ತೋಂಟದ ಸಿದ್ದಲಿಂಗ ಶ್ರೀ ಹಾಗೂ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ನೆರವೇರಲಿದೆ.
ಇದನ್ನೂ ಓದಿ: Anubhava Mantapa: ಅನುಭವ ಮಂಟಪದ ಹೊಸ ನೋಟವನ್ನು ನೀವೂ ಅನುಭವಿಸಿ!
ಒಂದೇ ಆವರಣದಲ್ಲಿ ಹಲವು ವಿಶೇಷ ಕಾರ್ಯಕ್ರಮ
ಸಂಸ್ಥೆಯ ಅಡಿಯಲ್ಲಿನ ಎಲ್ಲ ಶಾಲಾ,ಕಾಲೇಜುಗಳ ವಾಷಿ೯ಕ ಸ್ನೇಹ ಸಮ್ಮೇಳನದ ಕಲರವ ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ. ನೂತನವಾಗಿ ನಿರ್ಮಿಸಲಾದ ಶಿಕ್ಷಣ ತಜ್ಞ ಪ್ರಾ.ಶಿವಾನಂದ ಪಟ್ಟಣಶೆಟ್ಟರ ಸಭಾ ವೇದಿಕೆಯಲ್ಲಿ ಇವೆಲ್ಲ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಲಾಗಿದೆ. ಅಲ್ಲದೇ, ವಾಷಿ೯ಕ ಸ್ನೇಹ ಸಮ್ಮೇಳನದಲ್ಲಿ ಹಳೆಯ ಎಲ್ಲಾ ಶಾಲಾ ವಿದ್ಯಾರ್ಥಿಗಳು ಆಗಮಿಸುವಂತೆ ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: Vijayapura: ರೈತರಿಗೆ ವರದಾನವಾದ ಹೊಸ ತಳಿಯ ಜೋಳ!
ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರ ಜರುಗಲಿದೆ. ಆಗಮಿಸಿದ ಸಾರ್ವಜನಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಶಾಲಾ, ಕಾಲೇಜು ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ