ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಏಪ್ರಿಲ್ 1ರಿಂದ 13ರವರೆಗೆ ಜರುಗುವ ಬೆಳಗಾವಿ ಜಿಲ್ಲೆಯ ಸವದತ್ತಿ ಶ್ರೀ ಯಲ್ಲಮ್ಮದೇವಿ (Sri Yellamma devi Fair) ಹಾಗೂ ಬಾಗಲಕೋಟೆ ಜಿಲ್ಲೆಯ (Bagalakot News) ಬಾದಾಮಿಯ ಶ್ರೀ ಬನಶಂಕರಿದೇವಿ ಜಾತ್ರೆ (Badami Banashankari Devi Festival) ನಡೆಯಲಿದೆ. ಈ ಜಾತ್ರೆಯ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ವಿಶೇಷ ಬಸ್ಗಳನ್ನು (Special Bus) ಒದಗಿಸಲಾಗಿದೆ.
ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ವಿಜಯಪುರ ವಿಭಾಗದ ವಿಜಯಪುರ ಕೇಂದ್ರ ಬಸ್ ನಿಲ್ದಾಣ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟ, ಬಸವನಬಾಗೇವಾಡಿ ಹಾಗೂ ನಿಡಗುಂದಿ ಬಸ್ ನಿಲ್ದಾಣಗಳಿಂದ ವಿಶೇಷ ಬಸ್ಗಳನ್ನು ಒದಗಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Vijayapura: ಬಬಲಾದಿ ಮಠದ ಕೊರೊನಾ ಭವಿಷ್ಯ!
ಕೃಷಿಕರೇ ಗಮನಿಸಿ, ಜನವರಿ 1ರಿಂದ ಕೃಷಿ ಮೇಳ
ವಿಜಯಪುರ ನಗರದ ಹಿಟ್ನಳ್ಳಿ ಬಳಿ ಇರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜನವರಿ 1 ರಿಂದ 3ರವರೆಗೆ ಕೃಷಿ ಮೇಳ (Krishi Mela) ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯ ಧಾರವಾಡ-ವಿಜಯಪುರ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಈ ಕೃಷಿ ಮೇಳ ನಡೆಯಲಿದೆ. ಬರ, ನೆರೆ, ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟದಲ್ಲಿರುವ ಅನ್ನದಾತರಿಗೆ ಮಣ್ಣು, ನೀರು, ಪರಿಸರ ಸಂರಕ್ಷಣೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಬೆಳೆ ರಕ್ಷಣೆ ತಂತ್ರ ಹೇಳಿಕೊಡಲು ವಿಜಯಪುರದಲ್ಲಿ ನಡೆಯುವ ಕೃಷಿ ಮೇಳದ ವೇದಿಕೆಯಾಗಲಿದೆ.
ಇದನ್ನೂ ಓದಿ: Charaga Habba: ಉತ್ತರ ಕರ್ನಾಟಕದ ಈ ಹಬ್ಬಕ್ಕಿದೆಯಂತೆ ಮಹಾಭಾರತದ ಲಿಂಕ್!
ಹಲವು ರೈತರಿಗೆ ವರದಾನವಾಗುವ ನಿರೀಕ್ಷೆ
ವಿಜಯಪುರ ಜಿಲ್ಲೆಯಲ್ಲಿ ಸದ್ಯ ಹವಾಮಾನ ವೈಪರಿತ್ಯದಿಂದಾಗಿ ಜೋಳ, ಕಡಲೆ, ಈರುಳ್ಳಿ, ತೊಗರಿ, ಮೆಕ್ಕೆ ಜೋಳದ ಸೇರಿದಂತೆ ಹಲವಾರು ಬೆಳೆಗಳಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಕೃಷಿ ಮೇಳ ಉತ್ತರವಾಗಬಹುದು ಎಂಬ ನಿರೀಕ್ಷೆಯಿದೆ.
ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ